Viral Video: ಬೆಕ್ಕಿನೊಂದಿಗೆ ಈ ಪುಟ್ಟ ಬಾಲಕ ಏನು ಮಾಡಿದ್ದಾನೆ ನೋಡಿ...
ಅನೇಕರು ಸಣ್ಣ ವಯಸ್ಸಿನಲ್ಲಿಯೇ ಹಂಚಿ ತಿನ್ನುವ ಗುಣ ಹೊಂದಿರುವ ಪುಟ್ಟ ಬಾಲಕನ ಹೃದಯ ವೈಶಾಲ್ಯತೆಗೆ ಮತ್ತು ಪ್ರಾಣಿಪ್ರೀತಿಗೆ ಮನಸೋತಿದ್ದಾರೆ.
ನವದೆಹಲಿ: ಪುಟ್ಟ ಬಾಲಕನೊಬ್ಬ ಬೆಕ್ಕಿನೊಂದಿಗೆ ಆಹಾರ ಹಂಚಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣ(Social Media)ದಲ್ಲಿ ಸಖತ್ ವೈರಲ್ ಆಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಪುಟ್ಟ ಹುಡುಗ ಪ್ರಾಣಿಪ್ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಯಾರಾಗ್ತಾರೆ ಪಂಜಾಬ್ ನೂತನ ಮುಖ್ಯಮಂತ್ರಿ? ರೇಸ್ನಲ್ಲಿ ಇರುವ ಹೆಸರುಗಳಿವು..
18 ಸೆಕೆಂಡುಗಳ ಈ ವಿಡಿಯೋದಲ್ಲಿ ಪುಟ್ಟ ಬಾಲಕ ಬೆಕ್ಕಿ(Cat)ಗೆ ತನ್ನಲ್ಲಿರುವ ಬ್ರೆಡ್ ನೀಡುತ್ತಿರುವ ದೃಶ್ಯವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. @buitengebieden_ ಟ್ವಿಟರ್ ಖಾತೆಯಲ್ಲಿ ‘Sharing is caring’ ಎಂಬ ಕ್ಯಾಪ್ಶನ್ ಜೊತೆಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪುಟ್ಟ ಬಾಲಕನ ಮುಗ್ಧತೆ, ಆತನು ಬೆಕ್ಕಿಗೆ ತೋರಿದ ಪ್ರೀತಿ-ಕಾಳಜಿ ನೋಡುವ ಪ್ರತಿಯೊಬ್ಬರ ಮೊಗದಲ್ಲಿಯೂ ಮಂದಹಾಸ ಮೂಡಿಸಿದೆ.
ಇಡಿ ದೇಶದಲ್ಲೇ ಕರ್ನಾಟಕದಲ್ಲಿ ಅಧಿಕ ಬಾಲ್ಯವಿವಾಹ ಪ್ರಕರಣಗಳು ದಾಖಲು ..!
ಅನೇಕರು ಸಣ್ಣ ವಯಸ್ಸಿನಲ್ಲಿಯೇ ಹಂಚಿ ತಿನ್ನುವ ಗುಣ ಹೊಂದಿರುವ ಪುಟ್ಟ ಬಾಲಕನ ಹೃದಯ ವೈಶಾಲ್ಯತೆಗೆ ಮತ್ತು ಪ್ರಾಣಿಪ್ರೀತಿಗೆ ಮನಸೋತಿದ್ದಾರೆ. ನೂರಾರು ಕಾಲ ಚೆನ್ನಾಗಿರುವಂತೆ ಪುಟ್ಟ ಬಾಲಕನಿಗೆ ಅನೇಕರು ಆಶೀರ್ವದಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ನೋಡುವ ಪ್ರತಿಯೊಬ್ಬರಿಗೂ ಇಷ್ಟವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.