ನವದೆಹಲಿ: LIC New Rule - ಇಂದಿನಿಂದ ಭಾರತೀಯ ಜೀವ ವಿಮಾ ನಿಗಮ ಕಂಪನಿಯಲ್ಲಿ ಪ್ರಮುಖ ಬದಲಾವಣೆಯೊಂದು ಜಾರಿಗೆ ಬಂದಿದೆ. ನೀವೂ ಸಹ ಎಲ್‌ಐಸಿ ಕಚೇರಿಗೆ ಹೋಗಬೇಕಾದರೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯ. ಮೇ 10, 2021 ರಿಂದ, ಎಲ್ಲಾ ಎಲ್ಐಸಿ ಕಚೇರಿಗಳಲ್ಲಿ  ವಾರದಲ್ಲಿ (5-Days Working) ಕೇವಲ 5 ದಿನಗಳು ಮಾತ್ರ ಕೆಲಸ ನಡೆಯಲಿಚೆ. ಅಂದರೆ, ಶನಿವಾರ ಮತ್ತು ಭಾನುವಾರ ಕಚೇರಿಗಳನ್ನು ಸಂಪೂರ್ಣವಾಗಿ ಬಂದ್ ಇರಲಿದೆ.


COMMERCIAL BREAK
SCROLL TO CONTINUE READING

"ಏಪ್ರಿಲ್ 15, 2021 ರಂದು ಜಾರಿಗೊಳಿಸಲಾಗಿರುವ ಅಧಿಸೂಚನೆಯಲ್ಲಿ ಭಾರತ ಸರ್ಕಾರವು ಪ್ರತಿ ಶನಿವಾರ ಭಾರತೀಯ ಜೀವ ವಿಮಾ ನಿಗಮದ (Life Insurance Corporation Of India) ಪಾಲಿಗೆ  ಸಾರ್ವಜನಿಕ ರಜಾ ದಿನ ಇರಲಿದೆ ಎಂದು ಘೋಷಿಸಿದೆ" ಎಂದು ಕಂಪನಿ ತನ್ನ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.


ಜಾಹೀರಾತುಗಳ ಮೂಲಕ ಮಾಹಿತಿ
ಇದಕ್ಕೆ ಸಂಬಂಧಿದಂತೆ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಈ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತಿದ್ದು, ಇದರಿಂದ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಎಲ್‌ಐಸಿ  ಹೇಳಿದೆ. ಏಪ್ರಿಲ್ 15, 2021 ರಂದು ಸರ್ಕಾರ ಮಾಡಿರುವ ಘೋಷಣೆಯ ಪ್ರಕಾರ, ಮೇ 10, 2021 ರಿಂದ LIC Office  ಗೆ ಪ್ರತಿ ಶನಿವಾರ ಮತ್ತು ಭಾನುವಾರ ರಜೆ ಇರಲಿದೆ (LIC General Holidays) ಎಂದು LIC ಹೇಳಿದೆ.


ಇದನ್ನೂ ಓದಿ- ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್.! ಪೇಟಿಎಂ ಜೊತೆ ಏರ್ಪಟ್ಟ ಒಪ್ಪಂದ ಏನು..?


ಆನ್ಲೈನ್ ನಲ್ಲಿಯೂ ಕೂಡ ನೀವು ಕೆಲಸ ಮಾಡಬಹುದು
ಎಲ್ಐಸಿ ತನ್ನ ಗ್ರಾಹಕರಿಗೆ ಆನ್‌ಲೈನ್ ಸೌಲಭ್ಯವನ್ನೂ ಸಹ ಒದಗಿಸುತ್ತದೆ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್ https://licindia.in/ ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಎಲ್ಲಾ ಕೆಲಸಗಳನ್ನು ಮಾಡಬಹುದು. ಇದಲ್ಲದೆ, ಕರೋನಾ ಬಿಕ್ಕಟ್ಟಿನ ಮಧ್ಯೆ ತನ್ನ ಗ್ರಾಹಕರ ಅನಾನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಎಲ್ಐಸಿ ಹಕ್ಕು ಇತ್ಯರ್ಥಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆಯನ್ನು ಸಹ ಘೋಷಿಸಿದೆ.


ಇದನ್ನೂ ಓದಿ- ಪಾಲಿಸಿದಾರರಿಗೆ ಎಲ್ಐಸಿ ತರಾತುರಿಯ ಆಲರ್ಟ್ ಜಾರಿ ಮಾಡಿದ್ದೇಕೆ..?


ಕೊರೊನಾ ಕಾಲದಲ್ಲಿ ನಿಮಯ ಸಡಿಲಿಸಿದ LIC
ಇದಲ್ಲದೆ, ಕರೋನಾ ಬಿಕ್ಕಟ್ಟಿನಲ್ಲಿ, ಮರಣದ ಹಕ್ಕುಗಳನ್ನು (Death Claim) ತ್ವರಿತವಾಗಿ ಇತ್ಯರ್ಥಗೊಳಿಸಲು ಕಂಪನಿ ಕೆಲವು ನಿಯಮಗಳನ್ನು ಸಡಿಲಗೊಳಿಸಿದೆ. ಕರೋನಾ ಸಾಂಕ್ರಾಮಿಕದಲ್ಲಿ, ಮುನ್ಸಿಪಲ್ ಡೆತ್ ಸರ್ಟಿಫಿಕೇಟ್ ಬದಲಿಗೆ ಸರ್ಕಾರ, ಇಎಸ್ಐ, ಸಶಸ್ತ್ರ ಪಡೆ, ಕಾರ್ಪೊರೇಟ್ ಆಸ್ಪತ್ರೆ, ಎಲ್‌ಐಸಿ ವರ್ಗ -1 ಅಧಿಕಾರಿ, ಅಥವಾ 10 ವರ್ಷಗಳ ಅನುಭವ ಹೊಂದಿರುವ ಅಭಿವೃದ್ಧಿ ಅಧಿಕಾರಿ, ಅಂತ್ಯಕ್ರಿಯೆಯ ಪ್ರಮಾಣಪತ್ರ, ಸಮಾಧಿ ಪ್ರಮಾಣಪತ್ರವನ್ನು ಜಾರಿಗೊಳಿಸುವ ಯಾವುದೇ ಮರಣ ಪ್ರಮಾಣಪತ್ರ, ಡಿಸ್ಚಾರ್ಜ್ ಸಮರಿ, ಸಾವಿನ ಸಮಯ ಮತ್ತು ಸಾವಿನ ದಿನಾಂಕದ ಜೊತೆಗೆ ಡೆತ್ ಸಮರಿ ಸಲ್ಲಿಸಬಹುದು ಎಂದು ಹೇಳಿದೆ.


ಇದನ್ನೂ ಓದಿ- LIC ಈ ವಿಶೇಷ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ವೃದ್ಧಾಪ್ಯದಲ್ಲಿ ಪಡೆಯಿರಿ ₹ 74300 ಪಿಂಚಣಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.