Coronavirus: ಒಂದರಿಂದ ಎಂಟನೇ ತರಗತಿವರೆಗೆ ಈ ಬಾರಿಯೂ ನಡೆಯಲಿದೆ Online classes

ದೆಹಲಿಯ ಹೊರತಾಗಿ, ಪಂಜಾಬ್, ಪುದುಚೇರಿ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ (Karnataka), ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳು ಸಣ್ಣ ತರಗತಿಗಳನ್ನು ತೆರೆಯದಿರಲು ನಿರ್ಧರಿಸಿದೆ.   

Written by - Ranjitha R K | Last Updated : Mar 28, 2021, 11:01 AM IST
  • ಕೆಲವೇ ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ
  • ಕರೋನಾ ಹಿನ್ನೆಲೆಯಲ್ಲಿ ಸಿದ್ಧವಾಗಿದೆ ಹೊಸ ಮಾರ್ಗಸೂಚಿ
  • 1-8 ನೇ ತರಗತಿಯವರೆಗೆ ಮತ್ತೆ Online classes ನಡೆಸಲು ನಿರ್ಧಾರ
Coronavirus: ಒಂದರಿಂದ ಎಂಟನೇ ತರಗತಿವರೆಗೆ ಈ ಬಾರಿಯೂ ನಡೆಯಲಿದೆ Online classes title=
1-8 ನೇ ತರಗತಿಯವರೆಗೆ ಮತ್ತೆ Online classes (file photo)

ನವದೆಹಲಿ : ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಕರೋನವೈರಸ್ (Coronavirus) ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ದೆಹಲಿ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ, 1-8 ನೇ ತರಗತಿಯವರೆಗೆ  ಮತ್ತೆ  Online classes ನಡೆಸಲು ನಿರ್ಧರಿಸಲಾಗಿದೆ. 
 
ಕೊರೊನಾವೈರಸ್ (Coronavirus) ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ತರಗತಿಗಳಿಗೆ Online classes ಮಾತ್ರ ನಡೆಯಲಿದೆ ಎನ್ನುವುದನ್ನು ದೆಹಲಿ (Delhi) ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ದೆಹಲಿಯ ಹೊರತಾಗಿ, ಪಂಜಾಬ್, ಪುದುಚೇರಿ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ (Karnataka) , ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳು ಸಣ್ಣ ತರಗತಿಗಳನ್ನು ತೆರೆಯದಿರಲು ನಿರ್ಧರಿಸಿದೆ.  ಈ ರಾಜ್ಯಗಳಲ್ಲಿ ಈ ಹಿಂದೆ ಶಾಲೆಗಳನ್ನು ತೆರೆಯಲಾಗಿತ್ತು, ಆದರೆ COVID-19  ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಮತ್ತೆ ಮುಚ್ಚಲು ನಿರ್ಧರಿಸಲಾಗಿದೆ. 

ಇದನ್ನೂ ಓದಿ : Coronavirus : ನಿಯಂತ್ರಣವಿಲ್ಲದಿದ್ದರೆ ಒಬ್ಬ ಪೀಡಿತ 406 ಜನರಿಗೆ ಸೋಂಕು ಹರಡಬಹುದು

ಹೆಚ್ಚುತ್ತಿರುವ ಕರೋನ ಪ್ರಕರಣಗಳ ಹಿನ್ನೆಲೆಯಲ್ಲಿ  ಆನ್‌ಲೈನ್ (Online) ಶಿಕ್ಷಣದ ಆಯ್ಕೆ ಅನಿವಾರ್ಯವಾಗಿದೆ ಎಂದು ಅಖಿಲ ಭಾರತ ಪೋಷಕರ ಸಂಘದ ಅಧ್ಯಕ್ಷ ಮತ್ತು ದೆಹಲಿ ವಿಶ್ವವಿದ್ಯಾಲಯ ಕಾರ್ಯಕಾರಿ ಮಂಡಳಿಯ ಸದಸ್ಯ ಅಶೋಕ್ ಅಗರ್‌ವಾಲ್ ಹೇಳಿದ್ದಾರೆ. ಇದೇ  ವೇಳೆ, ಕರೋನಾದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಶಾಲೆಯನ್ನು (School) ತೆರೆಯದಿರುವುದು ಸರಿಯಾದ ನಿರ್ಧಾರ ಎಂದು ದೆಹಲಿ ಪೋಷಕರ ಸಂಘ ಕೂಡಾ ಅಭಿಪ್ರಾಯಪಟ್ಟಿದೆ. ಆದರೆ ಈ ನಿರ್ಧಾರವು 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳಿಗೂ ಅನ್ವಯವಾಗಬೇಕು ಎಂದು ಅದು ಒತ್ತಾಯಿಸಿದೆ. 

ಇದನ್ನೂ ಓದಿ : Coronavirus: ಈ ರಾಜ್ಯದಲ್ಲಿ ನಿಯಂತ್ರಣ ಮೀರಿದ ಕೊರೊನಾ, ಮಾರ್ಚ್ 28 ರಿಂದ Night Curfew ಘೋಷಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News