ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಅರೆಸ್ಟ್ ಮಾಡಿದ ದೆಹಲಿ ಪೊಲೀಸರು!

ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಿದ ದೆಹಲಿ ಪೊಲೀಸರು

Last Updated : Dec 8, 2020, 12:16 PM IST
  • ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಿದ ದೆಹಲಿ ಪೊಲೀಸರು
  • ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ದೆಹಲಿ ಪೊಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಂಗ್ಯೂ ಬಾರ್ಡರ್ ನಲ್ಲಿ ರೈತರನ್ನು ಭೇಟಿ ಮಾಡಿದ ನಂತರ ಗೃಹ ಬಂಧನದಲ್ಲಿ
  • ಸಿಎಂ ನಿವಾಸದತ್ತ ನಾವೆಲ್ಲರೂ ಪಾದಯಾತ್ರೆ ನಡೆಸಿ, ಮುಖ್ಯಮಂತ್ರಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು
ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಅರೆಸ್ಟ್ ಮಾಡಿದ ದೆಹಲಿ ಪೊಲೀಸರು! title=

ನವದೆಹಲಿ: ದೆಹಲಿ ಪೊಲೀಸರು ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ (AAP) ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ವಕ್ತಾರ ಸೌರಭ್ ಭಾರದ್ವಾಜ್, ದೆಹಲಿ ಪೊಲೀಸರು ಕೇಜ್ರೀವಾಲ್ ಅವರನ್ನು ಗೃಹಬಂಧನದಲ್ಲಿಇರಿಸಿದೆ. ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ದೆಹಲಿ ಪೊಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಂಗ್ಯೂ ಬಾರ್ಡರ್ ನಲ್ಲಿ ರೈತರನ್ನು ಭೇಟಿ ಮಾಡಿದ ನಂತರ ಗೃಹ ಬಂಧನದಲ್ಲಿರಿಸಲಾಗಿದೆ. ಅವರ ನಿವಾಸಕ್ಕೆ ತೆರಳಲು ಅಥವಾ ಒಳಗೆ ಹೋಗಲು ಯಾರಿಗೂ ಅನುಮತಿ ನೀಡಿಲ್ಲ. ಭಾರಿ ಬ್ಯಾರಿಕೇಡ್ ಗಳಿದ್ದು, ಮನೆ ಕೆಲಸದಾಳು ಕೂಡ ಮನೆಯೊಳಗೆ ಪ್ರವೇಶ ನೀಡುತ್ತಿಲ್ಲ' ಎಂದು ಅವರು ಆರೋಪಿಸಿದರು.

ಕೋಟ್ಯಾಧಿಪತಿಯಾಗಬೇಕೆ? ನಿತ್ಯ ಕೇವಲ ರೂ.30 ಉಳಿತಾಯ ಮಾಡಿ ಸಾಕು

ಸಿಎಂ ನಿವಾಸದತ್ತ ನಾವೆಲ್ಲರೂ ಪಾದಯಾತ್ರೆ ನಡೆಸಿ, ಮುಖ್ಯಮಂತ್ರಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ನಿನ್ನೆ ಸಿಂಗು ಬಾರ್ಡರ್ ನಲ್ಲಿ ರೈತರನ್ನು ಭೇಟಿ ಮಾಡಿದ ನಂತರ ದೆಹಲಿ ಪೊಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಟ್ವೀಟ್ ಮಾಡಿದೆ.

ESIC ಫಲಾನುಭವಿಗಳಿಗೆ ಗುಡ್ ನ್ಯೂಸ್

 

Trending News