ನವದೆಹಲಿ : ಕಿಸಾನ್ ಕ್ರೆಡಿಟ್ ಕಾರ್ಡ್‌ನ (Kisan Credit Card)ಲಾಭವನ್ನು ಹೆಚ್ಚು ಹೆಚ್ಚು ರೈತರಿಗೆ ತಲುಪಿಸಲು ಮೋದಿ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಈವರೆಗೆ 1.5 ಕೋಟಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಿಕೊಂಡಿದ್ದಾರೆ.  2.5 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಬೇಕೆಂಬುದು ಮೋದಿ ಸರ್ಕಾರದ (Modi Government)ಬಯಕೆ.  ಮೋದಿ ಸರ್ಕಾರದ ಈ ಗುರಿಯನ್ನು ಈಡೇರಿಸಲು ಎಸ್‌ಬಿಐ ಮುಂದಾಗಿದೆ.


COMMERCIAL BREAK
SCROLL TO CONTINUE READING

ಎಸ್‌ಬಿಐ ನಿಮ್ಮ ಗ್ರಾಮವನ್ನು ತಲುಪಲಿದೆ : 
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ (Public Sector Bank) ಎಸ್‌ಬಿಐ (SBI) ಕೋಟಿ ಕೋಟಿ ರೈತರನ್ನು ತಲುಪಲು ಹೊಸ ಯೋಜನೆಯನ್ನು ಸಿದ್ಧಪಡಿಸಿದೆ. ಮಾಹಿತಿಯ ಪ್ರಕಾರ ಎಸ್‌ಬಿಐ ಗ್ರಾಮಗಳಿಗೆ ಹೋಗಿ ಶಿಬಿರಗಳನ್ನು ಆಯೋಜಿಸಿ ಕಿಸಾನ್ ಕ್ರೆಡಿಟ್ ಕಾರ್ಡ್  ಪ್ರಯೋಜನವನ್ನು ರೈತರಿಗೆ ವಿವರಿಸಲಿದೆ. ಶೀಘ್ರದಲ್ಲೇ ಎಸ್‌ಬಿಐ ನೌಕರರು ಈ ಯೋಜನೆಯಡಿ ಗ್ರಾಮಗಳಿಗೆ ತೆರಳಿ ಕೆಸಿಸಿಯ ಪ್ರಯೋಜನಗಳನ್ನು ರೈತರಿಗೆ ವಿವರಿಸಲಿದ್ದಾರೆ.


ಇದನ್ನೂ ಓದಿ : PM Kisan Update: ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ


ಕೆಸಿಸಿಯಿಂದ ರೈತರಿಗೆ ಏನು ಲಾಭ..?
ನೀವು ಸಹ ಕೃಷಿಕರಾಗಿದ್ದರೆ (Farmer)ಮತ್ತು ನೀವು ಇನ್ನೂ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಮಾಡದಿದ್ದರೆ, ನಾವು ನಿಮಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳನ್ನು ವಿವರಿಸುತ್ತಿದ್ದೇವೆ. ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ರೈತರು ಬಹಳ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು.  ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು ತಮ್ಮ ಕೃಷಿ ಅಗತ್ಯಗಳಿಗೆ ಸುಲಭವಾಗಿ ಹಣ ಹೊಂದಿಸಬಹುದು.  ಈ ಮೊದಲು, ರೈತರು ತಮ್ಮ ಅವಶ್ಯಕತೆಗಳನ್ನು ಪೂರೈಸಲು ಸಾಹುಕಾರರಿಂದ ಅಧಿಕ ಬಡ್ಡಿ ದರದಲ್ಲಿ ಸಾಲ ಪಡೆಯಬೇಕಿತ್ತು. ಪಾವತಿಯಾಗದೇ ಹೋದ ಸಂದರ್ಭದಲ್ಲಿ ರೈತರ ಜಮೀನು ಕೂಡಾ ವಶಪಡಿಸಿಕೊಳ್ಳುತ್ತಿದ್ದರು. ಕಿಸಾನ್ ಕ್ರೆಡಿಟ್ ಕಾರ್ಡ್ ಅದಕ್ಕೆಲ್ಲಾ ಬ್ರೇಕ್ ಹಾಕಲಿದೆ..


ಎಸ್‌ಬಿಐನ (SBI) ಕೆಸಿಸಿಯ KCC ವಿಶೇಷ ಲಕ್ಷಣಗಳು:
1. ಕೆಸಿಸಿ ಖಾತೆಯಲ್ಲಿನ ಕ್ರೆಡಿಟ್ ಬ್ಯಾಲೆನ್ಸ್ ನಲ್ಲಿ ಸೇವಿಂಗ್ಸ್ ಬ್ಯಾಂಕ್ (Bank) ಬಡ್ಡಿ ದರದಂತೆ ಬಡ್ಡಿ ಪಾವತಿಸಲಾಗುತ್ತದೆ.  
2. ಎಲ್ಲಾ ಕೆಸಿಸಿ ಕಾರ್ಡ್ ಹೊಂದಿರುವವರಿಗೆ ಉಚಿತ ಎಟಿಎಂ-ಡೆಬಿಟ್ ಕಾರ್ಡ್ (SBI Kissan credit card) ನೀಡಲಾಗುತ್ತದೆ
3. ಮೂರು ಲಕ್ಷ ರೂ.ವರೆಗಿನ ಸಾಲದ ಮೊತ್ತಕ್ಕೆ ವಾರ್ಷಿಕ 2% ಬಡ್ಡಿಯಲ್ಲಿ ರಿಯಾಯಿತಿ ಲಭ್ಯವಿದೆ.


ಇದನ್ನೂ ಓದಿ : PM Kisan ಯೋಜನೆಯ ರೈತರಿಗೆ ಸಿಗಲಿದೆ ದ್ವಿಗುಣ ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.