ನವದೆಹಲಿ: 2018-19ರ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿತ್ತು. 2018 ರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಘೋಷಿಸಿದ್ದರು. ಈ ವರ್ಷದ ಆದಾಯ ತೆರಿಗೆಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರ್ಪಡೆಯಾಗಿದೆ. ನಿಮಗೆ ಹೊಸ ನಿಯಮಗಳ ಬಗ್ಗೆ ತಿಳಿದಿದ್ದರೆ, ತೆರಿಗೆಯನ್ನು ಉಳಿಸುವುದು ಸುಲಭವಾಗುತ್ತದೆ ಮತ್ತು ನಿಯಮಗಳನ್ನು ಕಡೆಗಣಿಸಲಾಗುವುದಿಲ್ಲ. ಇದಲ್ಲದೆ, ನೀವು ಸಮಯಕ್ಕೆ ಸರಿಯಾಗಿ ತೆರಿಗೆ ಸಲ್ಲಿಸುವ ಮೂಲಕ ಪೆನಾಲ್ಟಿಗಳನ್ನು ತಪ್ಪಿಸಬಹುದು.


COMMERCIAL BREAK
SCROLL TO CONTINUE READING

2018 ರಲ್ಲಿ ಆದಾಯ ತೆರಿಗೆ ಕಾನೂನುಗಳಲ್ಲಿ ಏನು ಬದಲಾವಣೆಗಳನ್ನು ಮಾಡಲಾಯಿತು?


1. ಆದಾಯ ತೆರಿಗೆ ರಿಟರ್ನ್ನಲ್ಲಿ ವಿಳಂಬವಾದರೆ ಪೆನಾಲ್ಟಿ:
ಹೊಸ ವರ್ಷದ ತೆರಿಗೆ ರಿಟರ್ನ್ಸ್ ಸಲ್ಲಿಸುವುದನ್ನು ವಿಳಂಬಿಸಿದರೆ, ನೀವು ಪೆನಾಲ್ಟಿ ಪಾವತಿಸಬೇಕಾಗುತ್ತದೆ. ಪೆನಾಲ್ಟಿ 1 ಸಾವಿರ ರೂಪಾಯಿ ಮತ್ತು 10 ಸಾವಿರ ರೂಪಾಯಿಗಳ ನಡುವೆ ಇರಬಹುದು.


2. ಸುಧಾರಿತ ಆದಾಯ ತೆರಿಗೆ ರಿಟರ್ನ್ಸ್:
ತೆರಿಗೆ ರಿಟರ್ನ್ಸ್ ತುಂಬುವಲ್ಲಿ ಯಾವುದೇ ತಪ್ಪಾಗಿದ್ದರೆ, ನಂತರ ಅದೇ ಹಣಕಾಸು ವರ್ಷದಲ್ಲಿ ಅವರು ಸುಧಾರಿಸಬೇಕಾಗುತ್ತದೆ. ಆದ್ದರಿಂದ, ತೆರಿಗೆ ರಿಟರ್ನ್ ಫೈಲ್ನಲ್ಲಿ ನೀವು ತಪ್ಪು ಮಾಡಿದರೆ ಮಾರ್ಚ್ 31, 2019 ರೊಳಗೆ ಇದನ್ನು ಸರಿಪಡಿಸಿ.


3. ಹಿರಿಯ ನಾಗರಿಕರಿಗೆ ಪರಿಹಾರ:
ಈ ಇಂದು ಬದಲಾವಣೆಯು ಹಿರಿಯ ನಾಗರಿಕರಿಗೆ ಅನ್ವಯ ಆಗುವ ನಿಯಮವಾಗಿದೆ. ಪ್ರಸ್ತುತ ಆದಾಯ ತೆರಿಗೆ ವಿಧಿ 80TTAಯ ಪ್ರಕಾರ ಉಳಿತಾಯ ಖಾತೆಯಲ್ಲಿ ಪಡೆಯುವ ಬಡ್ಡಿಯಲ್ಲಿ ರೂ. ಹತ್ತು ಸಾವಿರ ರೂ ನಷ್ಟು ಮೊತ್ತವನ್ನು ಕಳೆದು ತೆರಿಗೆ ಕಟ್ಟಬೇಕಾಗಿತ್ತು. ಈಗ ಆದಾಯ ತೆರಿಗೆ ವಿಧಿಯಲ್ಲಿ 80TTB ಎಂಬ ಹೊಸ ವಿಧಿಯೊಂದನ್ನು ಪ್ರಸ್ತುತಪಡಿಸಲಾಗಿದೆ. ಇದರನ್ವಯ ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೂಲಕ ಲಭಿಸುವ ಬಡ್ಡಿಗಳಿಂದ ಒಟ್ಟು 50,000ರೂ ಕಳೆದು ಆದಾಯ ತೆರಿಗೆ ಸಲ್ಲಿಸಬೇಕಾಗುತ್ತದೆ . ಆದರೆ ವಿಧಿ 80TTB ಈಗ ಅನ್ವಯ ಆಗುವುದಿಲ್ಲ ಎಂದು ನಿಯಮ ಹೇಳುತ್ತದೆ.


4. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಎನ್ಪಿಎಸ್ ವಾಪಸಾತಿ ತೆರಿಗೆ ರಹಿತವಾಗಿದೆ. ಆದಾಗ್ಯೂ, ಪಿಂಚಣಿ ಪಡೆಯಲು ಉಳಿದ 40% ಹಣವನ್ನು ಬಳಸಬೇಕಾಗಿದೆ. ಹಿಂದೆ ಇದು ಭಾಗಶಃ ತೆರಿಗೆಯಾಗಿತ್ತು.


5. ಸ್ಟ್ಯಾಂಡರ್ಡ್ ಡಿಡಕ್ಷನ್:
ಈ ಯೋಜನೆಯಿಂದ 2.5 ಕೋಟಿಗೂ ಹೆಚ್ಚು ವೇತನದಾರರಿಗೆ ಲಾಭವಾಗಲಿದೆ. ವೇತನದಾರನು ಇನ್ನು ಮುಂದೆ ತಮ್ಮ ಸಂಬಳದ 40,000 ರುಪಾಯಿ ಅಷ್ಟು ನೆರವಾಗಿ ಕಳೆಯಬೇಕಾಗುತ್ತದೆ. ಈ ಹಿಂದೆ ಇದಕ್ಕೂ ಮೊದಲು 19,200 ಪ್ರಯಾಣ ಹಾಗೂ 15,000ರೂ ವೈದ್ಯಕೀಯ ವೆಚ್ಚಕ್ಕಾಗಿ ಕಳೆಯಲಾಗುತ್ತಿತ್ತು. ಪಿಂಚಣಿದಾರರಿಗೆ ಹಿಂದೆ ಪ್ರಯಾಣ ಮತ್ತು ವೈದ್ಯಕೀಯ ಸೌಲಭ್ಯಗಳಿರಲಿಲ್ಲ. ಆದರೆ ಈಗ ಅವರಿಗೂ ಈ ಯೋಜನೆಯ ಲಾಭ ಸಿಗಲಿದೆ.


6. ಸೆಸ್ ನಲ್ಲಿ ಏರಿಕೆ:
ಈ ವರ್ಷದ ಆದಾಯ ತೆರಿಗೆಯಲ್ಲಿ ಸೆಸ್ ಅನ್ನು 1% ರಷ್ಟು ಹೆಚ್ಚಿಸಲಾಗಿದೆ. ಸೆಸ್ ದರವನ್ನು ಈ ವರ್ಷದಿಂದ ಎಲ್ಲಾ ತೆರಿಗೆದಾರರಿಗೆ ಅನ್ವಯವಾಗುವಂತೆ 3% ನಿಂದ 4% ಗೆ ಏರಿಕೆ ಮಾಡಲಾಗಿದೆ. ಹಾಗಾಗಿ ಈ ನಿಯಮವು ಸಹ ತೆರಿಗೆಯ ನಿಯಮದ ಬದಲಾವಣೆಯಲ್ಲಿ ಬಹು ಮುಖ್ಯವಾದ ಅಂಶವೆಂದು ಹೇಳಬಹುದು.