ನವದೆಹಲಿ :  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ಅವರು ಮುನ್ಸಿಪಲ್ ಚುನಾವಣೆ  ಮುಂದೂಡಿಕೆಗೆ ಸಂಬಂಧಿಸಿದಂತೆ ಬಿಜೆಪಿ (BJP)ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸಿ ಬಿಜೆಪಿ ಗೆದ್ದರೆ ಆಮ್ ಆದ್ಮಿ ಪಕ್ಷ (Aam Aadmi Party)ರಾಜಕೀಯವನ್ನು ತೊರೆಯುವುದಾಗಿ ಕೇಜ್ರಿವಾಲ್ ಬಹಿರಂಗ ಸವಾಲು ಹಾಕಿದ್ದಾರೆ. ದೆಹಲಿ, ಉತ್ತರ, ಪೂರ್ವ ಮತ್ತು ದಕ್ಷಿಣದ ಮೂರು ನಾಗರಿಕ ಸಂಸ್ಥೆಗಳನ್ನು ಮೊದಲಿನಂತೆ ಒಗ್ಗೂಡಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ನಂತರ  ಅರವಿಂದ್ ಕೇಜ್ರಿವಾಲ್  ಈ ಹೇಳಿಕೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

 ರಾಜಕೀಯ ಬಿಡುತ್ತೇನೆ: ಅರವಿಂದ್ ಕೇಜ್ರಿವಾಲ್ :
"ಬಿಜೆಪಿ ಎಂಸಿಡಿ ಚುನಾವಣೆಗಳನ್ನು (MCD Elections) ಸಮಯಕ್ಕೆ ನಡೆಸಿ ಗೆದ್ದರೆ, ನಾವು (Aap) ರಾಜಕೀಯವನ್ನು ತೊರೆಯುತ್ತೇವೆ" ಎಂದು ಕೇಜ್ರಿವಾಲ್ ದೆಹಲಿ ವಿಧಾನಸಭೆಯ ಹೊರಗೆ  ತಿಳಿಸಿದ್ದಾರೆ. 


Z+ Security To Mango: ಮಾವಿನ ಹಣ್ಣಿಗೆ 'Z' ಪ್ಲಸ್ ಭದ್ರತೆ, ಏನಿದು ಹೊಸ ವಿಷಯ ಅಂತೀರಾ?


ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬಿಜೆಪಿ (BJP) ತನ್ನನ್ನು ತಾನು ಜಗತ್ತಿನ ಅತಿ ದೊಡ್ಡ ಪಕ್ಷ ಎಂದು ಕರೆದುಕೊಳ್ಳುತ್ತದೆ. ವಿಶ್ವದ ಅತಿ ದೊಡ್ಡ ಪಕ್ಷ ಚಿಕ್ಕ ಆಮ್ ಆದ್ಮಿ ಪಕ್ಷದಿಂದ ಭಯಭೀತಗೊಂಡು ಓಡಿ ಹೋಗುತ್ತಿದೆ. ಧೈರ್ಯವಿದ್ದರೆ ಸಮಯಕ್ಕೆ ಸರಿಯಾಗಿ ಎಂಸಿಡಿ ಚುನಾವಣೆ  ನಡೆಸಿ ಎಂದಿದ್ದಾರೆ. 


ಚುನಾವಣೆ ಮುಂದೂಡಿಕೆ ಹುತಾತ್ಮರಿಗೆ ಮಾಡುವ ಅವಮಾನ: ಕೇಜ್ರಿವಾಲ್
ಚುನಾವಣೆಯನ್ನು ಮುಂದೂಡಿರುವುದು ಹುತಾತ್ಮ ಯೋಧರಿಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್ (Aravind Kejriwal), 'ಬಿಜೆಪಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನು ಮುಂದೂಡಿರುವುದು ಬ್ರಿಟಿಷರನ್ನು ದೇಶದಿಂದ ಓಡಿಸುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ತ್ಯಾಗ ಮಾಡಿದ ಹುತಾತ್ಮರಿಗೆ ಮಾಡಿದ ಅವಮಾನವಾಗಿದೆ ಎಂದಿದ್ದಾರೆ. ಇಂದು ಸೋಲಿನ ಭಯದಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನು ಮುಂದೂಡುತ್ತಿದ್ದಾರೆ, ನಾಳೆ ರಾಜ್ಯಗಳ ಮತ್ತು ದೇಶದ ಚುನಾವಣೆಯನ್ನು ಮುಂದೂಡುತ್ತಾರೆ ಎಂದು ಕೇಜ್ರಿವಾಲ್ ಟೀಕಿಸಿದ್ದಾರೆ. 


ಇದನ್ನೂ ಓದಿ : ಹೈದರಾಬಾದ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ, 11 ಕಾರ್ಮಿಕರ ಸಜೀವ ದಹನ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.