ನಲಂದ: ಬಿಹಾರದಲ್ಲಿ ಅಪರಾಧಗಳ ಗ್ರಾಫ್ ನಿರಂತರವಾಗಿ ಹೆಚ್ಚಾಗುತ್ತಿದೆ. ಬುಧವಾರ ಬೆಳಗ್ಗೆ ಸಿಎಂ ನಿತೀಶ್ ಕುಮಾರ್ ತವರು ಜಿಲ್ಲೆಯಲ್ಲಿ RJD ಕಾರ್ಯಕರ್ತನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಕೊಲೆ ಮಾಡಿದ ಬಳಿಕ ಅಪರಾಧಿಯು ತಲೆಮರೆಸಿಕೊಂಡಿದ್ದಾನೆ. ಮೃತ ಆರ್ಜೆಡಿ ನಾಯಕ  ಉದ್ಯಮಿ ಕೂಡ. ಮಂಗಳವಾರ ರಾತ್ರಿ ಇಂದಲ್ ಪಾಸ್ವಾನ್ ಶ್ರದ್ಧಾ ಕಾರ್ಯದಲ್ಲಿ ಭಾಗವಹಿಸಿ ಬಳಿಕ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪರಾಧಿಗಳು ಆತನ ಮೇಲೆ ಮೂರು ಗುಂಡು ಹಾರಿಸಿದ್ದಾರೆ.



ಘಟನೆ ಬಳಿಕ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದಲ್ ಪಾಸ್ವಾನ್ ರಾತ್ರಿಯಿಡೀ ಮನೆಗೆ ಬರದಿದ್ದ ಕಾರಣ ಗಾಬರಿಗೊಂಡ ಮನೆಯವರು ಹುಡುಕಾಟ ಪ್ರಾರಂಭಿಸಿದ್ದಾರೆ. ಬುಧವಾರ ಬೆಳಗ್ಗೆ ಆತನ ಶವ ಮತ್ತು ಬೈಕ್ ಗ್ರಾಮದ ಹೊರಗೆ ಪತ್ತೆಯಾಗಿದೆ. ಗ್ರಾಮಸ್ಥರು ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ.


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತಲುಪಿದರು. ಘಟನೆಯಿಂದ ಕೋಪಗೊಂಡ ಜನರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಯಾಗಿದೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.