ನವದೆಹಲಿ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಶಾಕ್‌ ನೀಡಿದ್ದಾರೆ. ದೆಹಲಿ, ಕರ್ನಾಟಕ, ಮುಂಬೈ ಮತ್ತು ಚೆನ್ನೈನಲ್ಲಿರುವ ಮನೆ ಸೇರಿ ಒಟ್ಟು ಒಂಬತ್ತು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಈ ತನಿಖೆಯು 2010-14ರ ಅವಧಿಯಲ್ಲಿ ಕಾರ್ತಿ ಚಿದಂಬರಂ ಭಾಗಿಯಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಜತೆಗೆ ಚೀನಾದ ಪ್ರಜೆಗಳಿಗೆ ವೀಸಾ ಒದಗಿಸಲು ಅಕ್ರಮವಾಗಿ ಹಣ ಪಡೆದ ಆರೋಪ ಕಾರ್ತಿ ಮೇಲಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Weight Loss Tips: 40ರ ನಂತರ ತೂಕ ಇಳಿಸಲು ಇಲ್ಲಿವೆ ಸುಲಭ ಉಪಾಯ


ಈ ಎರಡು ಆರೋಪಗಳ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಸಭಾ ಸಂಸದ ಕಾರ್ತಿ ಮತ್ತು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಮನೆ ಮೇಲೆ ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿದೆ. 


ಮೂಲಗಳ ಪ್ರಕಾರ, ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಭಾರತೀಯ ವೀಸಾ ಪಡೆಯಲು ಸಹಾಯ ಮಾಡಲು ಕಾಂಗ್ರೆಸ್ ನಾಯಕ ಕಾರ್ತಿ 250 ಚೀನಿ ಪ್ರಜೆಗಳಿಂದ 50 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎನ್ನಲಾಗಿದೆ. 


ಇನ್ನು ಈಗಾಗಲೇ ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ ಹಾಗೂ ಅವರ ಮಗ ಸಂಸದ ಕಾರ್ತಿ ಚಿದಂಬರಂ ವಿರುದ್ಧ 2010-14ರ ಅವಧಿಯಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಕೇಸು ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐ ಇದೀಗ ಮತ್ತೆ ಚುರುಕುಗೊಳಿಸಿದೆ.


ಚಿದಂಬರಂ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ  305 ಕೋಟಿ ರೂ. ಮೊತ್ತದ ವಿದೇಶಿ ಹಣವನ್ನು ಸ್ವೀಕರಿಸುವುದಕ್ಕಾಗಿ ಐಎನ್‌ಎಕ್ಸ್ ಮೀಡಿಯಾಗೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ ಅನುಮತಿ ನೀಡಿದ ಪ್ರಕರಣವು ಇದಾಗಿದೆ. ಇದೇ ಪ್ರಕರಣ ಸಂಬಂಧ ಕಾರ್ತಿಯನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. 


ಕಾರ್ತಿ ಚಿದಂಬರಂ ಮತ್ತು ಐಎನ್‌ಎಕ್ಸ್‌ ಮೀಡಿಯಾ ಮಾಲೀಕರಾದ ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಪತಿ ಪೀಟರ್ ಮುಖರ್ಜಿ ಹೆಸರುಗಳನ್ನು ಸಿಬಿಐ ಉಲ್ಲೇಖಿಸಿದೆ. ಅಪರಾಧ ಸಂಚು, ವಂಚನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ಸಹ ದಾಖಲಿಸಲಾಗಿದೆ. ಸದ್ಯ ಶೀನಾ ಬೋರೆ ಹತ್ಯೆ ಪ್ರಕರಣದಲ್ಲಿ ಮುಖರ್ಜಿ ದಂಪತಿ ಜೈಲು ಕಂಬ ಎಣಿಸುತ್ತಿದ್ದಾರೆ. 


ಇದನ್ನು ಓದಿ: Kannada Actress Death: ಫ್ಯಾಟ್‌ ಸರ್ಜರಿ ವೇಳೆ ಕನ್ನಡದ ಖ್ಯಾತ ನಟಿ ನಿಧನ!


ಸಿಬಿಐ ಎಫ್‌ಐಆರ್‌ನಲ್ಲಿ ಏನಿತ್ತು: 
ಪಿ ಚಿದಂಬರಂ ಮತ್ತು ಕಾರ್ತಿ ವಿರುದ್ಧ ಸಿಬಿಐ ಈಗಾಗಲೇ ಎಫ್‌ಐಆರ್‌ ಸಿದ್ಧಪಡಿಸಿದೆ. ಇದರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಉಲ್ಲಂಘನೆ, ವಂಚನೆ ಮತ್ತು ಅಪರಾಧ ಸಂಚಿನ ಆರೋಪ ಹೊರಿಸಲಾಗಿದೆ.  ಪಿ.ಚಿದಂಬರಂ, ಐಎನ್‌ಎಕ್ಸ್‌ ಮೀಡಿಯಾ (ಪ್ರೈ) ಲಿ, ಅದರ ಮಾಜಿ ನಿರ್ದೇಶಕಿ ಇಂದ್ರಾಣಿ ಮುಖರ್ಜಿ, ಐಎನ್‌ಎಕ್ಸ್‌ ನ್ಯೂಸ್‌ (ಪ್ರೈ) ಲಿ., ಅದರ ಮಾಜಿ ನಿರ್ದೇಶಕ ಪೀಟರ್ ಮುಖರ್ಜಿ, ಕಾರ್ತಿ ಚಿದಂಬರಂ ಮಾಲಿಕತ್ವದ ಸಂಸ್ಥೆಯಾದ ಎಂ/ಎಸ್‌ ಚೆಸ್‌ ಮ್ಯಾನೇಜ್‌ಮೆಂಟ್‌ ಸರ್ವಿಸಸ್‌ (ಪ್ರೈ) ಲಿ. , ಎಂ/ಎಸ್‌ ಅಡ್ವಾಂಟೇಜ್‌ ಸ್ಟ್ರಾಟಜಿಕ್ ಕನ್ಸಲ್ಟಿಂಗ್‌ (ಪ್ರೈ) ಲಿ., ಅದರ ನಿರ್ದೇಶಕಿ ಪದ್ಮಾ ವಿಶ್ವನಾಥನ್‌ ಹಾಗೂ ಹಣಕಾಸು ಸಚಿವಾಲಯದ ಅಪರಿಚಿತ ಅಧಿಕಾರಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ' ಎಂದು ಸಿಬಿಐ ತಿಳಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.