ಬೆಂಗಳೂರು : ಚಿಕ್ಕ ಮಕ್ಕಳಿಗೆ ಸರಿ ತಪ್ಪುಗಳ ವ್ಯತ್ಯಾಸ ತಿಳಿಯುವುದಿಲ್ಲ. ಮಕ್ಕಳಿಗೆ ಸರಿ ತಪ್ಪುಗಳನ್ನು ತಿಳಿಸಿಕೊಡುವಲ್ಲಿ ಪೋಷಕರ ಪಾತ್ರ ಮಹತ್ವದ್ದು. ಮಕ್ಕಳು ಕೈಗೆ ಸಿಕ್ಕಿದ್ದನೆಲ್ಲಾ ಎತ್ತಿಕೊಂಡು ತಿನ್ನುವುದನ್ನು ನೀವು ಕೂಡಾ ಆಗಾಗ ನೋಡಿರಬಹುದು (Kids Videos). ಮಕ್ಕಳಿಗೆ ಯಾವುದನ್ನು ತಿನ್ನಬೇಕು ಯಾವುದನ್ನು ತಿನ್ನ ಬಾರದು ಎಂಬ ಅರಿವು ಇರುವುದಿಲ್ಲ.  ಎಷ್ಟೋ ಬಾರಿ ಮಕ್ಕಳು ಏನು ಸಿಗುತ್ತದೆಯೋ ಅದನ್ನು ಬಾಯಿಗೆ ಹಾಕಿ ಕೊಳ್ಳುತ್ತಾರೆ. 


COMMERCIAL BREAK
SCROLL TO CONTINUE READING

ಜೀವಂತ ಹಲ್ಲಿಯನ್ನು ಹಿಡಿದು ಬಾಯಿಗೆ ಹಾಕಿದ ಮಗು : 
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social media) ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ (Viral Video). ಈ ವಿಡಿಯೋ ನೋಡಿದರೆ ರೋಮಾಂಚನವಾಗುತ್ತದೆ.  ಚಿಕ್ಕ ಮಗು ಜೀವಂತ ಹಲ್ಲಿಯನ್ನು ಹಿಡಿದು ತಿನ್ನಲು ಪ್ರಯತ್ನಿಸುತ್ತಿರುವುದನ್ನು ಈ ವೀಡಿಯೊದಲ್ಲಿ, ಕಾಣಬಹುದು. ಅದನ್ನು ನೋಡಿಡ ತಾಯಿ ಒಮ್ಮೆಲೇ ಕಿರುಚುತ್ತಾರೆ (Lizard eating boy).  ಆ ಪುಟ್ಟ ಮಗು ಜೀವಂತ ಹಲ್ಲಿಯನ್ನು ನೋಡಿಡ ತಕ್ಷಣ ಅದನ್ನು ಹಿಡಿದು ತನ್ನ ಬಾಯಿಗೆ ಹಾಕಲು ಹೋಗುತ್ತದೆ.


ಇದನ್ನೂ ಓದಿ : Viral video : ಮೊಟ್ಟೆ ಕದಿಯಲು ಬಂದವನ ಮೇಲೆ ದಾಳಿ ಮಾಡಿದ ನವಿಲು, ಎದ್ದು ಬಿದ್ದು ಓಡಿದ ಯುವಕ


ತಾಯಿ ಕೂಡಾ ಮಗುವಿನೊಂದಿಗೆ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು (Viral Video). ಈ ಸಮಯದಲ್ಲಿ, ಒಬ್ಬ ವ್ಯಕ್ತಿ ಅಲ್ಲಿಗೆ ಬರುತ್ತಾರೆ.  ಆ ವ್ಯಕ್ತಿಯ ಟೀ  ಶರ್ಟ್ ಮೇಲೆ ಜೀವಂತ ಹಲ್ಲಿ ಚಲಿಸುತ್ತಿರುವುದು ಕಂಡುಬರುತ್ತದೆ. ತಾಯಿಯ ಮಡಿಲಲ್ಲಿ ಕುಳಿತಿರುವ ಮಗುವಿಗೆ ಆ ವ್ಯಕ್ತಿ ಹಲ್ಲಿಯನ್ನು ತೋರಿಸುತ್ತಾನೆ. ಇದರ ನಂತರ, ಮಗು ಏನನ್ನೂ ಯೋಚಿಸದೆ ನಿರ್ಭಯದಿಂದ ಹಲ್ಲಿಯನ್ನು ಹಿಡಿದು ಬಾಯಿಗೆ ಹಾಕುತ್ತದೆ. 



 


ಇದನ್ನೂ ಓದಿ : Thirsty Snake Video: ಅಂಗೈಯಲ್ಲಿ ನೀರಿಡಿದು ಹಾವಿನ ಬಾಯಾರಿಕೆ ನೀಗಿಸಿದ ವ್ಯಕ್ತಿ! ವಿಡಿಯೋ ವೈರಲ್


ಒಂದು ಸೆಕೆಂಡ್ ತಡವಾಗಿದ್ದರೂ ಮಗು ಹಲ್ಲಿಯನ್ನು ತಿನ್ನುತ್ತಿತ್ತು :
ತಾಯಿ ತಕ್ಷಣವೇ ಮಗುವಿನ ಕೈಯನ್ನು ಹಿಡಿಯುವುದನ್ನು ವೀಡಿಯೊದಲ್ಲಿ (Video)ನೀವು ನೋಡಬಹುದು. ಈ ವೇಳೆ 1 ಸೆಕೆಂಡ್ ತಡವಾಗಿದ್ದರೂ, ಆ ಮಗು ಹಲ್ಲಿಯನ್ನು ಬಾಯಿಗೆ ಹಾಕಿಕೊಳ್ಳುತ್ತಿತ್ತು. ವೀಡಿಯೋವನ್ನು Instagram ನಲ್ಲಿ thesceneryplace ಎಂಬ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.