Viral Video: ಮದುವೆಯ ಡಾನ್ಸ್ ಫ್ಲೋರ್ ನಲ್ಲಿ ಕುಣಿಯುವುದರಲ್ಲಿ ಮಗ್ನರಾದ ಅತಿಥಿಗಳು, ನಂತರ ನಡೆದಿದ್ದು ನೀವೇ ನೋಡಿ

Trending Video: ಮದುವೆ ಸಮಾರಂಭವೊಂದರ ವೇಳೆ ಸಂಭ್ರಮದ ವಾತಾವರಣವಿದ್ದು, ಎಲ್ಲ ಅತಿಥಿಗಳು ಡ್ಯಾನ್ಸ್‌ ಫ್ಲೋರ್‌ನಲ್ಲಿ ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಗ ಇದ್ದಕ್ಕಿದ್ದಂತೆ ಒಂದು ಘಟನೆ ನಡೆದು ಹೋಗುತ್ತದೆ ಮತ್ತು ಅದನ್ನು ನೋಡಿ ಜನ ದಿಗ್ಭ್ರಾಂತರಾಗಿದ್ದಾರೆ.  

Written by - Nitin Tabib | Last Updated : Mar 10, 2023, 08:05 PM IST
  • ವೀಡಿಯೊ ಕುರಿತು ಪ್ರತಿಕ್ರಿಯಿಸಿರುವ ಓರ್ವ ಬಳಕೆದಾರ, "ಕ್ಯಾಮೆರಾಮ್ಯಾನ್ ತನ್ನ ಕರ್ತವ್ಯವನ್ನು ಮರೆತಿಲ್ಲ" ಎಂದು ಬರೆದಿದ್ದಾರೆ.
  • ಇನ್ನೊಂದೆಡೆ ಈ ಕುರಿತು ಕಾಮೆಂಟ್ ಮಾಡಿರುವ ಮತ್ತೊಬ್ಬ ಬಳಕೆದಾರ, "ಕ್ಯಾಮೆರಾಮ್ಯಾನ್ ಯಾವಾಗಲೂ ಕ್ಯಾಮರಾಮನ್ ಆಗಿ ಉಳಿಯುತ್ತಾನೆ".
Viral Video: ಮದುವೆಯ ಡಾನ್ಸ್ ಫ್ಲೋರ್ ನಲ್ಲಿ ಕುಣಿಯುವುದರಲ್ಲಿ ಮಗ್ನರಾದ ಅತಿಥಿಗಳು, ನಂತರ ನಡೆದಿದ್ದು ನೀವೇ ನೋಡಿ title=
ಮದುವೆ ಸಮಾರಂಭದ ಶಾಕಿಂಗ್ ವಿಡಿಯೋ!

Shocking Wedding Video: ಕೆಲವೊಮ್ಮೆ ಮದುವೆ ಸಮಾರಂಭಗಳಲ್ಲಿ ನೋಡಲು ಚಿತ್ರ ವಿಚಿತ್ರ ಸಂಗತಿಗಳು ನಡೆದು ಹೋಗುತ್ತವೆ. ಮದುವೆಯಲ್ಲಿ ನಡೆಯುವ ಕೆಲವು ಘಟನೆಗಳು ಜನರಿಗೆ ಜೀವನವಿಡೀ ನೆನಪಿನಲ್ಲಿ ಉಳಿದುಹೋಗುತ್ತವೆ. ಕೆಲ ಘಟನೆಗಳು ಎಷ್ಟು ಶಾಕಿಂಗ್ ಆಗಿರುತ್ತವೆಂದರೆ, ಅವುಗಳನ್ನು ನೆನಪಿಸಿಕೊಂಡರೆ ಜನರ ಎದೆ ಒಂದು ಕ್ಷಣ ಝಲ್ ಎನ್ನುತ್ತದೆ. ಇಂದಿನ  ವೈರ ಪೋಸ್ಟ್‌ನಲ್ಲಿ ನಾವು ನಿಮಗಾಗಿ ಅಂತಹುದೇ ಒಂದು ಶಾಕಿಂಗ್ ವೀಡಿಯೊವನ್ನು ತಂದಿದ್ದೇವೆ. ಈ ವಿಡಿಯೋ ಅಂತರ್ಜಾಲದಲ್ಲಿ ಬೆಂಕಿಯಂತೆ ಪಸರಿಸುತ್ತಿದೆ. ಈ ವೀಡಿಯೋ ನೋಡಿದ ನಂತರ ಜನರು ಕ್ಯಾಮರಾಮ್ಯಾನ್‌ ಕುರಿತು ಸಕತ್ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ-Viral Video: ಹೋಳಿ ಗುಂಗಿನಲ್ಲಿ ಹಾಡುಹಗಲೇ ಹದ್ದು ಮೀರಿದ ಹುಡುಗ-ಹುಡುಗಿ, ಚಲಿಸುತ್ತಿರುವ ಬುಲೆಟ್ ಮೇಲೆಯೇ...!

ಮದುವೆ ಸಮಾರಂಭವೊಂದರ ವೇಳೆ ಸಂಭ್ರಮಾಚರಣೆಯ ವಾತಾವರಣವಿದ್ದು, ಎಲ್ಲ ಅತಿಥಿಗಳು ಡ್ಯಾನ್ಸ್‌ ಫ್ಲೋರ್‌ನಲ್ಲಿ ಕುಣಿಯುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಆಗ ಇದ್ದಕ್ಕಿದ್ದಂತೆ ನಡೆಯುವ ಒಂದು ಘಟನೆಗೆ  ಎಲ್ಲರೂ ಬೆಚ್ಚಿ ಬೀಳುತ್ತಾರೆ. ವಾಸ್ತವದಲ್ಲಿ, ಜನರ ತೂಕದಿಂದಾಗಿ, ಡ್ಯಾನ್ಸಿಂಗ್ ಫ್ಲೋರ್ ಪಾತಾಳಕ್ಕೆ ಕುಸಿಯುತ್ತದೆ ಮತ್ತು ನೃತ್ಯ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದ ಎಲ್ಲಾ ಅತಿಥಿಗಳು ನೆಲಕ್ಕೆ ಕುಸಿದುಬೀಳುತ್ತಾರೆ. ಹಠಾತ್ತನೆ ವಾತಾವರಣ ಗಂಭೀರವಾಗುತ್ತದೆ, ಆದರೆ ಈ ಸಮಯದಲ್ಲಿ ಕ್ಯಾಮರಾಮನ್ ಸಮರ್ಪಣಾ ಭಾವದಿಂದ ವೀಡಿಯೊಗಳನ್ನು ಮಾಡುವಲ್ಲಿ ತೊಡಗಿರುವ ರೀತಿಯನ್ನು ನೋಡಿದ ಜನರು ತಮ್ಮ ನಗುವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅವರು ಕಾಮೆಂಟ್ ವಿಭಾಗದಲ್ಲಿ ಕ್ಯಾಮೆರಾಮ್ಯಾನ್ ಬಗ್ಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ-Viral Video: ರಸ್ತೆಗಿಳಿದ ವಿಶ್ವದ ಅತಿ ದೊಡ್ಡ ಹಾವು ಅನಕೊಂಡ, ನೋಡಿ ಸ್ಥಭ್ದರಾದ ಜನ!

ವೀಡಿಯೊ ಕುರಿತು ಪ್ರತಿಕ್ರಿಯಿಸಿರುವ ಓರ್ವ ಬಳಕೆದಾರ, "ಕ್ಯಾಮೆರಾಮ್ಯಾನ್ ತನ್ನ ಕರ್ತವ್ಯವನ್ನು ಮರೆತಿಲ್ಲ" ಎಂದು ಬರೆದಿದ್ದಾರೆ. ಇನ್ನೊಂದೆಡೆ ಈ ಕುರಿತು ಕಾಮೆಂಟ್ ಮಾಡಿರುವ ಮತ್ತೊಬ್ಬ ಬಳಕೆದಾರ, "ಕ್ಯಾಮೆರಾಮ್ಯಾನ್ ಯಾವಾಗಲೂ ಕ್ಯಾಮರಾಮನ್ ಆಗಿ ಉಳಿಯುತ್ತಾನೆ". ಈ ರೀತಿಯಾಗಿ  ವಿಡಿಯೋಗೆ ಜನರಿಂದ ಭಾರೀ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಈ ವಿಡಿಯೋವನ್ನು ಲೈಕ್‌ ಮಾಡಿ, ಶೇರ್‌ ಮಾಡುತ್ತಿದ್ದಾರೆ. ನೀವು ಈ ವೀಡಿಯೊವನ್ನು ಇಷ್ಟಪಟ್ಟಿದ್ದರೆ? ಕಾಮೆಂಟ್ ಮಾಡುವ ಮೂಲಕ ನಮಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ.

 
 
 
 

 
 
 
 
 
 
 
 
 
 
 

A post shared by Oops Sorry ! (@oops_sorry30)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News