ಹೈದರಾಬಾದ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ, 11 ಕಾರ್ಮಿಕರ ಸಜೀವ ದಹನ

ಬುಧವಾರ ಮುಂಜಾನೆ ಹೈದರಾಬಾದ್‌ನ ಭೋಯಿಗುಡಾ ಪ್ರದೇಶದ  ಗೋದಾಮಿನಲ್ಲಿ ಭಾರೀ  ಬೆಂಕಿ ಕಾಣಿಸಿಕೊಂಡು 11 ಜನರು ಸಾವನ್ನಪ್ಪಿದ್ದಾರೆ. ಅಪಘಾತದ ಸಮಯದಲ್ಲಿ ಇದ್ದ 12 ಜನರ ಪೈಕಿ ಒಬ್ಬರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.   

Written by - Ranjitha R K | Last Updated : Mar 23, 2022, 10:17 AM IST
  • ಬೆಂಕಿ ಅನಾಹುತಕ್ಕೆ ೧೧ ಜನ ಬಲಿ
  • ಗುಜರಿ ಸಾಮಾನುಗಳಿದ್ದ ಗೋದಾಮಿನಲ್ಲಿ ಕಾನಿಸಿಕೊಂಡ ಬೆಂಕಿ
  • ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹೈದರಾಬಾದ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ, 11 ಕಾರ್ಮಿಕರ ಸಜೀವ ದಹನ title=
ಬೆಂಕಿ ಅನಾಹುತಕ್ಕೆ ೧೧ ಜನ ಬಲಿ (Photo ANI)

ಹೈದರಾಬಾದ್ : ಬುಧವಾರ ಮುಂಜಾನೆ ಹೈದರಾಬಾದ್‌ನ ಹೈದರಾಬಾದ್‌ನ ಭೋಯಿಗುಡಾ ಪ್ರದೇಶದ  ಗುಜರಿ ಸಾಮಾನುಗಳಿದ್ದ ಗೋದಾಮಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ (Fire in Hyderabad). ಅವಘಡದಲ್ಲಿ 11 ಜನರು ಮೃತಪಟ್ಟಿದ್ದಾರೆ.  ಇದುವರೆಗೆ ೧೧ ಮಂದಿಯ ಮೃತದೇಹವನ್ನು ಹೊರ ತೆಗೆಯಲಾಗಿದೆ. ಅವಘಡದ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು,  ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. 

ಪೊಲೀಸ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಮುಸ್ತಫಾ ಪ್ರಕಾರ, ಗುಜರಿ ಸಾಮಾನುಗಳಿದ್ದ ಗೋದಾಮು ಇದಾಗಿದ್ದು, ಕೆಲವು  ಮರದ ವಸ್ತುಗಳು ಕೂಡಾ ಇದರಲ್ಲಿತ್ತು (Fire in Hyderabad). ಘಟನೆಯಲ್ಲಿ ಮೃತಪಟ್ಟವರೆಲ್ಲರೂ,  ಇದೇ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಇವರೆಲ್ಲಾ ಇಲ್ಲೇ ಮಲಗಿದ್ದರು.  ಬೆಂಕಿ ಅನಾಹುತಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ (Fire Accident). ಬೆಂಕಿ ಅವಘಡದಲ್ಲಿ ಗಾಯ ಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

 

ಇದನ್ನೂ ಓದಿ : Corona Vaccine For Children: Novovax ಕರೋನಾ ಲಸಿಕೆಗೆ DCGI ಅನುಮೋದನೆ

ಹೈದರಾಬಾದ್‌ನ ಭೋಯಿಗುಡಾದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಅಪಘಾತದ ವೇಳೆ ಅಲ್ಲಿದ್ದ 12 ಜನರ ಪೈಕಿ ಒಬ್ಬರನ್ನು ರಕ್ಷಿಸಲಾಗಿದೆ ಎಂದು ಗಾಂಧಿನಗರ ಎಸ್‌ಎಚ್‌ಒ ಮೋಹನ್ ರಾವ್ ತಿಳಿಸಿದ್ದಾರೆ.  ಬೆಂಕಿ ಅವಘಡದ ಮಾಹಿತಿ ಲಭಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಡಿಆರ್‌ಎಫ್‌ (DRF) ತಂಡ ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಬೆಂಕಿಗೆ ಶಾಕ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ : ಭಾರತದಲ್ಲೂ ಕರೋನಾ ವೈರಸ್ ಹೊಸ ರೂಪಾಂತರ ; ಈ ರಾಜ್ಯಗಳಲ್ಲಿ ಪತ್ತೆಯಾಯಿತು ಡೆಲ್ಟಾಕ್ರಾನ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News