ನವದೆಹಲಿ: ದೇಶಾದ್ಯಂತ ಕೇಂದ್ರೀಯ ವಿದ್ಯಾಲಯಗಳಲ್ಲಿ (KVS Admission 2021-22) 2021-22ರ ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಗೆ ಪ್ರವೇಶ ಪಡೆಯಲು ಆನ್‌ಲೈನ್ ನೋಂದಣಿ ಪ್ರಕ್ರಿಯೆ ಎಪ್ರಿಲ್ 1ರಿಂದ ಪ್ರಾರಂಭವಾಗಲಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳಿಗಾಗಿ ಏಪ್ರಿಲ್ 1 ರಿಂದ ಒಂದನೇ ತರಗತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಒಂದನೇ ತರಗತಿಗೆ ಮಾತ್ರ ಆನ್‌ಲೈನ್ ಫಾರ್ಮ್‌ಗಳನ್ನು ಭರ್ತಿ ಮಾಡಲಾಗುತ್ತದೆ. ಕೆವಿಎಸ್ ಆನ್‌ಲೈನ್ ಫಾರ್ಮ್‌ಗಾಗಿ ಆ್ಯಪ್ ಅನ್ನು ಸಹ ಬಿಡುಗಡೆ ಮಾಡಿದೆ. ಪೋಷಕರು ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ನೋಂದಣಿ ಪೋರ್ಟಲ್ ಏಪ್ರಿಲ್ 1 ರಿಂದ 19 ರವರೆಗೆ ತೆರೆದಿರುತ್ತದೆ :
ಕೇಂದ್ರೀಯ ವಿದ್ಯಾಲಯದಲ್ಲಿ (Kendriya Vidyalaya) ಒಂದನೇ ತರಗತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನೋಂದಣಿ ಪೋರ್ಟಲ್ ಏಪ್ರಿಲ್ 1 ರಿಂದ 19 ರವರೆಗೆ ತೆರೆದಿರುತ್ತದೆ. ದೇಶದ ಎಲ್ಲಾ ಕೇಂದ್ರೀಯ ವಿದ್ಯಾಲಯಗಳಲ್ಲಿ ಒಂದನೇ ತರಗತಿಗೆ KVS Online Admission KVS Gov inನಲ್ಲಿ ನೋಂದಾಯಿಸಿಕೊಳ್ಳುವುದು ಅವಶ್ಯಕ. ಎರಡನೇ ತರಗತಿ ಮತ್ತು ಅದರ ನಂತರದ ತರಗತಿಗಳಿಗೆ ಆಫ್‌ಲೈನ್ ನೋಂದಣಿ ಮಾಡಬೇಕಾಗುತ್ತದೆ. ಇದಕ್ಕಾಗಿ ನೋಂದಣಿ ಪ್ರಕ್ರಿಯೆ ದಿನಾಂಕ 8 ಏಪ್ರಿಲ್ 2021 ರಿಂದ ಪ್ರಾರಂಭವಾಗುತ್ತದೆ.


ಕೋವಿಡ್ -19 ಕಾರಣ ವಿಳಂಬ :
ವಾಸ್ತವವಾಗಿ ಪ್ರತಿ ವರ್ಷ ಕೇಂದ್ರೀಯ ವಿದ್ಯಾಲಯದಲ್ಲಿ ಮಾರ್ಚ್‌ನಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು. ಪೋಷಕರು ಏಪ್ರಿಲ್‌ನಿಂದ ಮೇ ವರೆಗೆ ದಾಖಲಾತಿಗಾಗಿ ಕಾಯಬೇಕಿತ್ತು. ಆದರೆ ಈ ವರ್ಷ ಕರೋನಾ (Coronavirus) ಸೋಂಕಿನಿಂದಾಗಿ ನೋಂದಣಿ ಪ್ರಕ್ರಿಯೆ ವಿಳಂಬವಾಗಿದೆ.


ಇದನ್ನೂ ಓದಿ - Coronavirus: ಒಂದರಿಂದ ಎಂಟನೇ ತರಗತಿವರೆಗೆ ಈ ಬಾರಿಯೂ ನಡೆಯಲಿದೆ Online classes


ಪ್ರತಿ ವರ್ಗಕ್ಕೂ ವಿಭಿನ್ನ ಫಾರ್ಮ್:
ಕೇಂದ್ರೀಯ ವಿದ್ಯಾಲಯದಲ್ಲಿ ಯಾವುದೇ ತರಗತಿಗೆ ಪ್ರವೇಶ ಪಡೆಯಲು  kvonlineadmission.kvs.gov.in ಗೆ ಹೋಗಿ ಅರ್ಜಿ ಸಲ್ಲಿಸಬೇಕು. ಅದಾಗ್ಯೂ ಕೆವಿಎಸ್ ಪ್ರತಿ ವರ್ಗಕ್ಕೂ ವಿಭಿನ್ನ ಫಾರ್ಮ್ ನೀಡಿದೆ. ಫಾರ್ಮ್ನ ಸಂಖ್ಯೆಯನ್ನು ನೋಡಿದ ನಂತರ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಬೇಕು.


ಕೆವಿಎಸ್ ನೋಂದಣಿ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು:


  • 1 ನೇ ತರಗತಿಗೆ (ಆನ್‌ಲೈನ್) ನೋಂದಣಿ ಪ್ರಾರಂಭದ ದಿನಾಂಕ - ಏಪ್ರಿಲ್ 1

  • 1 ನೇ ತರಗತಿ ನೋಂದಣಿಗೆ ಕೊನೆಯ ದಿನಾಂಕ - ಏಪ್ರಿಲ್ 19 

  • ಮೊದಲ ಪಟ್ಟಿ ಬಿಡುಗಡೆ ದಿನಾಂಕ - 23 ಏಪ್ರಿಲ್

  • ಎರಡನೇ ಪಟ್ಟಿ ಬಿಡುಗಡೆ ದಿನಾಂಕ - 30 ಏಪ್ರಿಲ್ 

  • ಮೂರನೇ ಪಟ್ಟಿ ಬಿಡುಗಡೆ ದಿನಾಂಕ - 5 ಮೇ

  • 2ನೇ ತರಗತಿ ಮತ್ತು ಇತರ ತರಗತಿಗಳ ನೋಂದಣಿ (ಆಫ್‌ಲೈನ್) - ಏಪ್ರಿಲ್ 8 ರಿಂದ ಏಪ್ರಿಲ್ 15 ರವರೆಗೆ

  • 2 ನೇ ತರಗತಿ ಮತ್ತು ಮುಂದಿನ ತರಗತಿಗಳಿಗೆ ಮೊದಲ ಪಟ್ಟಿ ಬಿಡುಗಡೆ ದಿನಾಂಕ  - ಏಪ್ರಿಲ್ 19

  • 2 ನೇ ತರಗತಿಗೆ ದಾಖಲಾತಿ ಪ್ರಕ್ರಿಯೆ-  ಏಪ್ರಿಲ್ 20ರಿಂದ ಏಪ್ರಿಲ್ 27 

  • 3ನೇ ತರಗತಿಯಿಂದ 9ನೇ ತರಗತಿವರೆಗೆ ಪ್ರವೇಶ ಪಡೆಯಲು ಕೊನೆಯ ದಿನಾಂಕ - 31 ಮೇ


ಇದನ್ನೂ ಓದಿ - ಹಳ್ಳಿಗಳಲ್ಲಿ ಕರೆಂಟ್ ಸಿಗೋದೇ ಡೌಟು: ಹೈ ಸ್ಪೀಡ್ ಇಂಟರ್‌ನೆಟ್‌ ಕೊಡ್ತಾರಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್‌


ಮಾರ್ಚ್ 31 ರವರೆಗೆ ವಯಸ್ಸಿನ ಲೆಕ್ಕಾಚಾರ :
ಇದರೊಂದಿಗೆ ಎಲ್ಲಾ ತರಗತಿಗಳಿಗೆ ಪ್ರವೇಶದ ವಯಸ್ಸನ್ನು 31 ಮಾರ್ಚ್ 2021 ರೊಳಗೆ ಲೆಕ್ಕಹಾಕಲಾಗುತ್ತದೆ. ನೋಂದಾಯಿತ ಅಭ್ಯರ್ಥಿಗಳಿಗೆ ಕೆವಿಎಸ್ ಪ್ರವೇಶಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರಕಾರ ಸೀಟುಗಳನ್ನು ಕಾಯ್ದಿರಿಸಲಾಗುವುದು, ಇದರ ಮಾಹಿತಿಯನ್ನು https://kvsangathan.nic.in ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಕೋವಿಡ್ -19 ರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಎಲ್ಲ ರಕ್ಷಣಾ ಕ್ರಮಗಳನ್ನು ಪಾಲಿಸುವಂತೆ ಕೆವಿಎಸ್ ಪೋಷಕರಿಗೆ ಮನವಿ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.