ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ (ಮೇ 23) ಅಲೋಪತಿ ಔಷಧಿಗಳ ಬಗ್ಗೆ ಯೋಗ ಗುರು ರಾಮದೇವ್ ಅವರ ಹೇಳಿಕೆಯನ್ನು ಅತ್ಯಂತ ದುರದೃಷ್ಟಕರ ಎಂದು ಕರೆದಿರುವುದಲ್ಲದೆ ಮತ್ತು ಅದನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು.
ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ವಿಡಿಯೋವೊಂದನ್ನು ಉಲ್ಲೇಖಿಸಿ, ಭಾರತೀಯ ವೈದ್ಯಕೀಯ ಸಂಘವು ರಾಮದೇವ್ ಅವರು ಅಲೋಪತಿ ಒಂದು ಸ್ಟುಪಿಡ್ ಸೈನ್ಸ್ ಎಂದು ಹೇಳಿಕೊಂಡಿದ್ದಾರೆ ಮತ್ತು ರೆಮ್ಡೆಸಿವಿರ್, ಫೆವಿಫ್ಲೂ ಮತ್ತು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಅನುಮೋದಿಸಿದ ಇತರ ಔಷಧಿಗಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲವಾಗಿವೆ ಎಂದು ಹೇಳಿದ್ದಾರೆ.
ಇದನ್ನು ಓದಿ- ರಷ್ಯಾದ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಫಿಜರ್, ಮಾಡರ್ನಾ ಗಿಂತಲೂ ಅಗ್ಗ...
'ಅಲೋಪತಿ ಔಷಧಿಗಳನ್ನು ತೆಗೆದುಕೊಂಡ ನಂತರ ಲಕ್ಷಾಂತರ ರೋಗಿಗಳು ಸಾವನ್ನಪ್ಪಿದ್ದಾರೆ' ಎನ್ನುವ ಬಾಬಾ ರಾಮ ದೇವ್ ಅವರ ಹೇಳಿಕೆಯನ್ನು ವೈದ್ಯರ ಸಂಸ್ಥೆಯೂ ಉಲ್ಲೇಖಿಸಿದೆ.ಆದರೆ ಈ ಹೇಳಿಕೆಗಳನ್ನು ಹರಿದ್ವಾರ ಮೂಲದ ಪತಂಜಲಿ ಯೋಗಪೀಠ ಟ್ರಸ್ಟ್ 'ಸುಳ್ಳು' ಎಂದು ನಿರಾಕರಿಸಿದೆ.
ರಾಮದೇವ್ ಅವರಿಗೆ ಬರೆದ ಪತ್ರದಲ್ಲಿ ಹರ್ಷವರ್ಧನ್ ಅವರು ಅಲೋಪತಿ ಕುರಿತ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು."ಈ ಹೇಳಿಕೆಯು COVID ಯೋಧರನ್ನು ಅಗೌರವಗೊಳಿಸುತ್ತದೆ ಮತ್ತು ದೇಶದ ಭಾವನೆಗಳನ್ನು ಘಾಸಿಗೊಳಿಸುತ್ತದೆ. ಅಲೋಪತಿ ಕುರಿತ ನಿಮ್ಮ ಹೇಳಿಕೆಯು ಆರೋಗ್ಯ ಕಾರ್ಯಕರ್ತರ ಸ್ಥೈರ್ಯವನ್ನು ಒಡೆಯಬಹುದು ಮತ್ತು Coronavirus ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತದೆ" ಎಂದು ಅವರು ಹೇಳಿದರು.
ಅಲೋಪತಿ ಔಷಧಿಗಳು ಕೋಟಿಯ ಜೀವವನ್ನು ಉಳಿಸಿವೆ ಎಂದು ಹರ್ಷವರ್ಧನ್ ಹೇಳಿದ್ದಾರೆ ಮತ್ತು ಇದು ಲಕ್ಷಾಂತರ ಸಾವಿಗೆ ಕಾರಣವಾಗಿದೆ ಎಂಬುದು 'ಅತ್ಯಂತ ದುರದೃಷ್ಟಕರ' ಎಂದು ಹೇಳಿದರು.
ಇದನ್ನು ಓದಿ- Coronavirus ಸಂಕಷ್ಟದ ನಡುವೆಯೇ ಭರವಸೆಯ ಹೇಳಿಕೆ ನೀಡಿದ AstraZeneca
"ಬಾಬಾ ರಾಮದೇವ್, ನೀವು ಸಾರ್ವಜನಿಕ ವ್ಯಕ್ತಿ ಮತ್ತು ನಿಮ್ಮ ಹೇಳಿಕೆಯು ಮೌಲ್ಯವನ್ನು ಹೊಂದಿದೆ. ಸಮಯ ಮತ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ನೀವು ಯಾವುದೇ ವಿಷಯದ ಬಗ್ಗೆ ಹೇಳಿಕೆಗಳನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ. ನೀವು ಅದರ ಬಗ್ಗೆ ಗಂಭೀರವಾಗಿ ಮತ್ತು ಕರೋನಾ ಯೋಧರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ .
ಜನರ ಭಾವನೆಗಳನ್ನು ಸಮಾಧಾನಪಡಿಸಲು ರಾಮದೇವ್ ನೀಡಿದ ವಿವರಣೆಯು ಸಾಕಾಗುವುದಿಲ್ಲ ಎಂದು ಹೇಳಿದರು"ನಿಮ್ಮ ವಿವರಣೆಯಲ್ಲಿ, ನಿಮ್ಮ ಮನೋಭಾವವು ಆಧುನಿಕ ವಿಜ್ಞಾನ ಮತ್ತು ವೈದ್ಯರನ್ನು ನೋಯಿಸುವುದಿಲ್ಲ ಎಂದು ನೀವು ಹೇಳಿದ್ದೀರಿ. ನಿಮ್ಮ ವಿವರಣೆಯು ಸಾಕು ಎಂದು ನಾನು ಭಾವಿಸುವುದಿಲ್ಲ" ಎಂದು ಹರ್ಷವರ್ಧನ ಹೇಳಿದರು.
ಇದನ್ನು ಓದಿ- Coronavirus ಸಂಕಷ್ಟದ ನಡುವೆಯೇ ಭರವಸೆಯ ಹೇಳಿಕೆ ನೀಡಿದ AstraZeneca
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದುಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.