Shimoga: ಹಲ್ಲೆಗೆ ಯತ್ನಿಸಿದ ವ್ಯಕ್ತಿಗೆ ಬೆತ್ತದ ರುಚಿ ತೋರಿಸಿದ ಪೊಲೀಸರು, ವಿಡಿಯೋ ವೈರಲ್ ಆಗಲು ಕಾರಣ ಏನು?

Shimoga: ಹಲ್ಲೆಗೆ ಯತ್ನಿಸಿದ್ದ ವ್ಯಕ್ತಿಗೆ ಪೊಲೀಸರ ಲಾಟಿ ಏಟಿನ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್​ (Viral Video) ಆಗುತ್ತಿದೆ. ಕಾರಣ ಬುದ್ದಿ ಮಾಂದ್ಯ ವೃದ್ಧನಿಗೆ ಸಾರ್ವಜನಿಕವಾಗಿ ಥಳಿಸಿದ್ದು ಸರಿಯೇ ಎನ್ನುತ್ತಿದೆ ಸೋಶಿಯಲ್ ಮೀಡಿಯಾ!

Written by - Zee Kannada News Desk | Last Updated : Mar 5, 2022, 02:08 PM IST
  • ಜಗಳಕ್ಕಿಳಿದ ವೃದ್ಧನ ಮೇಲೆ ಬೆತ್ತ ಚಲಾಯಿಸಿದ ಪೊಲೀಸರು
  • ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್.
  • ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ ಏನು ತಿಳಿಯಲು ಸುದ್ದಿ ಓದಿ
Shimoga: ಹಲ್ಲೆಗೆ ಯತ್ನಿಸಿದ ವ್ಯಕ್ತಿಗೆ ಬೆತ್ತದ ರುಚಿ ತೋರಿಸಿದ ಪೊಲೀಸರು, ವಿಡಿಯೋ ವೈರಲ್ ಆಗಲು ಕಾರಣ ಏನು? title=
Police Lathi Charge Video Viral

Shimoga: ಹಲ್ಲೆಗೆ ಯತ್ನಿಸಿದ್ದ ವ್ಯಕ್ತಿಗೆ ಪೊಲೀಸರ ಲಾಟಿ ಏಟಿನ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್​ (Viral Video) ಆಗುತ್ತಿದೆ. ಕಾರಣ ಬುದ್ದಿ ಮಾಂದ್ಯ ವೃದ್ಧನಿಗೆ ಸಾರ್ವಜನಿಕವಾಗಿ ಥಳಿಸಿದ್ದು ಸರಿಯೇ ಎನ್ನುತ್ತಿದೆ ಸೋಶಿಯಲ್ ಮೀಡಿಯಾ!

ಹೊಸನಗರ (Hosanagara) ಸಬ್​ ಇನ್​ಸ್ಪೆಕ್ಟರ್ ರಾಜೇಂದ್ರ ನಾಯ್ಕ್​ (Rajendra Nayak) ಹಾಗೂ ಅವರ ವಾಹನ ಚಾಲಕ ಅವಿನಾಶ್ (Avinash) ತಮ್ಮ ಲಾಠಿ ಮೂಲಕ ವೃದ್ಧನೊಬ್ಬರಿಗೆ ಹೊಡೆಯುತ್ತಿರುವ ವಿಡಿಯೋ ಇದೀಗ ವೈರಲ್ (Viral Video)​ ಆಗಿದೆ. ಪ್ರಸ್ತುತ ವಿಡಿಯೋ (Police Lathi Charge Video Viral) ಎಲ್ಲೆಡೆ ಹರಿದಾಡುತ್ತಿದ್ದು, ಸಾರ್ವಜನಿಕರ ಎದುರು ಪೊಲೀಸರು ವೃದ್ಧನಿಗೆ ಹೊಡೆದಿದ್ದನ್ನ ಜಾಲತಾಣದ ಮಂದಿ ಪ್ರಶ್ನಿಸುತ್ತಿದ್ದಾರೆ.  ವಿಡಿಯೋದಲ್ಲಿ ಜನರು ಕೂಡ ವೃದ್ಧನಿಗೆ ಬೈಯ್ಯುತ್ತಿದ್ದು, ಬಳಿಕ ಆತನ ವಿರೋಧ ತಡೆಯಲಾಗದೇ, ಆತನ ಕೈಕಾಲು ಕಟ್ಟಿ ಹಾಕುತ್ತಾರೆ.  ಅಲ್ಲದೆ ಆತ ಪೊಲೀಸರಿಗೆ ಕೆಟ್ಟದಾಗಿ ಬೈಯ್ಯುತ್ತಿರುವುದು ಕಂಡು ಬರುತ್ತಿದೆ. ಆತನನ್ನ ಬುಂದಿಮಾಂದ್ಯ ಎಂದು ಸಹ ಹೇಳಲಾಗುತ್ತಿದೆ.

ಇದನ್ನೂ ಓದಿ-Congress : ಮೃತ ನವೀನ್ ಕುಟುಂಬಕ್ಕೆ ಸಾಂತ್ವಾನ ಹೇಳಿದ 'ಕೈ' ನಾಯಕರು

ನಡೆದಿದ್ದು ಏನು?
ಫೆಬ್ರವರಿ ತಿಂಗಳಲ್ಲಿ ರಾಜೇಂದ್ರ ನಾಯ್ಕ್​ ಮಾರುತಿಪುರ ಗ್ರಾಮದ ವಿಜಾಪುರದಲ್ಲಿ ಸಾವನ್ನಪ್ಪಿದ್ದ ಸುಬ್ರಹ್ಮಣ್ಯ ಎಂಬಾತನ ಸಾವಿನ ಕುರಿತು ಮಹಜರ್​ ಗೆ ಹೋಗಿದ್ದರು. ಈ ವೇಳೆ ಜಟ್ಟಪ್ಪ ಎಂಬಾತ ಪೊಲೀಸರನ್ನ ನೋಡುತ್ತಲೇ ಪಿಎಸ್​ಐ ಹಾಗೂ ಸಿಬ್ಬಂದಿಯ ಕೈಕಾಲುಗಳನ್ನ ಕಚ್ಚಿ ಗಾಯಗೊಳಿಸಿದ್ದಾನೆ.ಕುಡಿದು ಮತ್ತಿನಲ್ಲಿದ್ದಾಗ ಜಟ್ಟಪ್ಪನಿಗೆ ಬೈದು ಬುದ್ಧಿವಾದ ಹೇಳಿದ್ದಕ್ಕೆ ಹೀಗೆ ಮಾಡಿದ್ದ ಎನ್ನಲಾಗಿತ್ತು. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿತ್ತು.

ಇದನ್ನೂ ಓದಿ-ಕಾಲೇಜ್​ನಿಂದ ಡಿಬಾರ್ ಮಾಡಿದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಕರಣವೊಂದರಲ್ಲಿ 14 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಜಟ್ಟಪ್ಪ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ.  ಅಂದು ನಡೆದ ಘಟನೆಯ ವಿಡಿಯೋ ಇದಾಗಿದ್ದು, ಸಾಮಾಜಿಕ ಸೂಕ್ಷ್ಮತೆಯ ಅಡಿಯಲ್ಲಿ ಆತ ಏನೆ ಮಾಡಿದ್ದರು ಸಹ ಆತನನ್ನ ಬಂಧಿಸಿ ಶಿಕ್ಷಿಸಬೇಕಿತ್ತೆ ಹೊರತು ಹೀಗೆ ನಡು ದಾರಿಯಲ್ಲಿ ಮನಸ್ಸೋ ಇಚ್ಚೆ ಹೊಡೆಯಬಾರದಿತ್ತು ಎನ್ನುವ ಅಭಿಪ್ರಾಯ ವಿಡಿಯೋ ನೋಡಿದವರಿಂದ ಕೇಳಿಬರುತ್ತಿದೆ.

ಇದನ್ನೂ ಓದಿ-ಮಂಡ್ಯದಲ್ಲಿ ಮತ್ತೊಂದು ಮರ್ಡರ್; ಬೆಚ್ಚಿಬಿದ್ದ ಸಕ್ಕರೆನಾಡು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News