ಎಣ್ಣೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ -10ರಿಂದ 40 ರೂ ಹೆಚ್ಚಾಗಲಿದೆ ಬೆಲೆ
ಕೋವಿಡ್ ಸೆಸ್ ಹಾಕಿದ ಮೇಲೆ ಮದ್ಯದ ಬೆಲೆ 10 ರಿಂದ 40 ರೂಪಾಯಿಗಳಷ್ಟು ಹೆಚ್ಚಾಗಲಿದೆ. ಅಬಕಾರಿ ನೀತಿ ತಿದ್ದುಪಡಿ ವೇಳೆ, ರೆಗ್ಯುಲರ್ ಕೆಟಗರಿ ಮದ್ಯದ ಮೇಲೆ 90 ಮಿಲಿಗೆ 10 ರೂ.ಗಳ ವಿಶೇಷ ಹೆಚ್ಚುವರಿ ಪರಿಗಣನಾ ಶುಲ್ಕವನ್ನು ಸರ್ಕಾರ ವಿಧಿಸಿದೆ.
ಲಕ್ನೋ : ಇಂದಿನಿಂದ ಉತ್ತರಪ್ರದೇಶದಲ್ಲಿ ಮದ್ಯ ( liquor) ದುಬಾರಿಯಾಗಿದೆ. 2021-22ರ ವರ್ಷಕ್ಕೆ ಅಬಕಾರಿ ನೀತಿಯನ್ನು ತಿದ್ದುಪಡಿ ಮಾಡುವಾಗ ಮದ್ಯದ ಮೇಲೆ ಕೋವಿಡ್ ಸೆಸ್ (Covid Cess) ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸೆಸ್ ಇಂದಿನಿಂದಲೇ ಅನ್ವಯಿಸುತ್ತದೆ. ಹಾಗಾಗಿ ಇಂದಿನಿಂದಲೇ ಮದ್ಯದ ದರ ಏರಿಕೆಯಾಗಲಿದೆ.
ಇಂದಿನಿಂದ ಯುಪಿಯಲ್ಲಿ ಆಲ್ಕೋಹಾಲ್ ದುಬಾರಿ :
ಕೋವಿಡ್ ಸೆಸ್ (Covid Cess) ಹಾಕಿದ ಮೇಲೆ ಮದ್ಯದ ಬೆಲೆ 10 ರಿಂದ 40 ರೂಪಾಯಿಗಳಷ್ಟು ಹೆಚ್ಚಾಗಲಿದೆ. ಅಬಕಾರಿ ನೀತಿ ತಿದ್ದುಪಡಿ ವೇಳೆ, ರೆಗ್ಯುಲರ್ ಕೆಟಗರಿ ಮದ್ಯದ ಮೇಲೆ 90 ಮಿಲಿಗೆ 10 ರೂ.ಗಳ ವಿಶೇಷ ಹೆಚ್ಚುವರಿ ಪರಿಗಣನಾ ಶುಲ್ಕವನ್ನು ಸರ್ಕಾರ ವಿಧಿಸಿದೆ. ಅಂತೆಯೇ, ಪ್ರೀಮಿಯರ್ ವಿಭಾಗದ ಮದ್ಯಕ್ಕೆ 90 ಮಿಲಿಗೆ 10 ರೂ., ಸೂಪರ್ ಪ್ರೀಮಿಯರ್‌ನಲ್ಲಿ 90 ಮಿಲಿಗೆ 20 ರೂ., ಸ್ಕಾಚ್ ಮೇಲೆ 90 ಮಿಲಿಗೆ 30 ರೂಗಳಷ್ಟು ಬೆಲೆ ಹೆಚ್ಚಾಗಲಿದೆ. ಇನ್ನು ಆಮದು ಮಾಡಿದ ಮದ್ಯಕ್ಕೆ 90 ಮಿಲಿಗೆ 40 ರೂ. ಹೆಚ್ಚುವರಿ ಶುಲ್ಕ ವಿಧಿಸಲಿದೆ.
ಇದನ್ನೂ ಓದಿ : SBI MF: ಈ ಹೂಡಿಕೆದಾರರ ಖಾತೆಗೆ 2,489 ಕೋಟಿ ರೂ. ಕಳುಹಿಸಲಿದೆ ಎಸ್‌ಬಿಐ, ನಿಮ್ಮ ಖಾತೆಗೂ ಬರಲಿದೆಯೇ ಈ ಹಣ!
ಏಪ್ರಿಲ್ 1 ರಿಂದ ಹೊಸ ಅಬಕಾರಿ ನೀತಿ ಜಾರಿಯಾಗಿತ್ತು :
ಏಪ್ರಿಲ್ 1 ರಿಂದ ಉತ್ತರಪ್ರದೇಶದಲ್ಲಿ (UP) ಹೊಸ ಅಬಕಾರಿ ನೀತಿ ಜಾರಿಯಲ್ಲಿತ್ತು. ಇದರ ಪ್ರಕಾರ, ವಿದೇಶಗಳಿಂದ ಬರುವ ಸ್ಕಾಚ್, ವೈನ್ (wine) , ವಿಸ್ಕಿ, ವೋಡ್ಕಾ ಸೇರಿದಂತೆ ಎಲ್ಲಾ ವೈನ್‌ಗಳ ಪರವಾನಗಿ ಶುಲ್ಕವನ್ನು ಹೆಚ್ಚಿಸಿತ್ತು. ಹೀಗಾಗಿ ಮದ್ಯದ ಬೆಲೆ ಹೆಚ್ಚಾಗಿತ್ತು. ಇದೀಗ ಮತ್ತೆ ಇಂದಿನಿಂದ ಕೋವಿಡ್ ಸೆಸ್ ಅನ್ನು ಹಾಕಿರುವ ಕಾರಣ, ಮದ್ಯದ ಬೆಲೆ ( liquor price) ಮತ್ತಷ್ಟು ಹೆಚ್ಚಾಗುತ್ತವೆ. ಅಂದರೆ, ಕೇವಲ ಎರಡು ತಿಂಗಳಲ್ಲಿ ಮದ್ಯದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಏಪ್ರಿಲ್ 1 ರಂದು ಜಾರಿಗೆ ತಂದ ಹೊಸ ಅಬಕಾರಿ ನೀತಿಯ ನಂತರ, ವಿದೇಶಿ ಮದ್ಯವು 15 ರಿಂದ 20 ಪ್ರತಿಶತದಷ್ಟು ದುಬಾರಿಯಾಗಿತ್ತು. ಬಿಯರ್ (Beer) ಬೆಲೆಯನ್ನು 10 ರಿಂದ 20 ರೂಪಾಯಿವರೆಗೆ ಇಳಿಸಲಾಗಿದೆ.
ಯುಪಿಯಲ್ಲಿ ಹೆಚ್ಚುತ್ತಿದೆ ಕರೋನಾ ಪ್ರಕರಣ :
ಉತ್ತರ ಪ್ರದೇಶದಲ್ಲಿ ಕರೋನಾ (COVID-19) ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಪ್ರದೇಶದಲ್ಲಿ ಎರಡು ದಿನಗಳವರೆಗೆ ಲಾಕ್‌ಡೌನ್ (Lockdown) ವಿಸ್ತರಿಸಲಾಗಿದೆ. ಮಂಗಳವಾರ ಬೆಳಿಗ್ಗೆ ತನಕ ಭಾಗಶಃ ಕರೋನಾ ಕರ್ಫ್ಯೂ ಅನ್ನು ಗುರುವಾರ ಬೆಳಿಗ್ಗೆ ಏಳು ಗಂಟೆವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ, ಅಗತ್ಯ ಸೇವೆಗಳಿಗೆ ಮೊದಲಿನಂತೆ ವಿನಾಯಿತಿ ಇರುತ್ತದೆ.
ಇದನ್ನೂ ಓದಿ : ಕರೋನಾಕ್ಕೆ ಹೆದರಿ ತಾಯಿಯನ್ನು ಮನೆಯಲ್ಲಿ ಬಂಧಿ ಮಾಡಿ ಪತ್ನಿಯೊಂದಿಗೆ ಪರಾರಿಯಾದ ಮಗ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.