ರೈತ ಚಳುವಳಿಗೆ ಹೊಸ ಮುನ್ನಡೆ ಬರೆದ ಕಿಸಾನ್ ಮುಕ್ತಿ ಸಂಸದ್
ನವದೆಹಲಿ:ಇಲ್ಲಿನ ರಾಮಲೀಲಾ ಮೈದಾನದಲ್ಲಿ ದಿನಾಂಕ ನವಂಬರ್ 20-21 ರಂದು ನಡೆದ ಕಿಸಾನ್ ಮುಕ್ತಿ ಸಂಸದ್ ನ ರೈತರ ಸಮಾವೇಶವು ರೈತರ ಚಳುವಳಿಗೆ ಒಂದು ಹೊಸ ಮುನ್ನಡಿಯನ್ನು ಬರೆಯಿತು.ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮನ್ವಯ ಸಮೀತಿಯ ನೇತೃತ್ವದಲ್ಲಿ ಸುಮಾರು 180 ಕ್ಕೂ ಹೆಚ್ಚು ಸಂಘಟನೆಗಳ ಸಮ್ಮುಖದಲ್ಲಿ ನಡೆದ ಈ ಹೋರಾಟವು ಕೊನೆಯ ದಿನ 21 ರಂದು ಮುಂದಿನ ದಿನಗಳಲ್ಲಿ ರೈತರ ಚಳುವಳಿಗಯು ಮಾಡಬೇಕಾಗಿರುವ ರೂಪುರೇಷೆಗಳಗಳನ್ನು ಸಿದ್ದಗೊಳಿಸಿದೆ ಅದರಲ್ಲಿ ಪ್ರಮುಖವಾಗಿ
*ರಾಷ್ಟ್ರವ್ಯಾಪಿ ರೈತ ಆಂದೋಲನ ದ ಬಗ್ಗೆಮೂಡಿಸುವುದು ಸಾಮಾಜಿಕ ಮಾಧ್ಯಮಗಳು,ಸಾರ್ವಜನಿಕ ಚರ್ಚೆಗಳು,ಪ್ರಕಟಣೆಗಳು,ಇನ್ನಿತರ ಕಾರ್ಯ ಯೋಜನೆಗಳ ಕುರಿತಾಗಿ ಜನವರಿ 26 ರಂದು ಕಿಸಾನ್ ಮುಕ್ತಿ ದಿವಸ್ ಸಂದರ್ಭದಲ್ಲಿ
ಚಾಲನೆ ನೀಡುವುದು.
*ದೇಶದ ಎಲ್ಲ ಜಿಲ್ಲೆ ಮತ್ತು ತಾಲೂಕವಾರು 500 ಕಿಸಾನ್ ಮುಕ್ತಿ ಚರ್ಚೆಗಳನ್ನು ಏರ್ಪಡಿಸುವುದು
*ರಾಜ್ಯವಾರು ರೈತ ಸಮಾವೇಶಗಳನ್ನು ಏರ್ಪಡಿಸುವುದು
*ಕಿಸಾನ್ ಮುಕ್ತಿ ಯಾತ್ರೆ ಮತ್ತು ಕಿಸಾನ್ ಮುಕ್ತಿ ಸಂಸದ್ ನ ಕುರಿತಾಗಿ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸುವುದು
*ಚೆತ್ವಾಣಿ ಸತ್ಯಾಗ್ರಹ ವನ್ನು ಗಣರಾಜ್ಯೋತ್ಸವದಂದು ಮಾಡುವುದು
*ಹೊಸ ಸಂಘಟನೆಗಳ ನೊಂದಣಿ ಮತ್ತು ಪ್ರಸ್ತುತವಿರುವ ಸದಸ್ಯರ ಆಧಾರದ ಮೇಲೆ ಸಂಘಟನೆಯನ್ನು ಕಟ್ಟುವುದು
ಈ ಹೊಸ ರೂಪುರೇಷೆಗಳನ್ನು ಮುಂದಿನ ದಿನಗಳ ರೈತರ ಚಳುವಳಿಯನ್ನು ಬಲಪಡಿಸಲು ಕೈಗೊಳ್ಳಲಾಗುವುದು ಎಂದು ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮಿತಿಯ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.