ಕೇಂದ್ರ ಸರ್ಕಾರದ ಕೃಷಿ ಮಸೂದೆಗೆ `ಸೆಡ್ಡು ಹೊಡೆದ` ಕೇರಳ ಸರ್ಕಾರ!
ರೈತರ ವಿರೋಧ ಹೊಂದಿರುವ ಕೃಷಿ ಮಸೂದೆಯನ್ನ ನಮ್ಮ ರಾಜ್ಯದಲ್ಲಿ ಜಾರಿಗೆ ತರೋದಿಲ್ಲ ಹಾಗೂ ಈ ವಾರವೇ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ
ಕೇರಳ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ವಿರುದ್ಧ ಕೇರಳ ಸರ್ಕಾರ ತೊಡೆ ತಟ್ಟಿದೆ.
ರೈತರ ವಿರೋಧ ಹೊಂದಿರುವ ಕೃಷಿ ಮಸೂದೆ(Agriculture Amendment)ಯನ್ನ ನಮ್ಮ ರಾಜ್ಯದಲ್ಲಿ ಜಾರಿಗೆ ತರೋದಿಲ್ಲ ಹಾಗೂ ಈ ವಾರವೇ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಅಂತಾ ಕೇರಳ ಕೃಷಿ ಸಚಿವ ವಿ.ಎಸ್. ಸುನೀಲ್ ಕುಮಾರ್ ತ್ರಿಶೂರ್ನಲ್ಲಿ ಹೇಳಿದ್ದಾರೆ.
Jio 5G: ಜಿಯೋ ಮೂಲಕ ನಾವು ಸ್ವಾವಲಂಬಿ ಭಾರತದ ಕನಸನ್ನು ಈಡೇರಿಸುತ್ತೇವೆ- ಮುಖೇಶ್ ಅಂಬಾನಿ
ಕೇರಳದಲ್ಲಿ ನಾವು ಕೃಷಿ ಕಾನೂನುಗಳನ್ನ ಜಾರಿಗೆ ತರೋದಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಸಹ ಅದನ್ನ ಎದುರಿಸೋಕೆ ರಾಜ್ಯ ಸರ್ಕಾರ ಸಿದ್ಧವಾಗಿದೆ. ಕೇಂದ್ರದ ಈ ಕಾನೂನು ರಾಜ್ಯ ಸರ್ಕಾರಗಳ ಅಧಿಕಾರ ಕಸಿದುಕೊಳ್ಳುವುದಕ್ಕೆ ಪೂರಕವಾಗಿದೆ. ಈ ಕಾನೂನುಗಳ ವಿರುದ್ಧ ನಾವು ಈ ವಾರವೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಅಂತಾ ಸುನೀಲ್ ಕುಮಾರ್ ಗುಡುಗಿದ್ದಾರೆ.