ಬೆಂಗಳೂರು: Hijab Controversy- ಹಿಜಾಬ್ ಪ್ರಕರಣ ದೊಡ್ಡ ವಿವಾದಕ್ಕೆ ತಿರುಗಿದ್ದು, ಅಂತರಾಷ್ಟ್ರೀಯ ಸಮುದಾಯವು ನಮ್ಮನ್ನು ಗಮನಿಸುತ್ತಿದೆ ಮತ್ತು ಇದು ಉತ್ತಮ ಬೆಳವಣಿಗೆಯಲ್ಲ (ಅಭಿವೃದ್ಧಿ ಅಥವಾ ಚಟುವಟಿಕೆ) ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದೆ. ಕೆಲವು ಕಾಲೇಜು ಕ್ಯಾಂಪಸ್‌ಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಭಾವನೆಗಳನ್ನು ಬದಿಗಿಟ್ಟು ಸಂವಿಧಾನದ ಹಾದಿಯಲ್ಲೇ ನಡೆಯಲಾಗುವುದು ಎಂದು ಹೇಳಿದೆ.
ಕರ್ನಾಟಕದಲ್ಲಿ ಮೂರು ದಿನಗಳವರೆಗೆ ಶಾಲಾ-ಕಾಲೇಜುಗಳು ಬಂದ್
ಏತನ್ಮಧ್ಯೆ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು, 'ನಾನು ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಮತ್ತು ಕರ್ನಾಟಕದ ಜನತೆಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಕಾಲ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲು ನಾನು ಆದೇಶಿಸಿದ್ದೇನೆ. ಸಂಬಂಧಪಟ್ಟವರೆಲ್ಲರ ಸಹಕಾರವನ್ನು ಕೋರುತ್ತೇನೆ' ಎಂದಿದ್ದಾರೆ.
I appeal to all the students, teachers and management of schools and colleges as well as people of karnataka to maintain peace and harmony. I have ordered closure of all high schools and colleges for next three days. All concerned are requested to cooperate.
— Basavaraj S Bommai (@BSBommai) February 8, 2022
ಹಿಜಾಬ್ ಧರಿಸುವುದು ಭಾವನಾತ್ಮಕ ವಿಷಯವಾಗಬಾರದು
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚ್ಚಾರಣೆ ನಡೆಸಿರುವ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅಧ್ಯಕ್ಷತೆಯ ಪೀಠ, ನಮ್ಮ ಪಾಲಿಗೆ ಸಂವಿಧಾನ ಭಗವದ್ಗೀತೆಯಾಗಿದೆ. ನಮಗೆ ಸಂವಿಧಾನಕ್ಕೆ ಅನುಗುಣವಾಗಿ ನಡೆಯಬೇಕಿದೆ. ನಾವು ಸಂವಿಧಾನದ ಶಪತ ತೆಗೆದುಕೊಂಡು ಈ ಸ್ಥಾನಕ್ಕೆ ಬಂದಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು ಪಕ್ಕಕ್ಕಿಡಬೇಕು. ಹಿಜಬ್ ವಿಷಯ ಭಾವನಾತ್ಮಕ ಪ್ರಕರಣವಾಗಬಾರದು ಎಂದು ಹೇಳಿದ್ದಾರೆ.
ಸಂಪೂರ್ಣ ವಾಟ್ಸ್ ಅಪ್ ನಲ್ಲಿ ಇದೆ ಚಾಟ್ ವಿಷಯ
ಇದೆ ಸಂದರ್ಭದಲ್ಲಿ ಹಲವು ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡಬೇಕಾಗಿರುವುದು ಗಮನಕ್ಕೆ ಬಂದಿದೆ ಎಂದ ಪೀಠವು, ‘‘ನಮಗೆ ಅಸಂಖ್ಯಾತ ಸಂಖ್ಯೆಗಳಿಂದ ಸಂದೇಶಗಳು ಬರುತ್ತಿವೆ. ಇಡೀ ವಾಟ್ಸಾಪ್ ಇದೆ ಚರ್ಚೆಯ ವಿಷಯವಾಗಿದೆ. ಸಂಸ್ಥೆಗಳು ಸಂವಿಧಾನದ ಪ್ರಕಾರ ಮಾತ್ರ ಕಾರ್ಯನಿರ್ವಹಿಸಲು ಸಾಧ್ಯ. ಸರ್ಕಾರ ಆದೇಶ ನೀಡಬಹುದು, ಆದರೆ ಜನರು ಪ್ರಶ್ನಿಸಬಹುದು" ಎಂದು ಹೇಳಿದೆ.
ಅಂದಾಜುಗಳ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ
ಇನ್ನೊಂದೆಡೆ ಕೇವಲ ಅಂದಾಜುಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಎರಡು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ಸರ್ಕಾರ ಒಪ್ಪದ ಕಾರಣ, ಅರ್ಹತೆಯ ಆಧಾರದ ಮೇಲೆ ಈ ವಿಷಯವನ್ನು ತೆಗೆದುಕೊಳ್ಳುತ್ತದೆ ಎಂದು ಪೀಠ ಹೇಳಿದೆ. ಪ್ರತಿಭಟನೆಗಳು ನಡೆಯುತ್ತಿವೆ ಮತ್ತು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ, ಈ ನಿಟ್ಟಿನಲ್ಲಿ ಎಲ್ಲಾ ಬೆಳವಣಿಗೆಗಳನ್ನು ನಾವು ಗಮನಿಸುತ್ತಿದ್ದೇನೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಸರ್ಕಾರ ಕುರಾನ್ ಗೆ ವಿರುದ್ಧವಾಗಿ ತೀರ್ಪು ನೀಡಲು ಸಾಧ್ಯವಿಲ್ಲ
ಸರ್ಕಾರವು ಕುರಾನ್ ವಿರುದ್ಧ ತೀರ್ಪು ನೀಡಲು ಸಾಧ್ಯವಿಲ್ಲ. ಇಷ್ಟದ ಉಡುಗೆ ತೊಡುವುದು ಮೂಲಭೂತ ಹಕ್ಕು. ಹಿಜಾಬ್ ಧರಿಸುವುದು ಮೂಲಭೂತ ಹಕ್ಕು, ಆದರೆ ಸರ್ಕಾರವು ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಬಹುದು. ಸಮವಸ್ತ್ರದ ಬಗ್ಗೆ ಸರಕಾರದಿಂದ ಸ್ಪಷ್ಟ ಆದೇಶ ಬಂದಿಲ್ಲ. ಹಿಜಾಬ್ ಧರಿಸುವುದು ಖಾಸಗಿತನದ ವಿಷಯ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶವು ಖಾಸಗಿತನದ ಮಿತಿಯನ್ನು ಉಲ್ಲಂಘಿಸುತ್ತದೆ ಎಂದು ಪೀಠ ಹೇಳಿದೆ.
ಕುರಾನ್ ನ ಯಾವ ಪುಟ ಹಿಜಾಬ್ ಅನಿವಾರ್ಯ ಎಂದು ಹೇಳುತ್ತದೆ?
ಇನ್ನೊಂದೆಡೆ ಕುರಾನ್‌ನ ಯಾವ ಪುಟದಲ್ಲಿ ಹಿಜಾಬ್ ಕಡ್ಡಾಯ ಎಂದು ಹೇಳುತ್ತದೆ ಎಂದೂ ಕೂಡ ಪೀಠವು ಅರ್ಜಿದಾರರನ್ನು ಪ್ರಶ್ನಿಸಿದೆ. ನ್ಯಾಯಾಲಯದ ಗ್ರಂಥಾಲಯದಿಂದ ಖುರಾನ್ ಪ್ರತಿಯನ್ನು ಸಹ ನ್ಯಾಯಾಧೀಶರು ಕೇಳಿದ್ದಾರೆ. ಅದನ್ನು ಎಲ್ಲಿ ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪವಿತ್ರ ಪುಸ್ತಕದಿಂದ ಓದಲು ಅರ್ಜಿದಾರರನ್ನು ಕೇಳಿದೆ. ಎಲ್ಲಾ ಸಂಪ್ರದಾಯಗಳು ಮೂಲಭೂತ ಆಚರಣೆಗಳು ಮತ್ತು ಅವುಗಳ ಅಧಿಕಾರ ವ್ಯಾಪ್ತಿ ಏನು ಎಂದು ಪೀಠವು ಪ್ರಶ್ನಿಸಿದೆ.
ಇದನ್ನೂ ಓದಿ-ರಾಜ್ಯದಲ್ಲಿನ ಹಿಜಾಬ್ ಅವಾಂತರಗಳಿಗೆ ಸಿದ್ದರಾಮಯ್ಯ ನೇರ ಹೊಣೆ: ಬಿಜೆಪಿ ಆರೋಪ
ಹಿಜಾಬ್ ಗೆ ಅನುಮತಿ ಏಕೆ ನೀಡಲಾಗದು?
ನಮಗೆ ಎಲ್ಲಾ ವಿಷಯಗಳ ಮೇಲೆ ಅಧ್ಯಯನ ನಡೆಸುವ ಅವಶ್ಯಕತೆ ಇದೆಯೇ ಎಂದು ಪೀಠ ಪ್ರಶ್ನಿಸಿದೆ. ಎರಡು ತಿಂಗಳು ಹಿಜಾಬ್ ಗೆ ಏಕೆ ಅವಕಾಶ ನೀಡಬಾರದು ಮತ್ತು ಸಮಸ್ಯೆ ಏನು ಎಂದು ಪೀಠ ಸರ್ಕಾರವನ್ನು ಪ್ರಶ್ನಿಸಿದೆ. ಇದೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ಧರ್ಮದ ವಿಷಯದಲ್ಲಿ ಮೂಲಭೂತವಲ್ಲದ ವಿಷಯಗಳಲ್ಲಿ ಮಾತ್ರ ಸರ್ಕಾರ ಮಧ್ಯಪ್ರವೇಶಿಸಬಹುದು ಎಂದು ಹೇಳಿದ್ದಾರೆ. ಮೂಲಭೂತವಾದ ವಿಷಯಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಅವರು ಪೀಠಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ-ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ, ಆನ್‌ಲೈನ್ ತರಗತಿ ಆರಂಭಿಸಿ: ಸಿದ್ದರಾಮಯ್ಯ
ಪರೀಕ್ಷೆಗಳು ಮುಗಿಯುವವರೆಗೆ ಅನುಮತಿ ನೀಡಬೇಕು
ತನ್ನ ವಾದಗಳನ್ನು ಮುಂದುವರೆಸಿದ ಅರ್ಜಿದಾರರ ಪರ ವಕೀಲರು, ಸರ್ಕಾರ ಪ್ರಕರಣದಲ್ಲಿ ಉದಾತ್ತತೆಯನ್ನು ಮೆರೆಯಬೇಕು. ಧರ್ಮ ನಿರಪೇಕ್ಷ ಆಧಾರದ ಮೇಲೆ ಪ್ರಕರಣವನ್ನು ಇತ್ಯರ್ಥಗೊಳಿಸಲು ಸಾಧ್ಯವಿಲ್ಲ. ಸಮವಸ್ತ್ರದ ಬಣ್ಣದ ಆಧಾರದ ಮೇಲೆ ಹಿಜಾಬ್ ಧರಿಸಲು ಸರ್ಕಾರ ಅನುಮತಿ ನೀಡಬೇಕು. ಅನುಮತಿ ಪಡೆಯಬೇಕು. ಪರೀಕ್ಷೆಗಳು ಮುಗಿಯುವವರೆಗೆ ಅನುಮತಿ ನೀಡಬೇಕು. ನಂತರ ಪ್ರಕರಣದ ಮೇಲೆ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ-'Divide And Rule ಇದು ಕಾಂಗ್ರೆಸ್ ನೀತಿ, ತುಕಡೆ-ತುಕಡೆ ಗ್ಯಾಂಗ್ ಗೆ ಲೀಡರ್ ಕಾಂಗ್ರೆಸ್ ಪಕ್ಷ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.