Wings India Awards: ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2022ರಲ್ಲಿ 2 ಪ್ರಮುಖ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡ ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Bengaluru Kempegowda International Airport) ತನ್ನ ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಪ್ರಶಂಸೆಗೆ ಒಳಗಾಗಿದ್ದು, ಸ್ಮಾರ್ಟ್ ಆವಿಷ್ಕಾರ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಗೆ ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2022ರಲ್ಲಿ ಎರಡು ಪ್ರಮುಖ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದೆ.‌ 

Written by - Zee Kannada News Desk | Last Updated : Mar 26, 2022, 03:41 PM IST
  • ಈ ಪ್ರಶಸ್ತಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಎಫ್‍ಐಸಿಸಿಐ ಜಂಟಿಯಾಗಿ ಆಯೋಜಿಸಿತ್ತು
  • ಈ ಪ್ರಶಸ್ತಿಗಳನ್ನು ಭಾರತದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಮೈಲಿಗಲ್ಲುಗಳನ್ನು ಸೃಷ್ಟಿಸಿದ ಮತ್ತು ಗಮನಾರ್ಹ ಕೊಡುಗೆಗಳನ್ನು ನೀಡಿದವರಿಗೆ ನೀಡಲಾಗುತ್ತದೆ
  • ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು
Wings India Awards: ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2022ರಲ್ಲಿ 2 ಪ್ರಮುಖ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡ ಬೆಂಗಳೂರು ವಿಮಾನ ನಿಲ್ದಾಣ  title=
Wings India Awards 2022

ಬೆಂಗಳೂರು: ಆರಂಭದಿಂದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇದೀಗ ವಿಂಗ್ಸ್ ಇಂಡಿಯಾ ಅವಾರ್ಡ್ಸ್ (Wings India Awards), 2022ರಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪುರಸ್ಕಾರ ಹಾಗೂ ಆವಿಷ್ಕಾರದಲ್ಲಿ ಶ್ರೇಷ್ಠತೆಗೆ 'ಏವಿಯೇಷನ್ ಇನ್ನೊವೇಷನ್’ ಪುರಸ್ಕಾರಕ್ಕೆ ಪಾತ್ರವಾಗಿದೆ. ಈ ಪ್ರಶಸ್ತಿಗಳನ್ನು ನಾಗರಿಕ ವಿಮಾನಯಾನ ಸಚಿವರಾದ  ಜೋತಿರಾದಿತ್ಯ ಸಿಂದಿಯಾ ಪ್ರದಾನ ಮಾಡಿದರು. 

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Bengaluru Kempegowda International Airport) ತನ್ನ ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಪ್ರಶಂಸೆಗೆ ಒಳಗಾಗಿದ್ದು, ಸ್ಮಾರ್ಟ್ ಆವಿಷ್ಕಾರ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಗೆ ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2022ರಲ್ಲಿ ಎರಡು ಪ್ರಮುಖ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದೆ.‌ 

ಇದನ್ನೂ ಓದಿ- #ArabicKuthuChallenge:ವಿಮಾನ ನಿಲ್ದಾಣದಲ್ಲಿ 'ಹಲಮಿಟಿ ಹಬಿಬೋ' ಹಾಡಿಗೆ ಸಮಂತಾ ಸ್ಟೆಪ್ಸ್.!

ಬೆಂಗಳೂರು ವಿಮಾನ ನಿಲ್ದಾಣವು (Bengaluru Airport) ಸಾಮಾನ್ಯ ವಿಭಾಗದಲ್ಲಿ ಶ್ರೇಷ್ಠ ವಿಮಾನ ನಿಲ್ದಾಣ ಎಂಬ ಪುರಸ್ಕಾರಕ್ಕೆ ಭಾಜನವಾಗಿದೆ ಮತ್ತು 'ಏವಿಯೇಷನ್ ಇನ್ನೊವೇಷನ್’ ಪುರಸ್ಕಾರ ಗಳಿಸಿದೆ. ಈ ಮಾನ್ಯತೆಯು ಉದ್ಯಮದ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಒಂದಾಗಿದೆ. ಗ್ರಾಹಕ ಸೇವೆ, ಸೌಲಭ್ಯಗಳು ಮತ್ತು ಆವಿಷ್ಕಾರಗಳ ಮೌಲ್ಯಮಾಪನದ ನಂತರ ಈ ಪ್ರಶಸ್ತಿ ನೀಡಲಾಗುತ್ತದೆ. 

ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಈ ಪ್ರಶಸ್ತಿಗಳನ್ನು ಮಾರ್ಚ್ 25, 2022ರಂದು ಹೈದರಾಬಾದ್‍ನ ಹೋಟೆಲ್ ತಾಜ್ ಕೃಷ್ಣಾದಲ್ಲಿ ಪ್ರದಾನ ಮಾಡಿದರು.ಈ ವೇಳೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು, ಉದ್ಯಮದ ನಾಯಕರು ಸೇರಿದಂತೆ ಪಾಲುದಾರರು ಉಪಸ್ಥಿತರಿದ್ದರು. 

ಇದನ್ನೂ ಓದಿ- 2021-22 ರಲ್ಲಿ GDP ಬೆಳವಣಿಗೆ 9.5%, ಹಣದುಬ್ಬರ 5.3% ನಿರೀಕ್ಷೆ: RBI

ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಎಫ್‍ಐಸಿಸಿಐ ಜಂಟಿಯಾಗಿ ಆಯೋಜಿಸಿದ್ದ ಈ ಪ್ರಶಸ್ತಿಗಳನ್ನು ಭಾರತದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಮೈಲಿಗಲ್ಲುಗಳನ್ನು ಸೃಷ್ಟಿಸಿದ ಮತ್ತು ಗಮನಾರ್ಹ ಕೊಡುಗೆಗಳನ್ನು ನೀಡಿದವರಿಗೆ ನೀಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News