"ಬಿಜೆಪಿ ಕೊರೊನಾವೈರಸ್ ಗಿಂತಲೂ ಅಪಾಯಕಾರಿ"

ಬಿಜೆಪಿ ಪಕ್ಷವನ್ನು ಕರೋನವೈರಸ್ ಗಿಂತ ಅಪಾಯಕಾರಿ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್  ಕರೆದಿರುವುದು ಈಗ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.

Written by - Zee Kannada News Desk | Last Updated : Jan 15, 2021, 06:46 PM IST
  • 'ನಿಮ್ಮ ಕಿವಿ ಮತ್ತು ಕಣ್ಣುಗಳನ್ನು ತೆರೆದಿಡಿ ಏಕೆಂದರೆ ನಿಮ್ಮ ಸುತ್ತಲೂ ಕರೋನಾಗೆ ಹೆಚ್ಚು ಅಪಾಯಕಾರಿ ಜನರು ಇದ್ದಾರೆ.
  • ಕರೋನಾಗಿಂತ ಹೆಚ್ಚು ಅಪಾಯಕಾರಿ ಯಾವುದು ಎಂದು ನಿಮಗೆ ತಿಳಿದಿದೆಯೇ? ಅದು ಬಿಜೆಪಿ.
  • ಯಾಕೆಂದರೆ ಅವರಿಗೆ ನಮ್ಮ ಸಂಸ್ಕೃತಿ ಅರ್ಥವಾಗುವುದಿಲ್ಲ.ಯಾಕೆಂದರೆ ಅವರಿಗೆ ಮಾನವೀಯತೆ ಅರ್ಥವಾಗುವುದಿಲ್ಲ,
"ಬಿಜೆಪಿ ಕೊರೊನಾವೈರಸ್ ಗಿಂತಲೂ ಅಪಾಯಕಾರಿ"  title=
Photo Courtesy: Facebook

ನವದೆಹಲಿ: ಬಿಜೆಪಿ ಪಕ್ಷವನ್ನು ಕರೋನವೈರಸ್ ಗಿಂತ ಅಪಾಯಕಾರಿ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್  ಕರೆದಿರುವುದು ಈಗ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ: ಹನಿಮೂನ್ ಮೂಡ್ ನಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ...!

ನುಸ್ರತ್ ಜಹಾನ್ (Nusrat Jahan) ಅವರು ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಾ 'ನಿಮ್ಮ ಕಿವಿ ಮತ್ತು ಕಣ್ಣುಗಳನ್ನು ತೆರೆದಿಡಿ ಏಕೆಂದರೆ ನಿಮ್ಮ ಸುತ್ತಲೂ ಕರೋನಾಗೆ ಹೆಚ್ಚು ಅಪಾಯಕಾರಿ ಜನರು ಇದ್ದಾರೆ.ಕರೋನಾಗಿಂತ ಹೆಚ್ಚು ಅಪಾಯಕಾರಿ ಯಾವುದು ಎಂದು ನಿಮಗೆ ತಿಳಿದಿದೆಯೇ? ಅದು ಬಿಜೆಪಿ. ಯಾಕೆಂದರೆ ಅವರಿಗೆ ನಮ್ಮ ಸಂಸ್ಕೃತಿ ಅರ್ಥವಾಗುವುದಿಲ್ಲ.ಯಾಕೆಂದರೆ ಅವರಿಗೆ ಮಾನವೀಯತೆ ಅರ್ಥವಾಗುವುದಿಲ್ಲ,  ನಮ್ಮ ಕಠಿಣ ಪರಿಶ್ರಮದ ಮೌಲ್ಯವನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ.ಅವರಿಗೆ ವ್ಯವಹಾರ ಮಾತ್ರ ತಿಳಿದಿದೆ. ಅವರಿಗೆ ಸಾಕಷ್ಟು ಹಣವಿದೆ. ಅವರು ಅದನ್ನು ಎಲ್ಲೆಡೆ ಹರಡುತ್ತಿದ್ದಾರೆ. ತದನಂತರ ಅವರು ಧರ್ಮದ ಆಧಾರದ ಮೇಲೆ ಜನರನ್ನು ಪರಸ್ಪರರ ವಿರುದ್ಧ ತಿರುಗಿಸಿ ಗಲಭೆಗಳಿಗೆ ಪ್ರಚೋದಿಸುತ್ತಾರೆ' ಎಂದು ಕ್ಷೇತ್ರದ ಬಶೀರ್‌ಹತ್‌ನಲ್ಲಿ ನಡೆದ ಸಭೆಯಲ್ಲಿ ಹೇಳಿದರು.

ಇದನ್ನೂ ಓದಿ: 'ನೀವು ನಮ್ಮನ್ನು ತಳ್ಳಬೇಡಿ, ಅರ್ಥ ಮಾಡಿಕೊಳ್ಳಿ ಸರ್'-ಮಾಧ್ಯಮದವರಲ್ಲಿ ಟಿಎಂಸಿ ಸಂಸದೆ ವಿನಂತಿ

ಬಂಗಾಳ (West Bengal) ಚುನಾವಣೆಗೆ ಸಹ- ಸಂಚಾಳಕರಗಿರುವ ಆಗಿರುವ ಬಿಜೆಪಿಯ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಅಮಿತ್ ಮಾಲ್ವಿಯಾ, ತಮ್ಮ ಪಕ್ಷದ ಮುಖಂಡರ ಹೇಳಿಕೆಗಳ ಬಗ್ಗೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಗುರಿಯಾಗಿಸಿಕೊಂಡು ಅವರು ಓಲೈಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೆಟ್ಟ ರೀತಿಯ ಲಸಿಕೆ ರಾಜಕಾರಣ ತೆರೆದುಕೊಳ್ಳುತ್ತಿದೆ. ಮೊದಲನೆಯದಾಗಿ, ಮಮತಾ ಬ್ಯಾನರ್ಜಿಯವರ ಸಂಪುಟದಲ್ಲಿನ ಸಚಿವರಾದ ಸಿದ್ದಿಕುಲ್ಲಾ ಚೌಧರಿ ಲಸಿಕೆಗಳನ್ನು ಸಾಗಿಸುವ ಲಾರಿಗಳನ್ನು ತಡೆ ಹಿಡಿದಿದ್ದಾರೆ. ಈಗ ಟಿಎಂಸಿ ಸಂಸದರು ಮುಸ್ಲಿಂ ಬಹುಸಂಖ್ಯಾತ ಡೆಗಂಗಾದಲ್ಲಿ ಪ್ರಚಾರ ಮಾಡುತ್ತಿದ್ದಾರೆ, ಬಿಜೆಪಿಯನ್ನು ಕರೋನಾಗೆ ಹೋಲಿಸುತ್ತಾರೆ. ಆದರೆ ಪಿಶಿ (ಚಿಕ್ಕಮ್ಮ) ಮೌನವಾಗಿದ್ದಾರೆ. ಏಕೆ ಈ ಓಲೈಕೆ ?  ಎಂದು ಮಾಲ್ವಿಯಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: BJP: 'ಮುಂದಿನ ತಿಂಗಳು 50 TMC ಶಾಸಕರು ಬಿಜೆಪಿ ಸೇರ್ಪಡೆ'

ಬುಧವಾರ ಬುರ್ದ್ವಾನ್‌ನಲ್ಲಿ ಕೋಲ್ಕತ್ತಾದಿಂದ ಬಂಕುರಾಕ್ಕೆ ಲಸಿಕೆಗಳನ್ನು ಸಾಗಿಸುತ್ತಿದ್ದ ಆರೋಗ್ಯ ಇಲಾಖೆ ವ್ಯಾನ್ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡ ಘಟನೆಯೊಂದನ್ನು ಉಲ್ಲೇಖಿಸುತ್ತಿದ್ದು, ಬಂಗಾಳ ಸಚಿವ ಸಿದ್ದಿಕುಲ್ಲಾ ಚೌಧರಿ ನೇತೃತ್ವದಲ್ಲಿ ದಿಗ್ಬಂಧನ ಉಂಟಾಗಿದೆ ಎಂದು ವರದಿಯಾಗಿದೆ. ಜಾಮ್ ಅನ್ನು ಬೈಪಾಸ್ ಮಾಡಲು ಪೊಲೀಸರು ಬೇರೆ ಮಾರ್ಗದ ಮೂಲಕ ವ್ಯಾನ್ ಬೆಂಗಾವಲು ಮಾಡಬೇಕಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News