CPR Viral Video: ನಡುರಸ್ತೆಯಲ್ಲಿಯೇ ಸಂಭವಿಸಿದ ಹೃದಯಾಘಾತ, CPR ನೀಡಿ ಪ್ರಾಣ ರಕ್ಷಿಸಿದ ಲೇಡಿ ಪೋಲಿಸ್
Viral Video: ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ಟ್ರಾಫಿಕ್ ಕಾನ್ಸ್ಟೆಬಲ್ ಒಬ್ಬರು ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ಸಿಪಿಆರ್ ನೀಡುವ ಮೂಲಕ ಜೀವ ಉಳಿಸಿದ್ದಾರೆ.
CPR Viral Video: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪೊಲೀಸ್ ಪೇದೆ ಸೋನಂ ಪರಾಶರ್ ಮಾಡಿರುವ ಕೃತ್ಯಕ್ಕೆ ಎಲ್ಲೆಡೆಯಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಒಂದೇ ದಿನದಲ್ಲಿ ಸೋನಂ ಸ್ಟಾರ್ ಆಗಿದ್ದಾರೆ. ಸೋನಂ ಪರಾಶರ್ ಮಾಡಿರುವ ಕೆಲಸದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಕೆಲವೇ ಸೆಕೆಂಡುಗಳಲ್ಲಿ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಓರ್ವ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದೆ. ಈ ವೇಳೆ ಸೋನಂ ಟ್ರಾಫಿಕ್ ಡ್ಯೂಟಿಯಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಸೋನಂ, ಕೂಡಲೇ ಸಿಪಿಆರ್ ಅಂದರೆ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ (ಸಿಪಿಆರ್) ನೀಡಿ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಆತನ ಪ್ರಾಣ ಉಳಿಸಿದ್ದಾರೆ.
ಇದ್ದಕ್ಕಿದ್ದಂತೆ ಅಸ್ವಸ್ಥರಾದವರನ್ನು ಅನಿಲ್ ಉಪಾಧ್ಯಾಯ ಎಂದು ಹೇಳಲಾಗಿದೆ. ಇವರು ವಿದ್ಯುತ್ ಕಂಪನಿಯಿಂದ ನಿವೃತ್ತರಾಗಿದ್ದಾರೆ ಮತ್ತು ಗ್ವಾಲಿಯರ್‌ನ ಗೋಲಾ ಮಂದಿರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಗೋಲಾ ಮಂದಿರದ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋನಂ, ಅನಿಲ್ ಉಪಾಧ್ಯಾಯ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ನೋಡಿದ್ದಾರೆ. ವ್ಯಕ್ತಿಗೆ ಸಿಪಿಆರ್ ಅಗತ್ಯವಿದೆ ಎಂದು ಸೋನಮ್ ತಕ್ಷಣ ಅರಿತುಕೊಂಡಿದ್ದಾರೆ. ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಅನಿಲ್ ಉಪಾಧ್ಯಾಯ ಅವರನ್ನು ಎದೆಯ ಮೇಲೆ ಕೈಯಿಟ್ಟು ಸೋನಂ ಪಂಪ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಅನಿಲ್ ಉಪಾಧ್ಯಾಯ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಜೀವ ಉಳಿಸಲಾಗಿದೆ.
ಇದನ್ನೂ ಓದಿ-Rosie Moore: ಅಪಾಯಕಾರಿ ಜಂತುಗಳನ್ನು ಮೈಮೇಲೆ ಎಳೆದುಕೊಳ್ಳುವ ವಿಶ್ವದ ಹಾಟ್ ಸೈಂಟಿಸ್ಟ್ ಇವಳೇ ನೋಡಿ
ಈ ಬಗ್ಗೆ ಮಾತನಾಡಿರುವ ಸೋನಂ ಪರಾಶರ್, 'ತರಬೇತಿ ಸಮಯದಲ್ಲಿಯೇ ನಮಗೆ ಸಿಪಿಆರ್ ನೀಡಲು ಹೇಳಿಕೊಡಲಾಗಿತ್ತು. ನಾನು ಅನಿಲ್ ಅವರನ್ನು ನೋಡಿದ ತಕ್ಷಣ, ಸಿಪಿಆರ್ ಮಾತ್ರ ಅವರ ಜೀವವನ್ನು ಉಳಿಸಬಹುದು ಎಂದು ನಾನು ಅರ್ಥಮಾಡಿಕೊಂಡೆ ಮತ್ತು ತಕ್ಷಣ ಅವರಿಗೆ ಸಿಪಿಆರ್ ನೀಡಿದೆ ಮತ್ತು ಅವರು ಪ್ರಜ್ಞೆಗೆ ಮರಳಿ ಬಂದು ಕಣ್ಣು ಮುಚ್ಚಿದರು ಎಂದಿದ್ದಾರೆ. ನಂತರ ಪೊಲೀಸರ ನೆರವಿನಿಂದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಜೇಬಿನಲ್ಲಿ ಫೋನ್ ಇತ್ತು, ತನ್ಮೂಲಕ ಅವರ ಮನೆಯಲ್ಲಿ ಮಾಹಿತಿ ನೀಡಲಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ-World's Most Venomous Snake: ಒಂದೇ ಏಟಿಗೆ 100 ಜನರನ್ನು ಮಸಣಕ್ಕಟ್ಟುತ್ತಂತೆ ಈ ಹಾವು
CPR ಎಂದರೇನು?
ಕೆಲವು ಸಮಯದಿಂದ ಜನರು ಉಸಿರಾಟ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಉಸಿರಾಟ ಅಥವಾ ಹೃದಯ ಬಡಿತ ಸ್ಥಗಿತಗೊಂಡಾಗ ಸಿಪಿಆರ್ ನೀಡುವ ಮೂಲಕ ಜನರ ಜೀವವನ್ನು ಉಳಿಸಬಹುದು. ಇದರಲ್ಲಿ ಅಟ್ಯಾಕ್ ಗೆ ಒಳಗಾದ ವ್ಯಕ್ತಿ ಎದೆಯ ಮೇಲೆ ಕೈ ಇಟ್ಟು ಬಲವಾಗಿ ಒತ್ತಿ ಪಂಪ್ ಮಾಡಲಾಗುತ್ತದೆ. ಸಣ್ಣಪುಟ್ಟ ಸಮಸ್ಯೆಯಿಂದ ಉಸಿರಾಟ ಅಥವಾ ಹೃದಯ ಬಡಿತ ನಿಂತುಹೋಗಿದ್ದರೆ, ಅದು ಮತ್ತೆ ಪ್ರಾರಂಭವಾಗುತ್ತದೆ ಮತ್ತು ವ್ಯಕ್ತಿಯ ಜೀವ ಉಳಿಯುತ್ತದೆ ಎಂಬುದು ವೈದ್ಯರ ಅಭಿಪ್ರಾಯ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.