'ಕೇವಲ ಗಾಂಧಿ ಕುಟುಂಬದ ಸದಸ್ಯರು ಮಾತ್ರ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಲ್ಲ'- ಪಿ.ಚಿದಂಬರಂ

 ಕಾಂಗ್ರೆಸ್ ಪಕ್ಷದ ಇತ್ತೀಚಿನ ಸೋಲಿಗೆ ಗಾಂಧಿಗಳನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಇಂದು ಹೇಳಿದ್ದಾರೆ.

Last Updated : Mar 17, 2022, 06:44 PM IST
  • ಕಾಂಗ್ರೆಸ್ ಪಕ್ಷದ ಇತ್ತೀಚಿನ ಸೋಲಿಗೆ ಗಾಂಧಿಗಳನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಇಂದು ಹೇಳಿದ್ದಾರೆ.
 'ಕೇವಲ ಗಾಂಧಿ ಕುಟುಂಬದ ಸದಸ್ಯರು ಮಾತ್ರ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಲ್ಲ'- ಪಿ.ಚಿದಂಬರಂ    title=

ನವದೆಹಲಿ:  ಕಾಂಗ್ರೆಸ್ ಪಕ್ಷದ ಇತ್ತೀಚಿನ ಸೋಲಿಗೆ ಗಾಂಧಿಗಳನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಇಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಬಂಡಾಯ ನಾಯಕರ ಸಭೆಯ ಒಂದು ದಿನದ ನಂತರ ಅವರು ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಪಿ.ಚಿದಂಬರಂ (Chidambaram) ಪಕ್ಷವನ್ನು ಒಡೆಯಲು ಮುಂದಾಗಕೂಡದು ಎಂದು ಅವರು ಹಿರಿಯ ನಾಯಕರಿಗೆ ಕೋರಿದರು.ಇತ್ತೀಚಿಗೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣಾ ಸೋಲಿನ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.ಇದೇ ವೇಳೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು ಎನ್ನುವ ಸಂಗತಿಯನ್ನು ಚಿದಂಬರಂ ಬಹಿರಂಗಪಡಿಸಿದರು.

ಇದನ್ನೂ ಓದಿ: Jaggesh Birthday:ಅಪ್ಪು ವಿಶ್​ ಮಾಡಿದ್ದ ವಿಡಿಯೋ ಮತ್ತೆ ವೈರಲ್.. ಭಾವುಕರಾದ ನಟ ಜಗ್ಗೇಶ್

"ಗಾಂಧಿ ಕುಟುಂಬದ ಸದಸ್ಯರು ಪಕ್ಷದ ನಾಯಕತ್ವದಿಂದ ಕೆಳಗಿಳಿಯಲು ಮುಂದಾದರು, ಆದರೆ ಅದನ್ನು ಪಕ್ಷದ ಕಾರ್ಯಕಾರಿಣಿ ಸಮಿತಿ ಸ್ವೀಕರಿಸಲಿಲ್ಲ, ಹಾಗಾದರೆ, ಈಗ ನಮ್ಮ ಮುಂದಿರುವ ಆಯ್ಕೆ ಏನು? ನಾವು ಹೊಸ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ವೇಗಗೊಳಿಸಬೇಕಾಗಿದೆ.ಇದನ್ನು ನಾವು ಮೊದಲನೇಯದಾಗಿ ಆಗಷ್ಟ್ ತಿಂಗಳಲ್ಲಿ ಮಾಡಬೇಕಾಗಿದೆ.ಅಲ್ಲಿಯವರೆಗೆ ಸೋನಿಯಾ ಗಾಂಧಿ ಅವರು ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ನಾವು ನಂಬಿದ್ದೇವೆ" ಎಂದು ಚಿದಂಬರ್ ಹೇಳಿದರು.

ಇತ್ತೀಚಿನ ಸೋಲುಗಳಿಗೆ ಗಾಂಧಿ ಕುಟುಂಬದ ಸದಸ್ಯರನ್ನುಮಾತ್ರ ದೂಷಿಸಬೇಕು ಎಂದು ಹೇಳುವುದು ತಪ್ಪು.ನಾನು ಗೋವಾದ ಸೋಲಿನ ಜವಾಬ್ದಾರಿಯನ್ನು ಒಪ್ಪಿಕೊಂಡಂತೆ ಗಾಂಧಿಗಳು ಜವಾಬ್ದಾರಿಯನ್ನು ಒಪ್ಪಿಕೊಂಡರು ಮತ್ತು ಉಳಿದ ನಾಯಕರು ಇತರ ರಾಜ್ಯಗಳ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ"ಎಂದು ಚಿದಂಬರಂ ಹೇಳಿದರು.

ಇದನ್ನೂ ಓದಿ: ಅಪ್ಪು ಜೊತೆಗೆ ವಿಶೇಷ ಫೋಟೋ ಹಂಚಿಕೊಂಡ ನಟ ಯಶ್ 

ಯಾರೂ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಿಲ್ಲ.ಆದರೆ ಜವಾಬ್ದಾರಿಯು ನಾಯಕತ್ವ ಸ್ಥಾನದಲ್ಲಿರುವ ಪ್ರತಿಯೊಬ್ಬರ ಮೇಲಿದೆ, ಅದು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ಎಐಸಿಸಿ ಮಟ್ಟದಲ್ಲಿರಬಹುದು.ಕೇವಲ ಎಐಸಿಸಿ ನಾಯಕತ್ವದ ಮೇಲೆ ಜವಾಬ್ದಾರಿ ಇದೆ ಎಂದು ಹೇಳುವುದು ಸಾಕಾಗುವುದಿಲ್ಲ" ಎಂದು ಚಿದಂಬರಂ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News