ನವದೆಹಲಿ: ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡುವ ಕೇಂದ್ರದ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಕೇರಳದ ಎಡಪಂಥೀಯ ಸರ್ಕಾರವು ಪ್ರಶ್ನಿಸಿ ಅದಕ್ಕೆ ತಡೆ ನೀಡುವಂತೆ ಕೋರಿದೆ.


COMMERCIAL BREAK
SCROLL TO CONTINUE READING

2019 ರ ಫೆಬ್ರವರಿಯಲ್ಲಿ ಅದಾನಿ ಗುಂಪು 50 ವರ್ಷಗಳ ಗುತ್ತಿಗೆ ಪಡೆದಿದ್ದ ಆರು ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.ಸರ್ವಪಕ್ಷ ಸಭೆಯ ನಂತರ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಲು ರಾಜ್ಯ ನಿರ್ಧರಿಸಿತು.ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಎರಡೂ ಅದಾನಿ ಸ್ವಾಧೀನವನ್ನು ವಿರೋಧಿಸಿವೆ.


'ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿಗೆ ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಹಗಲು ದರೋಡೆ" ಎಂದು ರಾಜ್ಯ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ, ವಿಮಾನ ನಿಲ್ದಾಣಕ್ಕಾಗಿ ರಾಜ್ಯವು ಭೂಮಿ ಒದಗಿಸುವುದು ಸೇರಿದಂತೆ ಎಲ್ಲವನ್ನೂ ಒದಗಿಸಿದೆ ಎಂದು ಹೇಳಿದರು.


3 ವಿಮಾನ ನಿಲ್ದಾಣಗಳ ಸ್ವಾಧೀನಕ್ಕೆ ಹೆಚ್ಚಿನ ಸಮಯ ಕೋರಿದ ಅದಾನಿ ಗ್ರೂಪ್


ಖಾಸಗೀಕರಣ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಹೈಕೋರ್ಟ್ ನಿರಾಕರಿಸಿದ್ದರಿಂದಾಗಿ ರಾಜ್ಯವು  ಸುಪ್ರೀಂ ಕೋರ್ಟ್ ಗೆ ಮೊರೆ ಹೋಯಿತು, ಕಳೆದ ತಿಂಗಳು ಹೈಕೋರ್ಟ್ ಕೇರಳ ಸರ್ಕಾರದ ಮನವಿಯನ್ನು ವಜಾಗೊಳಿಸಿತ್ತು ಮತ್ತು ಅದು ಈಗ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.


ಅದಾನಿ ಎಂಟರ್‌ಪ್ರೈಸಸ್‌ಗೆ ವಿಮಾನ ನಿಲ್ದಾಣವನ್ನು ಗುತ್ತಿಗೆ ನೀಡಲು ಕೇರಳ ಸರ್ಕಾರ ವಿರೋಧಿಸಿದ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕೇರಳ ಸರ್ಕಾರ ಅರ್ಹತೆ ಹೊಂದಿಲ್ಲ ಎಂದು ಟ್ವೀಟ್ ಮಾಡಿದ್ದರು.