ಇನ್ನು ರಾತ್ರಿ ಮೂರು ಗಂಟೆಯವರೆಗೆ ಲಭ್ಯವಿರಲಿದೆ ಮದ್ಯ , ಸರ್ಕಾರದಿಂದ ಬಹು ದೊಡ್ಡ ನಿರ್ಧಾರ
ಹೊಸ ಅಬಕಾರಿ ನೀತಿ 2022 ರ ಅನುಷ್ಠಾನದ ನಂತರ, ದೆಹಲಿ ಸರ್ಕಾರವು ತನ್ನ ಆದಾಯವನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಸಂಬಂಧ ಇದೀಗ ರಾಜಧಾನಿಯಲ್ಲಿ ಬಾರ್ ತೆರೆಯುವ ಸಮಯದ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ನವದೆಹಲಿ : ದೆಹಲಿ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದರ ಪ್ರಕಾರ, ಬಾರ್ ಆಪರೇಟರ್‌ಗಳಿಗೆ ಮಧ್ಯರಾತ್ರಿ 3 ಗಂಟೆಯವರೆಗೆ ಮದ್ಯ ಪೂರೈಸಲು ಅವಕಾಶ ನೀಡಿದೆ. ಈ ಬಗ್ಗೆ ಸರಕಾರವು ಅಬಕಾರಿ ಇಲಾಖೆಗೆ ಅಗತ್ಯ ಸೂಚನೆಗಳನ್ನು ನೀಡಿದೆ. 2021-22ರ ಅಬಕಾರಿ ನೀತಿಯಂತೆ ಶೀಘ್ರದಲ್ಲೇ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸುವ ಸಾಧ್ಯತೆಯಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಜೆನ್ಸಿಗಳೊಂದಿಗೆ ಸಮನ್ವಯದಿಂದ ಕೆಲಸ :
"ರೆಸ್ಟೋರೆಂಟ್‌ಗಳಲ್ಲಿನ ಬಾರ್‌ಗಳು ಇಲ್ಲಿಯವರೆಗೆ ರಾತ್ರಿ ಒಂದು ಗಂಟೆಯವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು. ಈಗ ಅದನ್ನು ಮಧ್ಯ ರಾತ್ರಿ 3 ಗಂಟೆಯವರೆಗೆ ವಿಸ್ತರಿಸಿದರೆ, ಅಬಕಾರಿ ಇಲಾಖೆಯು ಪೊಲೀಸ್ ಸೇರಿದಂತೆ ಇತರ ಏಜೆನ್ಸಿಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಿದೆ.
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಮತ್ತೆ DA ಹೆಚ್ಚಳಕ್ಕೆ ಮುಂದಾದ ಸರ್ಕಾರ
ನವೆಂಬರ್ 2021 ರಿಂದ ಜಾರಿಗೆ ಬಂದಿರುವ ಹೊಸ ಅಬಕಾರಿ ನೀತಿಯು ಬಾರ್‌ನ ಅವಧಿಯನ್ನು ನೆರೆಯ ನಗರಗಳಿಗೆ ಸಮನಾಗಿ ತರಲು ಶಿಫಾರಸು ಮಾಡಿದೆ. ಹರ್ಯಾಣದ ಎನ್‌ಸಿಆರ್ ನಗರಗಳು, ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲಿ ಬೆಳಿಗ್ಗೆ 3 ಗಂಟೆಯವರೆಗೆ ಬಾರ್‌ಗಳನ್ನು ತೆರೆಯಲು ಅನುಮತಿಸಲಾಗಿದೆ. ಆದರೆ, ಉತ್ತರ ಪ್ರದೇಶದ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಬಾರ್‌ಗಳು ಒಂದು ಗಂಟೆಯವರೆಗೆ ತೆರೆದಿರುತ್ತವೆ.
ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಸ್ವಾಗತ :
ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 550 ಸ್ವತಂತ್ರ ರೆಸ್ಟೋರೆಂಟ್‌ಗಳು ಅಬಕಾರಿ ಇಲಾಖೆಯಿಂದ L-17 ಪರವಾನಗಿಯ ಮೇಲೆ ಭಾರತೀಯ ಮತ್ತು ವಿದೇಶಿ ಬ್ರಾಂಡ್‌ಗಳ ಮದ್ಯವನ್ನು ಪೂರೈಸುತ್ತವೆ. ಸುಮಾರು 150 ಹೊಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ 24 ಗಂಟೆಯೂ ಆಲ್ಕೋಹಾಲ್ ಪೂರೈಕೆಗೆ ಅನುಮತಿ ನೀಡಲಾಗಿದೆ. ಅಂತಹ ರೆಸ್ಟೋರೆಂಟ್‌ಗಳಿಗೆ ಅಬಕಾರಿ ಇಲಾಖೆಯಿಂದ ಎಲ್-16 ಪರವಾನಗಿ ನೀಡಲಾಗುತ್ತದೆ.
ಇದನ್ನೂ ಓದಿ : RBI : ಆರ್‌ಬಿಐ ರೆಪೋ ದರ ಶೇ.0.40 ಹೆಚ್ಚಳ : ಈಗ ಹೆಚ್ಚಾಗಲಿದೆ ನಿಮ್ಮ ಸಾಲದ EMI
ಈ ಕ್ರಮವನ್ನು ಸ್ವಾಗತಿಸಿರುವ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ ಅಧ್ಯಕ್ಷ ಕಬೀರ್ ಸೂರಿ, "ನೀತಿಯಲ್ಲಿ ಶಿಫಾರಸು ಮಾಡಿದಂತೆ ಬಾರ್ ತೆರೆಯುವ ಸಮಯವನ್ನು ರಾತ್ರಿ 3 ಗಂಟೆವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆಯೊಂದಿಗೆ ದೆಹಲಿ ಸರ್ಕಾರವನ್ನು ಸಂಪರ್ಕಿಸಿದ್ದೇವೆ" ಎಂದು ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.