How to create GIF from YouTube video: ಈ ಡಿಜಿಟಲ್ ಯುಗದಲ್ಲಿ ಎಮೋಜಿಯಂತೆಯೇ ಇತ್ತೀಚಿನ ದಿನಗಳಲ್ಲಿ GIF ಟ್ರೆಂಡ್ ತುಂಬಾ ಜನಪ್ರಿಯವಾಗಿದೆ. ಸಾಮಾನ್ಯವಾಗಿ ಚಾಟ್ ಮಾಡುವ ಸಂದರ್ಭದಲ್ಲಿ ಈ GIFಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. GIF ಒಂದು ಚಿಕ್ಕ ವೀಡಿಯೊ ಕ್ಲಿಪ್‌ಗಳಾಗಿದ್ದು, ಇದು ಅಂತ್ಯವಿಲ್ಲದ ಲೂಪ್‌ನಲ್ಲಿ ಪ್ಲೇ ಆಗುತ್ತಿರುತ್ತದೆ. ನಿಸ್ಸಂಶಯವಾಗಿ ನೀವೂ ಕೂಡ ಒಂದಲ್ಲಾ ಒಂದು ಸಂದರ್ಭದಲ್ಲಿ ಈ GIF ವೈಶಿಷ್ಟ್ಯವನ್ನು ಬಳಸಿಯೇ ಇರುತ್ತೀರಿ.
ವಾಸ್ತವವಾಗಿ, ಇಂಟರ್ನೆಟ್‌ನಲ್ಲಿ ಲಭ್ಯವಿರುವ ಕೆಲವು ಪರಿಕರಗಳ ಸಹಾಯದಿಂದ ಯೂಟ್ಯೂಬ್ ವಿಡಿಯೋದ GIF ಅನ್ನು ಸ್ವತಃ ನೀವೇ ರಚಿಸಬಹುದು. ಅಂತಹ ವಿಶೇಷ ಪರಿಕರಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.
ಗಮನಾರ್ಹವಾಗಿ GIPHY, GifRun, GIFit ಎಂಬ ಪರಿಕರಗಳನ್ನು ಬಳಸಿ ನೀವು ಯೂಟ್ಯೂಬ್ ವೀಡಿಯೊವನ್ನು ಸುಲಭವಾಗಿ GIF ಆಗಿ ಪರಿವರ್ತಿಸಬಹುದು. ಅದು ಹೇಗೆ ಸಾಧ್ಯ ಎಂಬುದನ್ನೂ ತಿಳಿಯೋಣ...
ಇದನ್ನೂ ಓದಿ- Online Shopping: ಆನ್‌ಲೈನ್ ಶಾಪಿಂಗ್ ಕ್ರೇಜ್ ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು! ಇಲ್ಲಿದೆ ವರದಿ
GIPHY:
GIPHY ಯೂಟ್ಯೂಬ್ ವೀಡಿಯೊವನ್ನು GIF ಆಗಿ ಪರಿವರ್ತಿಸಲು ಸಹಾಯಕವಾಗುವ ಜನಪ್ರಿಯ ವೇದಿಕೆಯಾಗಿದೆ. ವೀಡಿಯೊಗಳ ಹೊರತಾಗಿ, ಇದರಲ್ಲಿ ನೀವು ಫೋಟೋಗಳನ್ನು GIF ಮತ್ತು ಸ್ಟಿಕ್ಕರ್‌ಗಳಾಗಿ ಪರಿವರ್ತಿಸಬಹುದು.
ಇದಕ್ಕಾಗಿ ಬಳಕೆದಾರರು ವೆಬ್‌ಸೈಟ್‌ಗೆ ಹೋಗಿ ಉಚಿತ GIPHY ಖಾತೆಯನ್ನು ರಚಿಸಬೇಕಾಗುತ್ತದೆ. ಖಾತೆಯನ್ನು ರಚಿಸಿದ ನಂತರ, ಮೇಲಿನ ಬಲ ಮೂಲೆಯಲ್ಲಿರುವ ರಚಿಸಿ ಬಟನ್ ಮೇಲೆ ಕ್ಲಿಕ್ ಮಾಡಿ. ನೀವು GIF ಮಾಡಲು ಬಯಸುವ ಯೂಟ್ಯೂಬ್ ಲಿಂಕ್ ಕಾಪಿ ಪಾಡಿ ಅದನ್ನು URL ಬಾಕ್ಸ್‌ನಲ್ಲಿ ಪೇಸ್ಟ್ ಮಾಡಿ, ಎಂಟರ್ ಒತ್ತಿದರೆ, ವಿಡಿಯೋದ GIF ರಚನೆಯಾಗುತ್ತದೆ.
GifRun:
ಒಂದೊಮ್ಮೆ ನೀವು ಖಾತೆಯನ್ನು ರಚಿಸಲು ಬಯಸದಿದ್ದರೆ GifRun ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಯಾವುದೇ YouTube ವೀಡಿಯೊದ GIF ಅನ್ನು ಸುಲಭವಾಗಿ ರಚಿಸಬಹುದು. ಇದಕ್ಕಾಗಿ ಮೊದಲಿಗೆ GifRun ವೆಬ್‌ಸೈಟ್‌ಗೆ ಭೇಟಿ ನೀಡಿ ನಿಗದಿತ ಜಾಗದಲ್ಲಿ ಯೂಟ್ಯೂಬ್ ವಿದ್ಯೋ ಲಿಂಕ್ ಅನ್ನು URL ಬಾಕ್ಸ್‌ನಲ್ಲಿ ಪೇಸ್ಟ್ ಮಾಡಿ. ಬಳಿಕ ಪ್ಲಾಟ್‌ಫಾರ್ಮ್ ಸ್ವಯಂಚಾಲಿತವಾಗಿ ವೀಡಿಯೊವನ್ನು GIF ಆಗಿ ಪರಿವರ್ತಿಸುತ್ತದೆ.
ಇದನ್ನೂ ಓದಿ- ಯೂಟ್ಯೂಬ್ ಶಾರ್ಟ್ಸ್'ನಲ್ಲೀಗ ರೀಮಿಕ್ಸ್ ಮ್ಯೂಜಿಕ್, ವೀಡಿಯೋಗಳನ್ನು ಸೇರಿಸುವುದು ಇನ್ನೂ ಸುಲಭ
GIFit:
GIFit Google Chrome ಮತ್ತು Microsoft Edge ಅನ್ನು ಬೆಂಬಲಿಸುವ ಉಚಿತ ಬಳಕೆ ಎಕ್ಸ್ಟೆನ್ಷನ್ ಆಗಿದೆ. ಒಂದೊಮ್ಮೆ ನೀವು ಮೇಲೆ ಉಲ್ಲೇಖಿಸಲಾದ ವೆಬ್‌ಸೈಟ್‌ಗಳಿಂದ ವೀಡಿಯೊದ GIF ರಚಿಸಲು ಬಯಸದಿದ್ದರೆ GIFit ಸಹಾಯದಿಂದ, GIF ಅನ್ನು ತಕ್ಷಣವೇ ರಚಿಸಬಹುದು. ಇದಕ್ಕಾಗಿ ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ...
* ನಿಮ್ಮ ಡೆಸ್ಕ್‌ಟಾಪ್‌ನಲ್ಲಿ GIFit! ಸ್ಥಾಪಿಸಿ.
* ಅನುಸ್ಥಾಪನೆಯು ಪೂರ್ಣಗೊಂಡ ನಂತರ, ನೀವು ಬಲಭಾಗದಲ್ಲಿ ವಿಸ್ತರಣೆ ಐಕಾನ್ ಅನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.
* ನಿಗದಿತ ಜಾಗದಲ್ಲಿ ನೀವು GIF ರಚಿಸಲು ಬಯಸುವ ಯೂಟ್ಯೂಬ್ ಲಿಂಕ್ URL ಅನ್ನು ಪೇಸ್ಟ್ ಮಾಡಿ.
* ಬಳಿಕ ವೀಡಿಯೊದ ಪ್ರಾರಂಭ ಮತ್ತು ಅಂತ್ಯದ ಬಿಂದುವನ್ನು ಆಯ್ಕೆಮಾಡಿ.
* ಇದರ ನಂತರ GIF ಗಾಗಿ ಫ್ರೇಮ್ ದರವನ್ನು ಹೊಂದಿಸಿ. GIFit! ಬಟನ್ ಟ್ಯಾಪ್ ಮಾಡಿದರೆ, ಕೆಲವೇ ಕ್ಷಣಗಳಲ್ಲಿ GIF ನಿಮ್ಮ ಮುಂದೆ ಸಿದ್ಧವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.