ಪಂಜಾಬ್: ಕರ್ತಾರ್‌ಪುರ ಕಾರಿಡಾರ್ ಮೂಲಕ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಉದ್ಘಾಟನಾ ಜಾಥಾ  ಹೋಗಲಿರುವ 575 ಯಾತ್ರಿಗಳ ಪಟ್ಟಿಯನ್ನು ಭಾರತ ಮಂಗಳವಾರ ಹಂಚಿಕೊಂಡಿದೆ. ಈ ಪಟ್ಟಿಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗುವ ಹಲವಾರು ಪ್ರಮುಖ ನಾಯಕರ ಹೆಸರುಗಳೂ ಇವೆ.


COMMERCIAL BREAK
SCROLL TO CONTINUE READING

ಈ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಹರ್ಸಿಮ್ರತ್ ಕೌರ್ ಬಾದಲ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಮತ್ತು ಇತರ ಪಂಜಾಬ್ ಸಂಸದರು-ಶಾಸಕರು ಭಾಗವಹಿಸಲಿದ್ದಾರೆ.


ದೀರ್ಘಾವಧಿಯ ಬೇಡಿಕೆಯಾಗಿದ್ದ ಕರ್ತಾರ್‌ಪುರ ಕಾರಿಡಾರ್ ಅನ್ನು ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ಎರಡೂ ದೇಶಗಳ ಯಾತ್ರಾರ್ಥಿಗಳಿಗಾಗಿ ಕಾರ್ಯಗತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವು.


ಗೃಹ ಸಚಿವಾಲಯವು ಸಹಿ ಮಾಡಿದ ಒಪ್ಪಂದದ ಪ್ರಕಾರ, ಎಲ್ಲಾ ನಂಬಿಕೆಯ ಭಾರತೀಯ ವ್ಯಕ್ತಿಗಳು ಈ ಸ್ಥಳಕ್ಕೆ ಭೇಟಿ ನೀಡಬಹುದು ಮತ್ತು ಪ್ರಯಾಣವು ವೀಸಾ ಮುಕ್ತವಾಗಿರುತ್ತದೆ. ಆದಾಗ್ಯೂ, ಒಪ್ಪಂದವು 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ ಮತ್ತು ಅದನ್ನು ಪರಸ್ಪರ ಒಪ್ಪಿಗೆಯಿಂದ ವಿಸ್ತರಿಸಬಹುದು.


ಕರ್ತಾರ್‌ಪುರ ಕಾರಿಡಾರ್ ಒಪ್ಪಂದವನ್ನು ಉಭಯ ದೇಶಗಳು ಒಂದು ತಿಂಗಳ ನೋಟಿಸ್ ನೀಡುವ ಮೂಲಕ ಕೊನೆಗೊಳಿಸಬಹುದು. ಒಪ್ಪಂದದ ನಿರಂತರ ಉಲ್ಲಂಘನೆ ಸಂಭವಿಸಿದಲ್ಲಿ ಕಾರಿಡಾರ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬಹುದು. ಯಾವುದೇ ರೀತಿಯ ಸಮಸ್ಯೆಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹರಿಸಲಾಗುತ್ತದೆ.


ಕಾರಿಡಾರ್ ಕರ್ತಾರ್‌ಪುರದ ದರ್ಬಾರ್ ಸಾಹಿಬ್ ಅನ್ನು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇವಾಲಯದೊಂದಿಗೆ ಸಂಪರ್ಕಿಸುತ್ತದೆ. ಕರ್ತಾರ್ಪುರ್ ಸಾಹಿಬ್ ಗುರುದ್ವಾರವನ್ನು 1522 ರಲ್ಲಿ ಸಿಖ್ ಸಂಸ್ಥಾಪಕ ಗುರುನಾನಕ್ ದೇವ್ ಸ್ಥಾಪಿಸಿದರು.


ಕರ್ತಾರ್‌ಪುರ ಕಾರಿಡಾರ್‌ನ ಭಾರತ ಭಾಗವನ್ನು ನವೆಂಬರ್ 9 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.