ನವದೆಹಲಿ: ರಾಜ್ಯಸಭೆಯಲ್ಲಿ  ಸಂಸದರೊಬ್ಬರು  ಕ್ರೋನಿ ಬಂಡವಾಳಶಾಹಿಗಳ ಸಾಲವನ್ನು ಮನ್ನಾ ಮಾಡಿರುವ ಕುರಿತಾಗಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಮೋದಿ ಸರ್ಕಾರವು, ಈವರೆಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳು 2014-15ರ ಹಣಕಾಸು ವರ್ಷದಿಂದ ಸೆಪ್ಟೆಂಬರ್ 2017 ರವರೆಗೆ 2,41,911 ಕೋಟಿ ರೂಪಾಯಿಗಳ ಸಾಲವನ್ನು ಸರ್ಕಾರ  ಮನ್ನಾ ಮಾಡಿದೆ ಎಂದು ಮೋದಿ ಸರ್ಕಾರ ಒಪ್ಪಿಕೊಂಡಿದೆ.


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳದ ರಾಜ್ಯಸಭಾ ಸಂಸದ ರಿತಾಬ್ರಾತ ಬ್ಯಾನರ್ಜಿ "2014 ರ ಸೆಪ್ಟೆಂಬರ್ವರೆಗೂ ಪ್ರಸ್ತುತ ಕೇಂದ್ರ ಸರ್ಕಾರವು 2.4 ಲಕ್ಷ ಕೋಟಿ ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು (ಪಿಎಸ್ಬಿ) ಸಾಲವನ್ನು ಮನ್ನಾ ಮಾಡಿರುವುದು ನಿಜವೇ" ಎಂದು ಅವರು ಪ್ರಶ್ನಿಸಿದ್ದಾರೆ."


ಅಲ್ಲದೆ  ಸಾಲಗಳನ್ನು ಮನ್ನಾ ಮಾಡಿರುವ  ಕಾರ್ಪೋರೇಟ್ಗಳ ವಿವರಗಳನ್ನು ಮತ್ತು  ಅದರ ಕಾರಣಗಳನ್ನು ಸರಕಾರದ ಬಳಿ ಕೇಳಿದ್ದಾರೆ.ಆದರೆ ಸರ್ಕಾರವು  1934 ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, ಅಡಿಯಲ್ಲಿ  ಸರಕಾರವು ರಹಸ್ಯ ಮಾಹಿತಿ ಬಹಿರಂಗಪಡಿಸಲು ಬರುವುದಿಲ್ಲವೆಂದು ಸರ್ಕಾರ ಹೇಳಿದೆ.