ಕೊಟ್ಟಾಯಂ: ಕೇರಳದ ಕೊಟ್ಟಾಯಂನಲ್ಲಿ ಪೇಂಟಿಂಗ್ (Painting) ಕೆಲಸಗಾರರೊಬ್ಬರು ಸರ್ಕಾರದ ಕ್ರಿಸ್‌ಮಸ್-ಹೊಸ ವರ್ಷದ ಲಾಟರಿಯ (Kerala Lottery) ಮೊದಲ ಬಹುಮಾನ ಪಡೆದಿದ್ದು, 12 ಕೋಟಿ ರೂ. ಗೆದ್ದಿದ್ದಾರೆ.


COMMERCIAL BREAK
SCROLL TO CONTINUE READING

ಕೊಟ್ಟಾಯಂನ ಕುಡಯಂಪಾಡಿ ನಿವಾಸಿ ಸದಾನಂದನ್ ಅವರು ಭಾನುವಾರ ಬೆಳಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾ (Lucky Draw) ನಡೆಯುವ ಕೆಲವೇ ಗಂಟೆಗಳ ಮೊದಲು ಮಾರಾಟಗಾರರಿಂದ ಲಾಟರಿ ಟಿಕೆಟ್ ಖರೀದಿಸಿದ್ದಾರೆ.


ಅಂದು ಮಧ್ಯಾಹ್ನವೇ ಅವರಿಗೆ ಲಾಟರಿ ಹೊಡೆದಿರುವುದು ಗೊತ್ತಾಗಿದೆ. ಸುದ್ದಿ ವರದಿಗಳ ಪ್ರಕಾರ, ಸದಾನಂದನ್ ಹಲವು ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಈ ಬಾರಿ ಮಾತ್ರ ಅವರು ಜಾಕ್‌ಪಾಟ್ ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಬಹುಮಾನದ ಹಣದಲ್ಲಿ ನನ್ನ ಮಕ್ಕಳ ಭವಿಷ್ಯವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಲಾಟರಿ ವಿಜೇತ ಸದಾನಂದನ್ ಸೋಮವಾರ ಎಎನ್‌ಐಗೆ ತಿಳಿಸಿದ್ದಾರೆ. ಈ ಹಣದಲ್ಲಿ ಅವರು ತಮ್ಮ ಕುಟುಂಬದಕ್ಕಾಗಿ ಉತ್ತಮವಾದ ಮನೆಯನ್ನು ನಿರ್ಮಿಸಲು ಬಯಸುತ್ತಾರೆ.


ಕ್ರಿಸ್‌ಮಸ್-ನ್ಯೂ ಇಯರ್ ಬಂಪರ್‌ನ (Bumper Lottery) ಟಿಕೆಟ್‌ಗಳ ಬೆಲೆ 300 ರೂ. ಲಾಟರಿಯಲ್ಲಿ ಎರಡನೇ ಬಹುಮಾನ 3 ಕೋಟಿ ರೂ. ಇದನ್ನು ಆರು ಟಿಕೆಟ್‌ಗಳಿಗೆ ನೀಡಲಾಯಿತು. ಮೂರನೇ ಬಹುಮಾನ 60 ಲಕ್ಷ ರೂ ಅನ್ನು ಆರು ಟಿಕೆಟ್‌ಗಳಿಗೆ ನೀಡಲಾಗಿದೆ. 


ಕಳೆದ ವರ್ಷ ಸೆಪ್ಟೆಂಬರ್ 2021ರಲ್ಲಿ ಕೇರಳದ ಆಟೋ ಡ್ರೈವರ್ (Auto Driver) ಓಣಂ 12 ಕೋಟಿ ರೂ. ಗಳ ಲಾಟರಿ ಗೆದ್ದಿದ್ದರು. 


ಇದನ್ನೂ ಓದಿ: ಈ 4 ಅಭ್ಯಾಸಗಳಿಂದಾಗಿ ಸಂಗಾತಿಯನ್ನು ದ್ವೇಷಿಸಲು ಪ್ರಾರಂಭಿಸುತ್ತಾರೆ ಮಹಿಳೆಯರು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.