OMG! Hippo ಮೇಲೆ ದಾಳಿ ನಡೆಸಿದ ಸಿಂಹಿಣಿ, ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ
Lioness Vs Hippopotamus Fight: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹಿಪ್ಪೋ ತನ್ನ ಪಾಡಿಗೆ ತಾನು ಸುಮ್ಮನೆ ಕಾಡಿನಲ್ಲಿ ನಡೆದುಕೊಂಡು ಹೋಗುವುದನ್ನು ನೀವು ನೋಡಬಹುದು. ಅಷ್ಟರಲ್ಲಿ ಅಲ್ಲಿಗೆ ಬಂದ ಸಿಂಹಿಣಿ, ಸುಲಭದ ಬೇಟೆ ಎಂದು ಪರಿಗಣಿಸಿ ಅದರ ಮೇಲೆ ದಾಳಿ ನಡೆಸಿದೆ. ಆದರೆ, ಮುಂದೆ ನಡೆದಿದ್ದು, ಸಿಂಹಿಣಿಯ ಪಾಲಿಗೆ ದುಬಾರಿ ಬಿದ್ದಿದೆ.
Lioness Vs Hippopotamus Fight: ಕಾಡಿನಲ್ಲಿ ಇಂತಹ ಹಲವು ಪ್ರಾಣಿಗಳಿದ್ದು, ಕೆಲವೊಮ್ಮೆ ಅವುಗಳ ಜೊತೆಗೆ ಪಂಗಾಗಿಳಿಯುವುದು ಸಿಂಹ, ಸಿಂಹಿಣಿಗೂ ಕೂಡ ದುಬಾರಿಯಾಗಿ ಪರಿಣಮಿಸುತ್ತದೆ. ಸಿಂಹ-ಸಿಂಹಿಣಿಗಳು ಬಾಲ ಒತ್ತಿಕೊಂಡು ಓಡಿಹೋದ ಇಂತಹ ಹಲವು ವಿಡಿಯೋಗಳನ್ನು (Lioness Mess With Hippo,) ನೀವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರಬಹುದು. ಇಂಥದ್ದೇ ವಿಡಿಯೋವೊಂದು (Lioness Vs Hippopotamus Fight Video) ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ. ಈ ವಿಡಿಯೋನಲ್ಲಿ (Lioness Vs Hippo Fight) ಸಿಂಹಿಣಿಯೊಂದು ಹಿಪ್ಪೋ ಮೇಲೆ ದಾಳಿ ನಡೆಸಿದೆ. ವಾಸ್ತವದಲ್ಲಿ, ಇದೊಂದು ಸುಲಭದ ಬೇಟೆ ಎಂದು ಸಿಂಹಿಣಿ ಭಾವಿಸಿರಬೇಕು ಮತ್ತು ಅದು ದಾಳಿ ನಡೆಸಿದೆ.
ಇದನ್ನೂ ಓದಿ-Crocodile Attacked Leopard: ನದಿಯಲ್ಲಿ ನೀರು ಕುಡಿಯಲು ಹೋದ ಚಿರತೆಯನ್ನೇ ತಿಂದ ಮೊಸಳೆ- ವಿಡಿಯೋ
ಹಿಪ್ಪೋ ಮೇಲೆ ದಾಳಿ ನಡೆಸಿದ ಸಿಂಹಿಣಿ ಭಾರಿ ಬೆಲೆ ತೆತ್ತಿದೆ (Wild Animal Fight Video)
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಕೊನೆಗೆ ಸಿಂಹಿಣಿ ತನ್ನ ಪ್ರಾಣವನ್ನು ಉಳಿಸಿಕೊಂಡು ಓಡಿ ಹೋಗಬೇಕಾಗಿ ಬಂದಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ವನ್ಯಜೀವಿಗಳ ಈ ವೀಡಿಯೊದಲ್ಲಿ, ಹಿಪ್ಪೋಪಾಟಮಸ್ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೀವು ಕಾಣಬಹುದು. ಅಷ್ಟರಲ್ಲಿ ಅಲ್ಲಿಗೆ ಒಂದು ಸಿಂಹಿಣಿ ಬಂದಿದೆ. ಹಿಪ್ಪೋ ನೋಡಿ, ಸಿಂಹಿಣಿಯ ಬಾಯಲ್ಲಿ ನೀರೂರಿದೆ. ಅದು ಹಿಪ್ಪೋ ಒಂದು ಸುಲಭದ ಬೇಟೆ ಎಂದು ಭಾವಿಸಿ, ದಾಳಿ ನಡೆಸಿದೆ.
ಇದನ್ನೂ ಓದಿ-Viral Video: ಕೆಸರಿನ ರಸ್ತೆಯಲ್ಲಿ ‘ದೇಸಿ ಸ್ಪೈಡರ್ ಮ್ಯಾನ್’ ಆದ ಯುವಕ..!
ಹಿಪ್ಪೋ ಮೇಲೆ ದಾಳಿ ನಡೆಸಿರುವ ಸಿಂಹಿಣಿ ಅದರ ಬಾಲವನ್ನು ಕಚ್ಚಲು ಯತ್ನಿಸಿದೆ. ಸಿಂಹಿಣಿಯ ಹಠಾತ್ ದಾಳಿಯಿಂದಾಗಿ ಹಿಪ್ಪೋಪಾಟಮಸ್ ಗೆ ಸಿಟ್ಟು ಬಂದಿದೆ. ಕುಪಿತಗೊಂಡ ಹಿಪ್ಪೋ ಸಿಂಹಿಣಿಯ ಮೇಲೆ ಪ್ರತಿದಾಳಿ ನಡೆಸಿದೆ. ಹಿಪ್ಪೋದ ಈ ಆಕಸ್ಮಿಕ ದಾಳಿಗೆ ಸಿಂಹಿಣಿ ತತ್ತರಿಸಿದೆ. ಹಿಪ್ಪೋ ತನ್ನ ಇಡೀ ಬಾಯಿಯಲ್ಲಿ ಸಿಂಹಿಣಿಯ ಮುಖವನ್ನು ಹಿಡಿದು ಕಚ್ಚಿದೆ. ಇದರಿಂದ ಸಿಂಹಿಣಿಯ ಸ್ಥಿತಿ ತುಂಬಾ ಬಿಗಡಾಯಿಸಿ, ಹೇಗೋ ಮಾಡಿ ಅದು ಅಲ್ಲಿಂದ ಅದು ಕಾಲ್ಕಿತ್ತಿದೆ. ಈ ವಿಡಿಯೋವನ್ನು wild_lifeofficialandyawar_wildlife1 ಹೆಸರಿನ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.