ನವದೆಹಲಿ : ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಲು ಈ ಹಿಂದೆ ಆಯಾ ಮೊಬೈಲ್ ಕಂಪನಿ ಔಟ್ ಲೆಗಳಿಗೆ ಹೋಗಬೇಕಾಗಿತ್ತು. ಆದರೆ ಇದೀಗ ಆ ಪ್ರಕ್ರಿಯೆ ಸರಳ ಮತ್ತು ಅನುಕೂಲಕರವಾಗಿದೆ. 


COMMERCIAL BREAK
SCROLL TO CONTINUE READING

ಪ್ರಮುಖ ಟೆಲಿಕಾಂ ಕಂಪನಿಗಳಾದ ಏರ್ಟೆಲ್, ವೊಡಫೋನ್ ಮತ್ತು ಐಡಿಯಾ ಗಳು ಪ್ರಸ್ತುತ ಬಳಕೆದಾರರಿಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಆಧಾರಿತ ದೃಢೀಕರಣವನ್ನು ಬಳಸಿಕೊಂಡು ಮೊಬೈಲ್ ಸಂಖ್ಯೆಯ ಮರು ಪರಿಶೀಲನೆಗೆ ಅವಕಾಶ ನೀಡುತ್ತಿವೆ.


ಈ ಆಪರೇಟರ್ಗಳು ಚಂದಾದಾರರು ತಮ್ಮ ಮೊಬೈಲ್ ಸಾಧನದಲ್ಲಿ ಐವಿಆರ್ಎಸ್(IVRS) ಬಳಸಿ ತಮ್ಮ ಆಧಾರ್ ಅನ್ನು ಒಟಿಪಿ ಆಧಾರಿತ ಮರು ಪರಿಶೀಲನೆ ಮಾಡುವುದರೊಂದಿಗೆ ಲಿಂಕ್ ಮಾಡಬಹುದು. 


ನೀವು ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಅನ್ನು ಐವಿಆರ್ ಬಳಸಿ ಹೇಗೆ ಲಿಂಕ್ ಮಾಡಬಹುದು ಎಂಬುದನ್ನು ತಿಳಿಯಿರಿ
    
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 14546 ಗೆ ಕರೆ ಮಾಡಿ.


- ನೀವು ಭಾರತೀಯರೇ ಅಥವಾ ವಿದೇಶಿಯರೇ ಎಂಬುದನ್ನು ಗಣಕೀಕೃತ ಧ್ವನಿಯು ನಿಮ್ಮನ್ನು ಕೇಳುತ್ತದೆ.


- ನಂತರ ನಿಮ್ಮ ಆಯ್ಕೆಯನ್ನು ಆರಿಸಿ.
    
- ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಲು ಐವಿಆರ್ ಪ್ರಕ್ರಿಯೆಯು ನಿಮ್ಮ ಒಪ್ಪಿಗೆಯನ್ನು ಕೇಳುತ್ತದೆ.


- ನಂತರ ನಿಮಗೆ ನೀಡಿದ ಅಪೇಕ್ಷಿತ ಆಯ್ಕೆಯನ್ನು ಒತ್ತಿರಿ.


- ಈಗ ನೀವು ನಿಮ್ಮ 12-ಅಂಕಿ ಆಧಾರ್ ಸಂಖ್ಯೆಯನ್ನು ಒದಗಿಸಬೇಕು ಮತ್ತು ಅದನ್ನು ಖಚಿತಪಡಿಸಲು ಖಚಿತವಾದ ಸಂಖ್ಯೆಯನ್ನು ಒತ್ತಿರಿ.


- ನೀವು ದೃಢೀಕರಿಸಿದ ತಕ್ಷಣ, ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ OTP ಪಡೆಯುತ್ತೀರಿ.


- ನಂತರ, ಐವಿಆರ್ ಪ್ರಕ್ರಿಯೆಯು ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳುತ್ತದೆ.


- ಈ ಹಂತದಲ್ಲಿ ಯುಐಡಿಎಐ ದಾಖಲೆಗಳಿಂದ ನಿಮ್ಮ ಹೆಸರು, ಫೋಟೋ ಮತ್ತು ಹುಟ್ಟಿದ ದಿನಾಂಕವನ್ನು ಆಯ್ಕೆ ಮಾಡಲು ನಿಮ್ಮ ಮೊಬೈಲ್ ಆಪರೇಟರ್ಗೆ ನೀವು ಸಮ್ಮತಿಯನ್ನು ನೀಡಬೇಕಾಗುತ್ತದೆ.
    
- ಮೇಲಿನ ಹಂತವನ್ನು ನೀವು ಒಪ್ಪಿದ ನಂತರ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಮರು ದೃಢೀಕರಿಸಲು ಐವಿಆರ್ ನಿಮ್ಮ ಮೊಬೈಲ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಓದಿ, ಖಚಿತಪಡಿಸಲು ಕೇಳುತ್ತದೆ. 


- ಒಮ್ಮೆ ಖಚಿತಪಡಿಸಿದ ನಂತರ ನಿಮ್ಮ ಮರು-ದೃಢೀಕರಣವು ವಿವರಗಳೊಂದಿಗೆ ಹೊಂದಾಣಿಕೆಯಾಗುತ್ತದೆ. ನಂತರ ನೀವು SMS ಮೂಲಕ ಸ್ವೀಕರಿಸಿದ OTP ಅನ್ನು ಒದಗಿಸಬೇಕು.


- OTP ನೀಡಿದ ನಂತರ, ನೀವು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 1 ಅನ್ನು ಒತ್ತಬೇಕು.


- ಆಗ ಕಡೆಯದಾಗಿ ನಿಮ್ಮ ಆಧಾರ್ ಆಧರಿತ ಮೊಬೈಲ್ ಸಂಖ್ಯೆ ಪುನಃ ಪರಿಶೀಲನೆ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಐವಿಆರ್ ಹೇಳುತ್ತದೆ.