Brave Kitty: ಮನೆವರೆಗೂ ಬಂದ ನಾಗರಾಜ, ಬಾಗಿಲಿಗೆ ಅಡ್ಡಲಾಗಿ 30 ನಿಮಿಷ ನಿಂತ ಬೆಕ್ಕು..!

ನಾಗರಹಾವು ಅಡ್ಡಗಟ್ಟಿದ ಬೆಕ್ಕಿನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Written by - Puttaraj K Alur | Last Updated : Jul 22, 2021, 12:33 PM IST
  • ಮನೆಯೊಳೆಗೆ ನುಗ್ಗುತ್ತಿದ್ದ ನಾಗರಹಾವಿಗೆ ಅಡ್ಡಲಾಗಿ ನಿಂತ ಧೈರ್ಯಶಾಲಿ ಬೆಕ್ಕು
  • 30 ನಿಮಿಷ ಸ್ಥಳಬಿಟ್ಟು ಕದಲದೇ ಹಾವಿನಿಂದ ಮನೆ ಸಸ್ಯರಿಗೆ ರಕ್ಷಣೆ ನೀಡಿದ ಬೆಕ್ಕು
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ Cat vs King Cobra ಘಟನೆ
Brave Kitty: ಮನೆವರೆಗೂ ಬಂದ ನಾಗರಾಜ, ಬಾಗಿಲಿಗೆ ಅಡ್ಡಲಾಗಿ 30 ನಿಮಿಷ ನಿಂತ ಬೆಕ್ಕು..! title=
ನಾಗರಹಾವು ಅಡ್ಡಗಟ್ಟಿದ ಧೈರ್ಯಶಾಲಿ ಬೆಕ್ಕು

ಭುಬನೇಶ್ವರ: ನಾವು ಸಾಕುವ ನಾಯಿ, ಬೆಕ್ಕು ಒಂದಲ್ಲ ಒಂದು ರೀತಿ ಮನೆಯ ಸದಸ್ಯರಿಗೆ ರಕ್ಷಣೆ ನೀಡುತ್ತವೆ. ಅಪರಿಚಿತರನ್ನು ಕಂಡರೆ ಸಾಕು ನಾಯಿ ಬೊಗಳುವ ಮೂಲಕ ನಮಗೆ ಎಚ್ಚರಿಕೆ ನೀಡುತ್ತದೆ. ಅದೇ ರೀತಿ ಮನೆಯಲ್ಲಿ ವಿಷಕಾರಿ ಕ್ರಿಮಿ-ಕೀಟಗಳಿಂದ ಬೆಕ್ಕು ರಕ್ಷಣೆ ನೀಡುತ್ತದೆ. ನಾಯಿಗೆ ಒಂದು ತುತ್ತು ಅನ್ನ, ಬೆಕ್ಕಿಗೆ ಒಂದಿಷ್ಟು ಹಾಲು ಹಾಕಿದರೆ ಸಾಕು ಅವು ಸಾಯುವವರೆಗೂ ಮನೆಗೆ ಕಾವಲಾಗಿರುತ್ತವೆ.

ಒಡಿಶಾ ರಾಜಧಾನಿ ಭುಬನೇಶ್ವರದ ಕಪಿಲೇಶ್ವರದಲ್ಲಿ ನಡೆದಿರುವ ಒಂದು ಘಟನೆ ಸದ್ಯ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸದ್ದು ಮಾಡುತ್ತಿದೆ. ಮನೆವರೆಗೂ ಬಂದಿದ್ದ ನಾಗರಹಾವನ್ನು ಬೆಕ್ಕೊಂದು 30 ನಿಮಿಷಗಳ ಕಾಲ ಬಾಗಿಲಿನಲ್ಲೇ ಅಡ್ಡಗಟ್ಟಿ ಮನೆ ಸದಸ್ಯರಿಗೆ ರಕ್ಷಣೆ ನೀಡಿದೆ. ಸಂಪದ್ ಕುಮಾರ್ ಪರಿಡಾ ಎಂಬುವರ ಮನೆಗೆ ಅದೆಲ್ಲಿಂದಲೂ ನಾಗರಹಾವೊಂದು ಸರಸರನೆ ಬಂದುಬಿಟ್ಟಿದೆ. ಇದನ್ನು ಗಮನಿಸಿದ ಬೆಕ್ಕು ಬಾಗಿಲಿನಲ್ಲೇ ಅದನ್ನು ಅಡ್ಡಗಟ್ಟಿದೆ.

ಇದನ್ನೂ ಓದಿ: LPG Booking Offer: ದುಬಾರಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಈ ರೀತಿ 900 ರೂ.ಗಳನ್ನು ಉಳಿಸಬಹುದು!  

ಹಾವು ಕಂಡ ಕೂಡಲೇ ಹೌಹಾರಿದ ಸಂಪದ್ ಕುಮಾರ್ ಮತ್ತು ಮನೆ ಸದಸ್ಯರು ಕೂಡಲೇ ಹಾವಿನ ಸಹಾಯವಾಣಿ ಫೋನ್ ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ‘ಮನೆಯೊಳಗೆ ಬರಲು ಪ್ರಯತ್ನಿಸುತ್ತಿದ್ದ ನಾಗರಹಾವ(King Cobra)ನ್ನು ನಮ್ಮ ಬೆಕ್ಕು 30 ನಿಮಿಷಗಳ ಕಾಲ ಬಾಗಿಲಿನಲ್ಲೇ ತಡೆದು ನಿಲ್ಲಿಸಿದೆ. ಹಾವು ಹಿಡಿಯುವರು ಬರುವವರೆಗೂ ಅದು ಹಾವಿಗೆ ಅಡ್ಡಲಾಗಿ ನಿಂತು ನಮೆಲ್ಲರಿಗೂ ರಕ್ಷಣೆ ನೀಡಿದೆ. ಒಂದೂವರೆ ವರ್ಷದ ಈ ಬೆಕ್ಕು ಮನೆಯ ಸದಸ್ಯನಂತೆ ನಮ್ಮ ಜೊತೆ ಇದೆ ಎಂದು ಸಂಪದ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: SBI: ತನ್ನ 44 ಕೋಟಿ ಗ್ರಾಹಕರಿಗೆ ವಿಡಿಯೋ ಸಂದೇಶ ನೀಡಿರುವ ಎಸ್‌ಬಿಐ ಹೇಳಿದ್ದೇನು?

ಹಾವು ಮನೆಯೊಳಗೆ ಹೊಕ್ಕು ಎಲ್ಲಿ ತನ್ನ ಮನೆಯ ಸದಸ್ಯರಿಗೆ ತೊಂದರೆ ನೀಡುತ್ತದೋ ಎಂದು ಬೆಕ್ಕು ಅದನ್ನು ಬಾಗಿಲಿನಲ್ಲೇ ಅಡ್ಡಹಾಕಿ ನಿಲ್ಲಿಸಿದೆ. ಹಾವು ಹಿಡಿಯುವವರು ಬರುವವರೆಗೂ ಕುಳಿತ ಜಾಗ ಬಿಟ್ಟು ಕದಲಿಲ್ಲ. ಬೆಕ್ಕಿ(Cat)ನ ಈ ಧೈರ್ಯಶಾಲಿ ನಡೆಯಿಂದ ಮನೆಯ ಸದಸ್ಯರ ಪ್ರಾಣರಕ್ಷಣೆಯಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬೆಕ್ಕಿನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News