Sonia Gandhi Calls Lalu Yadav: ಮಹಾಘಟಬಂಧನ್ ಬಿಕ್ಕಟ್ಟಿನ ಚರ್ಚೆ ನಡುವೆಯೇ ಲಾಲುಗೆ ಕರೆ ಮಾಡಿದ ಸೋನಿಯಾ ಗಾಂಧಿ

Sonia Gandhi Calls Lalu Yadav: ಬಿಹಾರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಕೊನೆಗೊಳ್ಳಲಿದೆ ಎಂಬ ಚರ್ಚೆ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.  

Written by - Yashaswini V | Last Updated : Oct 27, 2021, 01:20 PM IST
  • ಕಾರ್ಯಕಾರಿ ಸಮಿತಿ ಸಭೆಯ ನಂತರ ಸೋನಿಯಾ ಗಾಂಧಿ ಅವರು ಲಾಲು ಪ್ರಸಾದ್ ಯಾದವ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ
  • ಉಭಯ ನಾಯಕರು ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ
  • ಉಪಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ಅ ವರ ಈ ಸಂಭಾಷಣೆಯನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತಿದೆ
Sonia Gandhi Calls Lalu Yadav: ಮಹಾಘಟಬಂಧನ್ ಬಿಕ್ಕಟ್ಟಿನ ಚರ್ಚೆ ನಡುವೆಯೇ ಲಾಲುಗೆ ಕರೆ ಮಾಡಿದ ಸೋನಿಯಾ ಗಾಂಧಿ title=
Sonia Gandhi Calls Lalu Yadav

Sonia Gandhi Calls Lalu Yadav:  ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ-ಆರ್‌ಜೆಡಿ ಮತ್ತು ಕಾಂಗ್ರೆಸ್ (RJD-Congress) ನಡುವಿನ ಮೈತ್ರಿ ಮುರಿಯಲಿದೆ ಎಂಬ ಊಹಾಪೋಹಗಳ ಮಧ್ಯೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಸೋನಿಯಾ ಗಾಂಧಿ ಅವರು ಲಾಲು ಪ್ರಸಾದ್ ಯಾದವ್ ಅವರಿಗೆ ಕರೆ ಮಾಡಿದ್ದು, ಉಭಯ ನಾಯಕರು ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ತಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಬಿಹಾರ ಉಸ್ತುವಾರಿ ಮತ್ತು ಬಿಹಾರದ ರಾಜ್ಯಾಧ್ಯಕ್ಷರೊಂದಿಗೆ ದೆಹಲಿಯಲ್ಲಿ ನಡೆದ ಅತ್ಯಂತ ಮಹತ್ವದ ಸಭೆಯ ನಂತರ ಸೋನಿಯಾ ಗಾಂಧಿಯವರು (Sonia Gandhi) ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಫೋನ್ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ಬಿಹಾರ ಕಾಂಗ್ರೆಸ್‌ನ ಉಸ್ತುವಾರಿ ಭಕ್ತ ಚರಣ್ ದಾಸ್ ಮತ್ತು ಇತರ ನಾಯಕರು ಆರ್‌ಜೆಡಿಯೊಂದಿಗೆ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ.  ಆದರೆ ಹೈಕಮಾಂಡ್ ಇದಕ್ಕೆ ಸಿದ್ಧವಿಲ್ಲ ಎಂಬುದು ಉಭಯ ನಾಯಕರ ಫೋನ್ ಮಾತುಕತೆ ಮೂಲಕ ತಿಳಿದುಬಂದಿದೆ. ಬಿಹಾರದ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಈ ಸಂಭಾಷಣೆಯನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತಿದೆ. ಅದಾಗ್ಯೂ, ಉಭಯ ನಾಯಕರ ನಡುವಿನ ಮಾತುಕತೆ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ

ಇದನ್ನೂ ಓದಿ- Indian Railways Alert: ರೈಲು ಪ್ರಯಾಣದ ವೇಳೆ ಈ ತಪ್ಪು ಮಾಡಿದರೆ ದಂಡದ ಜೊತೆಗೆ 3 ವರ್ಷ ಜೈಲು ಶಿಕ್ಷೆ

ವಾಸ್ತವವಾಗಿ, ಬಿಹಾರದ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ವಿಚಾರದಲ್ಲಿ ಮಹಾಘಟಬಂಧನ್‌ನ ಎರಡು ಮಿತ್ರಪಕ್ಷಗಳಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್ ನಡುವಿನ ಕಹಿಯು ಹೆಚ್ಚಾಗುತ್ತಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಕಾಂಗ್ರೆಸ್‌ಗೆ ಎರಡು ಸ್ಥಾನಗಳಲ್ಲಿ ಒಂದನ್ನು ಸಹ ನೀಡದಿರಲು ಕಾರಣವನ್ನು ನೀಡಿದ್ದರು ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿಯನ್ನು ಭಕ್ಚೋನ್‌ಹರ್ ಎಂದು ಸಂಬೋಧಿಸಿದ್ದರು. ಅಂದಿನಿಂದ, ಮಹಾಮೈತ್ರಿಕೂಟದಲ್ಲಿ ಕಹಿ ವಿಷಯಗಳು ಮುನ್ನೆಲೆಗೆ ಬರಲು ಪ್ರಾರಂಭಿಸಿದವು ಮತ್ತು ತಮ್ಮ ಈ ಹೇಳಿಕೆಯನ್ನು ಹಿಂಪಡೆಯುವಂತೆ ಲಾಲು ಯಾದವ್ ಅವರನ್ನು ಕಾಂಗ್ರೆಸ್ ಒತ್ತಾಯಿಸಿತು.

ಇದನ್ನೂ ಓದಿ- Dengue Treatment: ಮೇಕೆ ಹಾಲು ಕುಡಿದರೆ ಡೆಂಗ್ಯೂ ವಾಸಿಯಾಗುತ್ತದೆಯೇ? ವೈದ್ಯರು ಏನು ಹೇಳುತ್ತಾರೆ!

ಇದಾದ ನಂತರ, ಇತ್ತೀಚಿನ ವಾಗ್ವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಮಾಡಿದಷ್ಟು ಯಾರೂ ಕಾಂಗ್ರೆಸ್‌ಗೆ ಸಹಾಯ ಮಾಡಿಲ್ಲ ಎಂದು ಹೇಳಿದ್ದರು. ಇದರೊಂದಿಗೆ, ದೇಶಕ್ಕೆ ಅಗತ್ಯವಿರುವ ರಾಷ್ಟ್ರೀಯ ಪರ್ಯಾಯವಾಗಿ ಕಾಂಗ್ರೆಸ್ ಅನ್ನು ಈಗಲೂ ಪರಿಗಣಿಸುವುದಾಗಿಯೂ ಸ್ಪಷ್ಟಪಡಿಸಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News