ನವದೆಹಲಿ:  ಲೋಕಸಭಾ ಚುನಾವಣೆ ಮುಗಿಯುವ ಹಂತಕ್ಕೆ ಬಂದಿರುವ ಹಿನ್ನಲೆಯಲ್ಲಿ ಈಗ ಫೆಡರಲ್ ಒಕ್ಕೂಟ ರಚನೆಯ ಪ್ರಯತ್ನವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಈಗ ತೀವ್ರಗೊಳಿಸಿದ್ದಾರೆ. ಅದರ ಭಾಗವಾಗಿ ಈಗ ಅವರು ಹಲವಾರು ನಾಯಕರನ್ನು ಭೇಟಿ ಮಾತುಕತೆ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಈಗ ಸೋಮವಾರ ಸಂಜೆ ತಿರುವನಂತಪುರಂನಲ್ಲಿ ಪಿನರಾಯಿ ವಿಜಯನ್ ಅವರನ್ನು ಮೇ 13ರಂದು ಚೆನ್ನೈನ ನಿವಾಸದಲ್ಲಿ ಅವರು ಸ್ಟಾಲಿನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಹೇಳಿದೆ. ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೂ ಕೂಡ ಈ ವಿಚಾರವಾಗಿ ಚರ್ಚಿಸಲು ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಈ ಎಲ್ಲ ಭೇಟಿ ಮುಗಿಸಿದ ನಂತರ ವಾಪಾಸ್ ಆಗುವ ಮೊದಲು ರಾಮೇಶ್ವರಂ ಮತ್ತು ಶ್ರೀರಂಗಂ ದೇವಾಲಯಗಳನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.


ಇತ್ತೀಚೆಗೆ ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಸದಸ್ಯೆ ಕೆ. ಕವಿತಾ ಪ್ರಾದೇಶಿಕ ಪಕ್ಷಗಳು 120 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದ್ದರು.ಈ ನಿಟ್ಟಿನಲ್ಲಿ ಟಿ ಆರ್ ಎಸ್ ಪಕ್ಷವು ಈಗಾಗಲೇ ಫೆಡರಲ್ ಒಕ್ಕೂಟ ರಚನೆಗಾಗಿ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿದೆ ಎಂದರು.