ಕೊಂಕಣ ರೈಲ್ವೆ: ಟಿಕೆಟ್ ರಹಿತ ಪ್ರಯಾಣ 5 ತಿಂಗಳಲ್ಲಿ ಒಟ್ಟು 6.79 ಕೋಟಿ ರೂ ದಂಡ
Konkan railway : ಕೊಂಕಣ ರೈಲ್ವೆಯಲ್ಲಿ ಟಿಕೆಟ್ ರಹಿತ ಪ್ರಯಾಣದಿಂದ 5 ತಿಂಗಳಲ್ಲಿ 6.79 ಕೋಟಿ ದಂಡ ವಸೂಲು ಮಾಡಲಾಗಿದೆ.
konkan railway ticketless travel: ರೈಲ್ವೇ ಸುರಕ್ಷತೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕೆಲವೊಂದು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಈ ಪರಿಣಾಮ ಟಿಕೆಟ್ ರಹಿತ ಪ್ರಯಾಣಿಕರನ್ನ ಹಿಡಿದು ಅವರಿಂದ ದಂಡ ವಸೂಲಿ ಮಾಡಲಾಗಿದ್ದು, ಒಟ್ಟು 5 ತಿಂಗಳಲ್ಲಿ 32,902 ಮಂದಿ ಟಿಕೆಟ್ ರಹಿತ ಪ್ರಯಾಣ ಮಾಡಲಾಗಿದೆ ಎಂದು ತಿಳಿದು ಬಂದಿದೆ ಮತ್ತು ಅವರಿಂದ 6.79 ಕೋಟಿ ರೂಪಾಯಿ ವಸೂಲಾಗಿದೆ.
ಟಿಕೆಟ್ ರಹಿತ ಪ್ರಯಾಣ ಮಾಡಿದರೆ ರೈಲ್ವೆ ಟಿಸಿಗೆ ದಂಡ ಪಾವತಿಸಬೇಕು, ದಂಡ ಪಾವತಿಸಲು ನಿರಾಕರಿಸಿದಲ್ಲಿ ಆರ್ಪಿಎಫ್ ಗೆ ಒಪ್ಪಿಸಿ ರೈಲ್ವೆ ಕಾಯಿದೆ ಸೆಕ್ಷನ್ 137 ರ ಪ್ರಕಾರ ಪ್ರಕರಣ ದಾಖಲಿಸಲಾಗುತ್ತದೆ.
ಇದನ್ನು ಓದಿ : YouTube ವೀಡಿಯೊದಿಂದ ತಮಾಷೆಯ GIF ರಚಿಸಲು ಬಹಳ ಪ್ರಯೋಜನಕಾರಿ ಈ ಟೂಲ್ಸ್
ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರೆ ಗರಿಷ್ಠ ಸಾವಿರ ದಂಡ ವಿಧಿಸಬಹುದು, ಅದನ್ನು ಪಾವತಿಸಲು ನಿರಾಕರಿಸಿದರೇ ಗರಿಷ್ಠ ಆರು ತಿಂಗಳು ಜೈಲು ಶಿಕ್ಷೆ ವಿಧಿಸಬಹುದು ಮತ್ತು ರೈಲ್ವೆ ಫ್ಲಾಟ್ ಫಾರ್ಮ್ ಒಳಗೆ ಹೋಗಲು 10 ರೂ ಶುಲ್ಕ ವಿಧಿಸಲಾಗುತ್ತದೆ ಕೆಲವರು ಇದನ್ನು ಉಲ್ಲಂಘಿಸಿ ಹೋಗುವಂತ ಘಟನೆಗಳು ನಡೆಯುತ್ತಲೇ ಇದೆ ಇದಕ್ಕೂ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ರೈಲ್ವೆ ಸಿಬ್ಬಂದಿ ತಿಳಿಸಿದ್ದಾರೆ
ಇದನ್ನು ಓದಿ : Allu Arjun: ಅಲ್ಲು ಅರ್ಜುನ್ ಕಾರ್ ಡ್ರೈವರ್ ಸಂಬಳ ಎಷ್ಟು ಗೊತ್ತಾ?
ಪ್ರತಿಯೊಂದು ಭೋಗಿಯಲ್ಲಿಯೂ ಟಿಸಿಗಳು ನಿಯಮಿತವಾಗಿ ಟಿಕೆಟ್ ಪರಿಶೀಲನೆ ನಡೆಸಿದ್ದರು ಅವರ ಕಣ್ತಪ್ಪಿಸಿ ಒಳ ಪ್ರವೇಶಿಸುವ ಪ್ರಯಾಣಿಕರು ಇದ್ದಾರೆ. ಸಿಕ್ಕಿ ಬೀಳುವವರ ಪೈಕಿ ಬಿಹಾರ್ ,ಮಹಾರಾಷ್ಟ್ರ, ಗೋವಾ ಸಹಿತ ಅನ್ಯ ರಾಜ್ಯಯವರೇ ಹೆಚ್ಚು. ಸ್ಥಳದಲ್ಲಿ ದಂಡ ವಸೂಲು ಮಾಡುವ ಅಧಿಕಾರವು ಇರುವುದರಿಂದ ಟಿಕೆಟ್ ರಹಿತವಾಗಿ ಪ್ರಯಾಣ ಮಾಡುವವರು ಅಲಲ್ಲಿಯೇ ಹಣ ಪಾವತಿಸಿದರೆ ಸಮಸ್ಯೆಯಾಗದು ಇಲ್ಲದಿದ್ದರೆ ಕೋರ್ಟ್, ಕಚೇರಿ ಅಲೆಯಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಟಿಕೆಟ್ ಸಹಿತವಾಗಿಯೇ ಪ್ರಯಾಣ ಮಾಡಬೇಕು, ಟಿಕೆಟ್ ತಪಾಸಣೆ ದಿನನಿತ್ಯ ನಡೆಸಲಾಗುತ್ತದೆ ಮತ್ತು ಸಿಕ್ಕಿಬಿದ್ದವರಿಗೆ ಹೆಚ್ಚುವರಿ ತಂಡವನ್ನು ವಿಧಿಸಲಾಗುವುದು ಎಂದು ತಿಳಿಸಲಾಗಿದೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.