ತ್ರಿಶೂರ್:  ಈ ಕರೋನಾ ಯುಗದಲ್ಲಿ ಮಾಸ್ಕ್ ಧರಿಸಿ ಬೇರೆಯವರೊಂದಿಗೆ ಸಂವಹನ ನಡೆಸುವುದು ಬಹಳ ಕಷ್ಟಕರ ಸಂಗತಿ. ಈ ಸಂದರ್ಭದಲ್ಲಿ ಮಾಸ್ಕ್ ಕೂಡ ಮೈಕ್ ಹೊಂದಿದ್ದರೆ ಹೇಗಿರುತ್ತೆ ಅಲ್ವಾ...! ತ್ರಿಶೂರ್‌ನ ಪ್ರಥಮ ವರ್ಷದ ಬಿ ಟೆಕ್ ವಿದ್ಯಾರ್ಥಿ ಕೆವಿನ್ ಜಾಕೋಬ್ (Kevin Jacob) ಕರೋನಾ ಸಾಂಕ್ರಾಮಿಕದ ನಡುವೆ ಸಂವಹನವನ್ನು ಸುಲಭಗೊಳಿಸಲು ಮೈಕ್ ಮತ್ತು ಸ್ಪೀಕರ್‌ನೊಂದಿಗೆ ಮಾಸ್ಕ್ ಅನ್ನು ವಿನ್ಯಾಸಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಮೈಕ್ ಮತ್ತು ಸ್ಪೀಕರ್ ಹೊಂದಿರುವ ಮಾಸ್ಕ್ ವಿನ್ಯಾಸಗೊಳಿಸಿದ ಕೆವಿನ್ ಜಾಕೋಬ್:
ಕೇರಳದ ತ್ರಿಶೂರ್‌ನ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಕೆವಿನ್ ಜಾಕೋಬ್ (19) ನವೀನ ರೀತಿಯ ಮಾಸ್ಕ್ (Mask) ಹೊಂದಿದ್ದು, ಅದು ಅಂತರ್ನಿರ್ಮಿತ ಸ್ಪೀಕರ್ ಮತ್ತು ಆಂಪ್ಲಿಫೈಯರ್ ಅನ್ನು ಹೊಂದಿದೆ, ಇದನ್ನು ಅವರು 8 ನೇ ತರಗತಿಯಲ್ಲಿ ಆವಿಷ್ಕರಿಸಿದ 3 ಡಿ-ಪ್ರಿಂಟರ್ ಬಳಸಿ ತಯಾರಿಸಿದ್ದಾರೆ ಎಂದು ತಿಳಿದುಬಂದಿದೆ.


ಅಲೋಪತಿ ಔಷಧಿ ಕುರಿತ ರಾಮ್ ದೇವ್ ಹೇಳಿಕೆ ಹಿಂಪಡೆಯಲು ಕೇಂದ್ರ ಸಚಿವ ಹರ್ಷವರ್ಧನ್ ಆಗ್ರಹ


ಅಕ್ಟೋಬರ್ 2020 ರಲ್ಲಿ, ಕೆವಿನ್ ಜಾಕೋಬ್ (Kevin Jacob) ಮೈಕ್ ಮತ್ತು ಸ್ಪೀಕರ್‌ಗಳನ್ನು ಅಳವಡಿಸಿರುವ ಮಾಸ್ಕ್ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮಾಸ್ಕ್ ಧರಿಸುವುದರಿಂದ ಯಾವುದೇ ವ್ಯಕ್ತಿ ತನ್ನ ಧ್ವನಿಯನ್ನು ಏರಿಸದೆ ಸುಲಭವಾಗಿ ಮಾತನಾಡಿದರೂ ಅದು ಎದುರಿರುವ ವ್ಯಕ್ತಿಗೆ ಸ್ಪಷ್ಟವಾಗಿ ಕೇಳಿಸುತ್ತದೆ ಎನ್ನಲಾಗಿದೆ.


ತಮ್ಮ ಈ ನವೀನ ಮಾಸ್ಕ್ ಬಗ್ಗೆ ಪ್ರತಿಕ್ರಿಯಿಸಿರುವ ಕೆವಿನ್ ಜಾಕೋಬ್ (19) "ನನ್ನ ಪೋಷಕರು ವೈದ್ಯರು ಮತ್ತು ಕೋವಿಡ್ -19 (COVID-19) ಪ್ರಾರಂಭವಾದಾಗಿನಿಂದ ಅವರು ತಮ್ಮ ರೋಗಿಗಳೊಂದಿಗೆ ಸಂವಹನ ನಡೆಸಲು ಹೆಣಗಾಡುತ್ತಿದ್ದಾರೆ" ಈ ಸಂದರ್ಭದಲ್ಲಿ ನನಗೆ ಈ ಆಲೋಚನೆ ಬಂದಿದೆ ಎಂದಿದ್ದಾರೆ.


Corona Death: ವರದಿಯಾಗಿರುವುದು ಕೆಲವೇ ಅಂಕಿ-ಅಂಶ, ವಾಸ್ತವಿಕ ಸಂಖ್ಯೆ ದ್ವಿಗುಣವಾಗಿರಬಹುದು- WHO


ಮಾಸ್ಕ್ ಮತ್ತು ಫೇಸ್ ಶೀಲ್ಡ್ ಮೂಲಕ ಸ್ಪಷ್ಟವಾಗಿ ಸಂವಹನ ಮಾಡುವುದು ನನ್ನ ಪೋಷಕರಿಗೆ ಕಷ್ಟಕರವಾಗಿತ್ತು. ಅವರನ್ನು ನೋಡಿದಾಗ, ನನಗೆ ಈ ಆಲೋಚನೆ ಬಂದಿತು. ದಕ್ಷಿಣ ಭಾರತದಾದ್ಯಂತ ವೈದ್ಯರು ಬಳಸುತ್ತಿರುವ 50 ಕ್ಕೂ ಹೆಚ್ಚು ಸಾಧನಗಳನ್ನು ನಾನು ತಯಾರಿಸಿದ್ದೇನೆ ಎಂದು ಬಿ ಟೆಕ್ ವಿದ್ಯಾರ್ಥಿ ಕೆವಿನ್ ಜಾಕೋಬ್ ಮಾಹಿತಿ ನೀಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.