Bulli Bai App: ಏನಿದು `ಬುಲ್ಲಿ ಬಾಯಿ ಆಪ್` ? ಇತ್ತೀಚಿಗೆ ಇದು ಸದ್ದು ಮಾಡುತ್ತಿರುವುದೇಕೆ?
Bulli Bai App: ಬುಲ್ಲಿ ಬಾಯಿ ಅಪ್ಲಿಕೇಶನ್ (Bulli Bai App)ನಲ್ಲಿ ಟ್ವಿಟರ್‌ನ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಕದ್ದ ಅನೇಕ ಮಹಿಳೆಯರ ಫೋಟೋಗಳನ್ನು ಹಾಕಲಾಗಿದೆ. ಈ ಅಪ್ಲಿಕೇಶನ್‌ನಲ್ಲಿ ಮಹಿಳೆಯರ ಆನ್‌ಲೈನ್ ಬಿಡ್ಡಿಂಗ್ ಮಾಡಲಾಗುತ್ತದೆ.
Bulli Bai App: ಇತ್ತೀಚಿಗೆ ಬುಲ್ಲಿ ಬಾಯಿ ಆ್ಯಪ್‌ಗೆ (Bulli Bai App) ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ಆರಂಭವಾಗಿವೆ. ಈ ಅಪ್ಲಿಕೇಶನ್ ಅನ್ನು GitHub ನಿಂದ ಡೌನ್‌ಲೋಡ್ ಮಾಡಲಾಗಿದೆ. ಗಿಟ್‌ಹಬ್ ಸಾಫ್ಟ್‌ವೇರ್ ಕೋಡಿಂಗ್ ಪ್ರೊವೈಡರ್ ಪ್ಲಾಟ್‌ಫಾರ್ಮ್ ಆಗಿದ್ದು, ಅಂತಹ ಓಪನ್ ಸೋರ್ಸ್ ಸಮುದಾಯ ಅಪ್ಲಿಕೇಶನ್‌ಗಳು ಕಂಡುಬರುತ್ತವೆ.
ಏನಿದು 'ಬುಲ್ಲಿ ಬಾಯಿ ಆಪ್' ? ಇತ್ತೀಚಿಗೆ ಇದು ಸದ್ದು ಮಾಡುತ್ತಿರುವುದೇಕೆ?
ಬುಲ್ಲಿ ಬಾಯಿ ಅಪ್ಲಿಕೇಶನ್ (Bulli Bai App)ನಲ್ಲಿ ಟ್ವಿಟರ್‌ನ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ (Social Media Platforms) ಕದ್ದ ಅನೇಕ ಮಹಿಳೆಯರ ಫೋಟೋಗಳನ್ನು ಹಾಕಲಾಗಿದೆ. ಈ ಅಪ್ಲಿಕೇಶನ್‌ನಲ್ಲಿ (Application) ಮಹಿಳೆಯರ ಆನ್‌ಲೈನ್ ಬಿಡ್ಡಿಂಗ್ ಮಾಡಲಾಗುತ್ತದೆ.
ಇದನ್ನೂ ಓದಿ- Bulli Bai App Case ಹಿಂದೆ ಮಹಿಳೆಯ ಕೈವಾಡ? ಉತ್ತರಾಖಂಡ್ ನಲ್ಲಿ ಮಹಿಳೆಯ ಬಂಧನ!
ಸುಲ್ಲಿ ಡೀಲ್‌ಗಳಂತೆಯೇ ಅಪ್ಲಿಕೇಶನ್
ಅದೇ ಸಾಲಿನಲ್ಲಿ, 6 ತಿಂಗಳ ಹಿಂದೆ GitHub ನಲ್ಲಿ ಸುಲ್ಲಿ ಡೀಲ್ಸ್ (Sully Deals) ಎಂಬ ಇದೇ ರೀತಿಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿತ್ತು. ಆನ್‌ಲೈನ್ ಹರಾಜಿನ (Online Auction) ಮೂಲಕ ಈ ಅಪ್ಲಿಕೇಶನ್‌ಗೆ ಹೋಲುವ ಅನೇಕ ಮಹಿಳೆಯರ ಚಿತ್ರಗಳು ಮತ್ತು ಪ್ರೊಫೈಲ್‌ಗಳನ್ನು ಪೋಸ್ಟ್ ಮಾಡಲಾಗಿತ್ತು. ಆಗಲೂ ಸಾಮಾಜಿಕ ಮಾಧ್ಯಮದಿಂದಲೇ ಈ ಅಪ್ಲಿಕೇಷನ್‌ನಲ್ಲಿ ಮಹಿಳೆಯರ ಪ್ರೊಫೈಲ್‌ಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿತ್ತು. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿರಲಿಲ್ಲ.
ರಾಜ್ಯಸಭಾ ಸಂಸದರ ಪತ್ರ:
ಇತ್ತೀಚೆಗಷ್ಟೇ ಬುಲ್ಲಿ ಬಾಯಿ ಆ್ಯಪ್ (Bulli Bai App) ಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಎದ್ದಿತ್ತು. ಇದಾದ ನಂತರ ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಪತ್ರವನ್ನೂ ಬರೆದಿದ್ದಾರೆ. ಈ ಪ್ರಕರಣದಲ್ಲಿ ಕ್ರಮಕ್ಕೆ ಮುಂದಾದ ಮುಂಬೈನ ಸೈಬರ್ ಸೆಲ್ (Cyber Cell) ನಂತರ ಎಫ್‌ಐಆರ್ ದಾಖಲಿಸಿದೆ.
ಇದನ್ನೂ ಓದಿ- 'Bulli Bai' app case:ಬೆಂಗಳೂರು ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ವಶಕ್ಕೆ
ಹಲವರನ್ನು ವಶಕ್ಕೆ ಪಡೆದ ಪೊಲೀಸರು:
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ, 21 ವರ್ಷದ ಎಂಜಿನಿಯರ್ ಮತ್ತು ಉತ್ತರಾಖಂಡದ ಮಹಿಳೆಯನ್ನು ಸಹ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ವಿಶಾಲ್ ನನ್ನು ಜನವರಿ 10 ರವರೆಗೆ ಪೊಲೀಸ್ ಕಸ್ಟಡಿಗೆ (Police Custody) ಕಳುಹಿಸಲಾಗಿದೆ. ಇದಲ್ಲದೆ ಇದರ ಜಾಲ ಪತ್ತೆ ಹಚ್ಚಲು ಪೊಲೀಸರು ಹಲವೆಡೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ.
ರಾಜಕೀಯದ ಧಾರ್ಮಿಕ ನಿಲುವು:
ಸಮಾಜವಾದಿ ಪಕ್ಷದ (Samajwadi Party), ಶಾಸಕ ಅಬು ಅಸಿಮ್ ಅಜ್ಮಿ ಅವರು ಈ ಕುರಿತಂತೆ ಪ್ರತಿಕ್ರಿಯಿಸಿದ್ದು, ಉದ್ದೇಶಪೂರ್ವಕವಾಗಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಲಾಗುತ್ತಿದೆ ಎಂದಿದ್ದಾರೆ. ಮುಸ್ಲಿಂ ಧಾರ್ಮಿಕ ಮುಖಂಡರು ಸಹ ಈ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿರುವುದಾಗಿ ಆರೋಪಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.