BJP On Kejriwal: ಇತರರನ್ನು ಭ್ರಷ್ಟರು ಎಂದು ಕರೆಯುವ ಕೇಜ್ರಿವಾಲ್ ಅವರೇ ಇಂದು ತುಂಬಾ ದೊಡ್ಡ ಕರಪ್ಟ್ ಆಗಿದ್ದಾರೆ
BJP Vs AAP: ಯಾರನ್ನು ಕೇಜ್ರಿವಾಲ್ ಅವರು ಭ್ರಷ್ಟಾಚಾರದ ಪ್ರತಿಮೂರ್ತಿಗಳು ಎಂದು ಭಾವಿಸುತ್ತಿದ್ದರೋ, ಇಂದು ಆ ಜನರ ಜೊತೆಗೆ ಕೇಜ್ರಿವಾಲ್ ನಿಂತಿರುವುದು ಕಂಡುಬರುತ್ತಿದೆ ಎಂದು ಈಶಾನ್ಯ ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಆರೋಪಿಸಿದ್ದಾರೆ. ಇದ್ದಕ್ಕಿದ್ದಂತೆ ಕೇಜ್ರಿವಾಲ್ ಅವರು ಆ ಭ್ರಷ್ಟರ ಜೊತೆಗೆ ಒಡನಾಟ ಬೆಳೆಸುವುದು ಆಶ್ಚರ್ಯ ಹುಟ್ಟಿಸುವಂತಿದೆ ಎಂದು ಅವರು ಹೇಳಿದ್ದಾರೆ.
Delhi BJP VS AAP: ದೆಹಲಿಯ ಎಲ್ಲಾ ಏಳು ಸಂಸದರು ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಅಧಿಕಾರಿಗಳ ನೇಮಕಾತಿ-ಪೋಸ್ಟಿಂಗ್‌ಗಾಗಿ ಕೇಂದ್ರ ಸರ್ಕಾರ ಶುಕ್ರವಾರ ರಾತ್ರಿ ಸುಗ್ರೀವಾಜ್ಞೆಯನ್ನು ಹೊರಡಿಸಿದೆ, ಅದರಲ್ಲಿ ಎಲ್ಲಾ ಅಧಿಕಾರಗಳನ್ನು ಮತ್ತೆ ಲೆಫ್ಟಿನೆಂಟ್ ಗವರ್ನರ್‌ಗೆ ನೀಡಲಾಗಿದೆ. ಈ ಸುಗ್ರೀವಾಜ್ಞೆಯಿಂದಾಗಿ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಹಗ್ಗಜಗಾಟದ ಪರಿಸ್ಥಿತಿ ಸೃಷ್ಟಿಯಾಗಿದೆ.
ಈ ಕುರಿತು ಮಾತನಾಡಿರುವ ಈಶಾನ್ಯ ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ, ಯಾರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭ್ರಷ್ಟಾಚಾರದ ಪ್ರತಿಮೂರ್ತಿಗಳು ಎಂದು ಭಾವಿಸುತ್ತಿದ್ದರೋ, ಇಂದು ಆ ಜನರ ಜೊತೆಗೆ ಕೇಜ್ರಿವಾಲ್ ನಿಂತಿರುವುದು ಕಂಡುಬರುತ್ತಿದೆ ಎಂದು ಈಶಾನ್ಯ ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಆರೋಪಿಸಿದ್ದಾರೆ. ಇದ್ದಕ್ಕಿದ್ದಂತೆ ಕೇಜ್ರಿವಾಲ್ ಅವರು ಆ ಭ್ರಷ್ಟರ ಜೊತೆಗೆ ಒಡನಾಟ ಬೆಳೆಸುವುದು ಆಶ್ಚರ್ಯ ಹುಟ್ಟಿಸುವಂತಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಸೋಲಿಸಲು ನಾನು ಅವರ ಜೊತೆಗಿರಲಿದ್ದೇನೆ ಎಂದು ಅವರು ಹೇಳಿದ್ದಾರೆ. ಇತರರನ್ನು ಭ್ರಷ್ಟರೆಂದು ಕರೆದ ಅರವಿಂದ್ ಕೇಜ್ರಿವಾಲ್ ಅವರೇ ದೊಡ್ಡ ಭ್ರಷ್ಟರು ಎಂಬುದನ್ನು ಜನರು ಅರ್ಥಮಾಡಿಕೊಂಡಿದ್ದಾರೆ ಎಂದು ಮನೋಜ್ ತಿವಾರಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಭ್ರಷ್ಟಾಚಾರದ ಕೆಲಸ ಮುಂದುವರೆಸುವುದು ಅವರ ಏಕೈಕ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Nitish Meets Kejriwal: ಒಂದೇ ತಿಂಗಳಿನಲ್ಲಿ 2ನೇ ಬಾರಿಗೆ ದೆಹಲಿ ಸಿಎಂ ಕೆಜ್ರಿವಾಲ್ ಅವರನ್ನು ಭೇಟಿಯಾದ ನಿತೀಶ್
ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಭಾನುವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಅವರ ದೆಹಲಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಹಿನ್ನೆಲೆ ಬಿಜೆಪಿಯ ಈ ಆರೋಪ ಕೇಳಿ ಬಂದಿದೆ ಎಂಬುದು ಇಲ್ಲಿ ಗಮನಾರ್ಹ. ಕರ್ನಾಟಕದಲ್ಲಿ ಹೊಸ ಕಾಂಗ್ರೆಸ್ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ ಒಂದು ದಿನದ ನಂತರ ನಿತೀಶ್ ಅವರು ಭಾನುವಾರ ದೆಹಲಿಯ ಕೇಜ್ರಿವಾಲ್ ಅವರ ಮನೆಗೆ ತಲುಪಿದ್ದಾರೆ.
ಇದನ್ನೂ ಓದಿ-Mehbooba Mufti: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಮರುಸ್ಥಾಪನೆಯಾಗುವವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ
ಮತ್ತೊಂದೆಡೆ, ಈ ಕುರಿತು ಮಾತನಾಡಿರುವ ಸಂಸದ ಡಾ.ಹರ್ಷವರ್ಧನ್, ದೆಹಲಿಯಲ್ಲಿ 20 ವರ್ಷಗಳಿಂದ ಇದೇ ಕಾನೂನು ಇದೆ, 20 ವರ್ಷಗಳವರೆಗೆ ಸರ್ಕಾರ ನಡೆಸಿದ್ದೇವೆ, ಆದರೆ 20 ವರ್ಷಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ನಡುವೆ ಹೊಡೆದಾಟ ನಡೆದ ಒಂದೇ ಒಂದು ಘಟನೆ ನಡೆದಿಲ್ಲ. ಆದರೆ ಅರವಿಂದ್ ಕೇಜ್ರಿವಾಲ್ ಸರ್ಕಾರ, ಸುಪ್ರೀಂ ಕೋರ್ಟ್‌ನ ಆದೇಶ ಬಂದ ನಂತರ, ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ತೆಗೆದುಹಾಕುವ ಕೆಲಸವನ್ನು ಆರಂಭಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯವನ್ನು ತೀರಾ ಕೀಳು ಮಟ್ಟಕ್ಕೆ ಇಳಿಸಿದ್ದಾರೆ ಮತ್ತು ಅವರ ನಡವಳಿಕೆಯು ಅತ್ಯಂತ ಕೀಳು ಮಟ್ಟಕ್ಕೆ ತಲುಪಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ