ಕೋಲ್ಕತಾವನ್ನು ಪರ್ಯಾಯ ರಾಷ್ಟ್ರ ರಾಜಧಾನಿಯನ್ನಾಗಿ ಮಾಡಬೇಕು - Mamata Banerjee
ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿಯಾದ ಕೋಲ್ಕತಾವನ್ನು ಪರ್ಯಾಯ ರಾಷ್ಟ್ರ ರಾಜಧಾನಿಯನ್ನಾಗಿ ಮಾಡಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಕೋಲ್ಕತಾ : ಭಾರತದಂತಹ ದೊಡ್ಡ ದೇಶಕ್ಕೆ ನಾಲ್ಕು ರಾಷ್ಟ್ರ ರಾಜಧಾನಿಗಳು ಇರಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿಯಾದ ಕೋಲ್ಕತಾವನ್ನು ಪರ್ಯಾಯ ರಾಷ್ಟ್ರ ರಾಜಧಾನಿಯನ್ನಾಗಿ ಮಾಡಬೇಕು ಎಂದವರು ಆಗ್ರಹಿಸಿದ್ದಾರೆ.
ಇದಕ್ಕೂ ಮೊದಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ಅಂಗವಾಗಿ ಗೌರವ ಸಲ್ಲಿಸಲು ಶನಿವಾರ ಇಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಅವರು ಸಂಸತ್ತಿನ ನಾಲ್ಕು ಅಧಿವೇಶನಗಳನ್ನು ದೇಶದ ವಿವಿಧ ಸ್ಥಳಗಳಲ್ಲಿ ನಡೆಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ - ಮಮತಾ ಬ್ಯಾನರ್ಜೀ ಕ್ಯಾಬಿನೆಟ್ ನಿಂದ ಮತ್ತೊಂದು ವಿಕೆಟ್ ಪತನ
ಸುಭಾಷ್ ಚಂದ್ರ ಬೋಸ್ (Subhash Chandra Bose) ಅವರ 125 ನೇ ಜನ್ಮ ದಿನಾಚರಣೆಯಂದು 'ದೇಶನಾಯಕ' ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೇತಾಜಿ ನಿಜವಾದ ವೀರ ಮತ್ತು ಎಲ್ಲ ಜನರ ಐಕ್ಯತೆಯನ್ನು ನಂಬಿದ್ದರು, ಅವರು ಜನರ ಸಮಗ್ರತೆಯನ್ನು ನಂಬಿದ್ದರು ಎಂದು ಹೇಳಿದರು. ನಾವು ಈ ದಿನವನ್ನು ದೇಶ್ ನಾಯಕ್ ದಿವಸ್ ಎಂದು ಆಚರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ - "ಬಿಜೆಪಿ ಕೊರೊನಾವೈರಸ್ ಗಿಂತಲೂ ಅಪಾಯಕಾರಿ"
2022 ರ ಜನವರಿ 23 ರವರೆಗೆ ಈ ದಿನವನ್ನು ಆಚರಿಸಲು ತಮ್ಮ ಸರ್ಕಾರ ರಾಜ್ಯಾದ್ಯಂತ ಸಮಿತಿಯನ್ನು ರಚಿಸಿದೆ. “ಆಜಾದ್ ಹಿಂದ್ ಫೌಜ್ ಹೆಸರಿನಲ್ಲಿ ಸ್ಮಾರಕವನ್ನು ರಾಜರಹತ್‌ನಲ್ಲಿ ನಿರ್ಮಿಸಲಾಗುವುದು. ನೇತಾಜಿ ಹೆಸರಿನಲ್ಲಿ ವಿಶ್ವವಿದ್ಯಾನಿಲಯವನ್ನು ಸಹ ಸ್ಥಾಪಿಸಲಾಗುವುದು. ಇದಕ್ಕಾಗಿ ವೆಚ್ಚವಾಗುವ ಸಂಪೂರ್ಣ ಹಣವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಮತ್ತು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದವನ್ನು ಸಹ ಮಾಡುತ್ತದೆ” ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.