ನವದೆಹಲಿ: ಮೇವು ಹಗರಣ (fodder scam) ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‌ಗೆ ಸಿಬಿಐ ನ್ಯಾಯಾಲಯ ಸೋಮವಾರ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡ ವಿಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: CBSE Term 1 Result: ಶೀಘ್ರದಲ್ಲೇ ಪ್ರಕಟವಾಗಲಿದೆ ಫಲಿತಾಂಶ.. ಹೀಗೆ ಪರಿಶೀಲಿಸಿ!


1995-96ರಲ್ಲಿ ಡೊರಾಂಡಾ ಖಜಾನೆಯಿಂದ (Lalu Prasad Yadav) ಅಕ್ರಮವಾಗಿ 139.35 ಕೋಟಿ ಹಣವನ್ನು ಹಿಂತೆಗೆದುಕೊಂಡಿದ್ದ ಅವರ ಅಂತಿಮ ಮೇವು ಹಗರಣ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ದೋಷಿ ಎಂದು ಘೋಷಿಸಿದ 75 ಶಂಕಿತರಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ ಸಹ ಸೇರಿದ್ದಾರೆ.


ಶಿಕ್ಷೆಯ ಪ್ರಮಾಣದ ಬಗ್ಗೆ ವಾಸ್ತವಿಕವಾಗಿ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ಶಿಕ್ಷೆಯನ್ನು ಘೋಷಿಸಿತು. ಫೆಬ್ರವರಿ 15 ರಂದು ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ, ಲಾಲು ಪ್ರಸಾದ್ ಯಾದವ್ ಅವರನ್ನು ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಯಿತು ಮತ್ತು ನಂತರ ರಾಂಚಿಯ ಸರ್ಕಾರಿ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS) ಗೆ ಸ್ಥಳಾಂತರಿಸಲಾಯಿತು.


ಡೊರಾಂಡಾ ಖಜಾನೆ ಪ್ರಕರಣದಲ್ಲಿ ಒಟ್ಟು 170 ಆರೋಪಿಗಳನ್ನು ಮಾಡಲಾಗಿದೆ. ಈ ಪೈಕಿ 55 ಮಂದಿ ಸಾವನ್ನಪ್ಪಿದ್ದಾರೆ, 7 ಮಂದಿ ಸರ್ಕಾರಿ ಸಾಕ್ಷಿಯಾಗಿದ್ದಾರೆ, 2 ಮಂದಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು 6 ಮಂದಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ಇದರ ನಂತರ ಒಟ್ಟು 99 ಆರೋಪಿಗಳನ್ನು ಬಿಟ್ಟು, ಅದರಲ್ಲಿ 24 ಮಂದಿಯನ್ನು ಖುಲಾಸೆಗೊಳಿಸಲಾಗಿದ್ದು, 75 ಮಂದಿಗೆ ಶಿಕ್ಷೆಯಾಗಿದೆ.


ಇದನ್ನೂ ಓದಿ: HDK: ‘ತಮ್ಮ ಪಕ್ಷದ ಕಾರ್ಯಕರ್ತರನ್ನೇ ರಕ್ಷಣೆ ಮಾಡದವರು ರಾಜ್ಯವನ್ನು ಹೇಗೆ ರಕ್ಷಣೆ ಮಾಡ್ತಾರೆ?’


2013ರಲ್ಲಿ ಮೊದಲ ಅಪರಾಧ ಸಾಬೀತಾದಾಗಿನಿಂದ ದುಮ್ಕಾ, ದಿಯೋಘರ್ ಮತ್ತು ಚೈಬಾಸಾ ಖಜಾನೆಗಳಿಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಒಟ್ಟು 14 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಲಾಲು ಜಾಮೀನು (Bail) ಪಡೆದಿದ್ದರು. ಅವರು 2017 ರಲ್ಲಿ ಎರಡನೇ ಪ್ರಕರಣದಲ್ಲಿ ಹಾಗೂ ಜನವರಿ ಮತ್ತು ಮಾರ್ಚ್ 2018 ರಲ್ಲಿ ಮೂರನೇ ಮತ್ತು ನಾಲ್ಕನೇ ಪ್ರಕರಣದಲ್ಲಿ ಶಿಕ್ಷೆಗೊಳಗಾದರು. 


ಅದರಲ್ಲಿ ಐದು ಪ್ರಕರಣಗಳನ್ನು ಬಿಹಾರ ವಿಭಜನೆಯ ನಂತರ ಜಾರ್ಖಂಡ್‌ಗೆ ವರ್ಗಾಯಿಸಲಾಯಿತು ಮತ್ತು ಒಂದು ಪ್ರಕರಣವನ್ನು ಪಾಟ್ನಾದಲ್ಲಿ ವ್ಯವಹರಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.