ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ: 8 ಐಪಿಎಸ್ ಮತ್ತು 1 ಐಎಎಸ್ ವಿರುದ್ಧ ಕ್ರಮ!
ಪಿಎಂ ಮೋದಿ ಭದ್ರತಾ ಲೋಪ: ಪ್ರಧಾನಿ ನರೇಂದ್ರ ಮೋದಿ ಜನವರಿ 5ರಂದು ಪಂಜಾಬ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಬಟಿಂಡಾ ವಿಮಾನ ನಿಲ್ದಾಣದಿಂದ ಹುಸೇನಿವಾಲಾಗೆ ಹೋಗುವಾಗ ಅವರ ಬೆಂಗಾವಲು ಪಡೆ ಅರ್ಧ ಗಂಟೆಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿತ್ತು.
ನವದೆಹಲಿ: ಪ್ರಧಾನಿ ಮೋದಿಯವರ ಭದ್ರತೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆ ಪಂಜಾಬ್ ಸರ್ಕಾರವು ಕ್ರಮ ಕೈಗೊಂಡಿದೆ. 9 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಾರ್ಜ್ ಶೀಟ್ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ವಿಕೆ ಜಂಜುವಾ ಅವರು ಸಿಎಂ ಭಗವಂತ್ ಮಾನ್‍ಗೆ ವರದಿ ನೀಡಿದ್ದಾರೆ. ಜನವರಿ 5ರಂದು ಪ್ರಧಾನಿ ಮೋದಿ ಪಂಜಾಬ್ ಪ್ರವಾಸಕ್ಕೆ ಹೋದಾಗ ಬಟಿಂಡಾ ವಿಮಾನ ನಿಲ್ದಾಣದಿಂದ ಹುಸೇನಿವಾಲಾಗೆ ಹೋಗುವಾಗ ಅವರ ಬೆಂಗಾವಲು ಪಡೆ ಅರ್ಧ ಗಂಟೆಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿತ್ತು.
1 ಐಎಎಸ್ ಮತ್ತು 8 ಐಪಿಎಸ್ ವಿರುದ್ಧ ಕ್ರಮ!
ಪ್ರಧಾನಿ ಮೋದಿಯವರ ಭದ್ರತೆಯಲ್ಲಿ ನಿರ್ಲಕ್ಷ್ಯ ತೋರಿದ ಐಎಎಸ್ ಅಧಿಕಾರಿ ಮತ್ತು 8 ಐಪಿಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪಂಜಾಬ್ ಸರ್ಕಾರ ಸಿದ್ಧತೆ ನಡೆಸಿದೆ. ಆಗಿನ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಅವರಲ್ಲದೆ, ಡಿಐಜಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ, ಎಸ್‌ಎಸ್‌ಪಿ ಹರ್ಮನ್‌ದೀಪ್ ಸಿಂಗ್ ಹನ್ಸ್, ಎಸ್‌ಎಸ್‌ಪಿ ಚರಂಜಿತ್ ಸಿಂಗ್, ಎಡಿಜಿಪಿ ನಾಗೇಶ್ವರ್ ರಾವ್, ಎಡಿಜಿ ನರೇಶ್ ಅರೋರಾ, ಐಜಿ ರಾಕೇಶ್ ಅಗರ್ವಾಲ್, ಐಜಿ ಇಂದರ್‌ವೀರ್ ಸಿಂಗ್ ಮತ್ತು ಡಿಐಜಿ ಸುರ್ಜಿತ್ ಸಿಂಗ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: Viral Video: ಮದುವೆಯ ಡಾನ್ಸ್ ಫ್ಲೋರ್ ನಲ್ಲಿ ಕುಣಿಯುವುದರಲ್ಲಿ ಮಗ್ನರಾದ ಅತಿಥಿಗಳು, ನಂತರ ನಡೆದಿದ್ದು ನೀವೇ ನೋಡಿ
ವರದಿ ನೀಡುವಂತೆ ಕೋರಿಕೆ
ಇತ್ತೀಚೆಗೆ ಕೇಂದ್ರ ಸರ್ಕಾರವು ಪಂಜಾಬ್ ಸರ್ಕಾರಕ್ಕೆ ಪಿಎಂ ಮೋದಿ ಭದ್ರತಾ ಉಲ್ಲಂಘನೆಯ ಪ್ರಕರಣದಲ್ಲಿ ಕ್ರಮ ಕೈಗೊಂಡ ವರದಿಯನ್ನು ಕೋರಿ ಪತ್ರ ಬರೆದಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಪಂಜಾಬ್ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಜಂಜುವಾರಿಗೆ ಪತ್ರ ಬರೆದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇದುವರೆಗೆ ಕೈಗೊಂಡ ಕ್ರಮಗಳ ವಿವರವಾದ ವರದಿಯನ್ನು ಕೋರಿದ್ದಾರೆ. ಪತ್ರದಲ್ಲಿ ಕ್ರಮದಲ್ಲಿನ ವಿಳಂಬವನ್ನು ಉಲ್ಲೇಖಿಸಿ, ಕ್ರಮ ತೆಗೆದುಕೊಂಡ ವರದಿಯನ್ನು ಸಲ್ಲಿಸುವಂತೆ ಕೇಳಲಾಯಿತು. ಇದರ ನಂತರ ಪಂಜಾಬ್ ಸರ್ಕಾರ ಈಗ ಕ್ರಮಕ್ಕೆ ಮುಂದಾಗಿದೆ.
ಫಿರೋಜ್‌ಪುರ ಪ್ರವಾಸದ ವೇಳೆ ಭದ್ರತೆಯಲ್ಲಿ ಲೋಪ
ಕಳೆದ ವರ್ಷ ಜನವರಿ 5ರಂದು ಪ್ರಧಾನಿ ಮೋದಿಯವರು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಹುಸೇನಿವಾಲಾಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಮಳೆಯಿಂದ ಪ್ರಧಾನಿ ಮೋದಿ ರಸ್ತೆಯ ಮೂಲಕ ಹೋಗಬೇಕಾಯಿತು. ಆದರೆ ಈ ಸಮಯದಲ್ಲಿ ಪ್ರತಿಭಟನಾಕಾರರು ಹುಸೇನಿವಾಲಾದಿಂದ ಸುಮಾರು 30 ಕಿಮೀ ಮಾರ್ಗವನ್ನು ತಡೆದು ಪ್ರತಿಭಟಿಸಿದ್ದರು. ಇದರಿಂದ ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಅರ್ಧ ಘಂಟೆಯವರೆಗೆ ಫ್ಲೈಓವರ್ ಮೇಲೆ ಸಿಲುಕಿಕೊಂಡಿತ್ತು.
ಇದನ್ನೂ ಓದಿ: CISF Raising Day 2023: ಸಿಐಎಸ್ಎಫ್ ರೈಸಿಂಗ್ ಡೇ ಬಗ್ಗೆ ನಿಮಗೆಷ್ಟು ಗೊತ್ತು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.