ಗಾಂಧಿನಗರ: Shrimad Bhagavad Gita Lessons - ವಿದ್ಯಾರ್ಥಿಗಳಿಗೆ ಶ್ರೀಮದ್ ಭಗವದ್ಗೀತೆಯ  ಜ್ಞಾನ ಇರಬೇಕು ಎಂಬ ಉದ್ದೇಶದಿಂದ ಗುಜರಾತ್ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಹೊಸ ಉಪಕ್ರಮವೊಂದರ ಅಡಿ ರಾಜ್ಯದ ಶಾಲೆಗಳಲ್ಲಿ ಶ್ರೀಮದ್ ಭಗವದ್ಗೀತೆಯನ್ನು ಬೋಧಿಸಲು ನಿರ್ಧರಿಸಲಾಗಿದೆ. ಈ ಶಿಕ್ಷಣವನ್ನು 6 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎನ್ನಲಾಗಿದೆ.

COMMERCIAL BREAK
SCROLL TO CONTINUE READING

ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ
ಗೀತೆಯ ಮೌಲ್ಯಗಳು ಮತ್ತು ತತ್ವಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಪಠ್ಯಕ್ರಮದ ಜೊತೆಗೆ ಪ್ರಾರ್ಥನೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಗೀತೆಯನ್ನೂ ಸಹ ಸೇರಿಸಲಾಗುವುದು ಎನ್ನಲಾಗಿದೆ.

ಗೀತಾ ಪಠಣ ಕಡ್ಡಾಯವಾಗಿರಲಿದೆ
ಹೊಸ ಶಿಕ್ಷಣ ನೀತಿಯ (New Education Policy)  ಅಡಿಯಲ್ಲಿ ಗುಜರಾತ್ ಸರ್ಕಾರ ಇದನ್ನು ಘೋಷಿಸಿದೆ. ಇದರ ಅಡಿಯಲ್ಲಿ ಗೀತೆಯನ್ನು ಓದುವುದು ಕಡ್ಡಾಯವಾಗಿರಲಿದೆ. ಶಾಲಾ ಮಕ್ಕಳೂ ಕೂಡ ಗೀತಾ ಶ್ಲೋಕಗಳನ್ನು ಪಠಿಸಲಿದ್ದಾರೆ. 2022-23ರ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎನ್ನಲಾಗಿದೆ.

ಹಲವು ರೀತಿಯ ಸ್ಪರ್ಧೆ ಇರುತ್ತದೆ
ಪಠ್ಯಕ್ರಮದ ಅಡಿಯಲ್ಲಿ, ಶಾಲೆಗಳಲ್ಲಿ ಭಗವದ್ಗೀತೆ ಆಧಾರಿತ ಶ್ಲೋಕ, ಪ್ರಬಂಧ, ನಾಟಕ, ಚಿತ್ರಕಲೆ, ರಸಪ್ರಶ್ನೆ ಮುಂತಾದ ವಿವಿಧ ಸ್ಪರ್ಧೆಗಳು ಮತ್ತು ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎನ್ನಲಾಗಿದೆ. ಅಧ್ಯಯನ ಸಾಮಗ್ರಿಗಳು ಮುದ್ರಣ, ಶ್ರವ್ಯ ಮತ್ತು ದೃಶ್ಯ ರೂಪಗಳಲ್ಲಿ ಇರಲಿವೆ ಎನ್ನಲಾಗಿದೆ.


ಇದನ್ನೂ ಓದಿ-Edible Oil Price : ಅಡುಗೆ ಎಣ್ಣೆ ಬೆಲೆ ಏರಿಕೆಯ ಬಗ್ಗೆ ಬಿಗ್ ನ್ಯೂಸ್ : ಸರ್ಕಾರದಿಂದ ಕಠಿಣ ನಿರ್ಧಾರ

ಹೊಸ ಶಿಕ್ಷಣ ನೀತಿಯಡಿ ನಿರ್ಧಾರ
ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಕೆಲವು ಮೂಲಭೂತ ತತ್ವಗಳನ್ನು ಸಿದ್ಧಪಡಿಸಲಾಗಿದೆ. ಭಾರತದ ಸಮೃದ್ಧಿ, ವಿವಿಧತೆ, ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಗಳು ಹಾಗೂ ಸಂಪ್ರದಾಯಗಳಿಗೆ ಹೊಂದುವಂತೆ ಮಾಡಲು ಪ್ರಯತ್ನಿಸುವುದು ಈ ತತ್ವಗಳಲ್ಲಿ ಒಂದಾಗಿದೆ.. ಹೀಗಿರುವಾಗ ಭಾರತೀಯ ಸಂಸ್ಕೃತಿಯ ಮಾಹಿತಿಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವ ಪ್ರಕ್ರಿಯೆ ಆರಂಭವಾಗಿದೆ.


ಇದನ್ನೂ ಓದಿ-ಭ್ರಷ್ಟಾಚಾರದ ತಡೆಗೆ ಹೆಲ್ಪ್ ಲೈನ್ ಆರಂಭಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್

ವರ್ಷಾಂತ್ಯದ ಚುನಾವಣೆ
ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆಗಳು (Gujarat Assembly Election) ನಡೆಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಒಟ್ಟು 182 ಸ್ಥಾನಗಳಿದ್ದು, ಬಹುಮತ ಸಾಬೀತುಪಡಿಸಲು 92 ಸ್ಥಾನಗಳಅವಶ್ಯಕತೆ ಇದೆ.. ಕಳೆದ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ (BJP Government) 99 ಸ್ಥಾನಗಳನ್ನು ಗೆದ್ದುಕೊಂಡಿತ್ತು.


ಇದನ್ನೂ ಓದಿ-'ಕೇವಲ ಗಾಂಧಿ ಕುಟುಂಬದ ಸದಸ್ಯರು ಮಾತ್ರ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಲ್ಲ'- ಪಿ.ಚಿದಂಬರಂ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.