Lockdownನಲ್ಲಿ ಕಾಂಡೊಮ್-ರೋಲಿಂಗ್ ಪೇಪರ್ ಗಳಿಗೆ ಹೆಚ್ಚಾದ ಬೇಡಿಕೆ... ವಿಶೇಷತೆ ಏನು ಗೊತ್ತಾ?
Lockdown Effect - ಕೊರೊನಾ ಲಾಕ್ ಡೌನ್ ಹಿನ್ನೆಲೆ ಬಹುತೇಕ ಜನರು ತಮ್ಮ ಮನೆಗಳಲ್ಲೇ ಉಳಿದುಕೊಂಡಿದ್ದರು. ಏತನ್ಮಧ್ಯೆ ಭಾರತೀಯರು ರಾತ್ರಿಗೆ ಹೋಲಿಸಿದರೆ ದಿನದಲ್ಲಿ ಹೆಚ್ಚಾಗಿ ಕಾಂಡೋಮ್ ಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ.
ನವದೆಹಲಿ: Lockdown Effect - ಕೊರೊನಾ ಲಾಕ್ ಡೌನ್ ಹಿನ್ನೆಲೆ ಬಹುತೇಕ ಜನರು ತಮ್ಮ ಮನೆಗಳಲ್ಲೇ ಉಳಿದುಕೊಂಡಿದ್ದರು. ಏತನ್ಮಧ್ಯೆ ಭಾರತೀಯರು ರಾತ್ರಿಗೆ ಹೋಲಿಸಿದರೆ ದಿನದಲ್ಲಿ ಹೆಚ್ಚಾಗಿ ಕಾಂಡೋಮ್ ಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ. ಇನ್ನೊಂದೆಡೆ ರೋಲಿಂಗ್ ಪೇಪರ್ ಗಳ ಖರೀದಿಯಲ್ಲಿಯೂ ಕೂಡ ವ್ಯಾಪಕ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಕುರಿತು Dunzo ಆಪ್ ನೀಡಿರುವ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.
ಆಪ್ ಮಾಧ್ಯಮದ ಮೂಲಕ ರಾತ್ರಿಯ ಹೋಲಿಕೆಯಲ್ಲಿ ದಿನದಲ್ಲಿ ಮೂರುಪಟ್ಟು ಹೆಚ್ಚು ಕಾಂಡೋಮ್ ಗಳನ್ನು ಖರೀದಿಸಲಾಗಿದೆ. ಕೇವಲ ಹೈದರಾಬಾದ್ ಒಂದರಲ್ಲೇ ಕಾಂಡೋಮ್ ಖರೀದಿಯಲ್ಲಿ ಶೇ.6 ರಷ್ಟು ಹೆಚ್ಚಳ ಗಮನಿಸಲಾಗಿದೆ. ಇನ್ನೊಂದೆಡೆ ಚೆನ್ನೈನಲ್ಲಿ ಶೇ.5 ಹಾಗೂ ಜೈಪುರ್ ನಲ್ಲಿ ಶೇ.4 ರಷ್ಟು ಹೆಚ್ಚು ಕಾಂಡೋಮ್ ಗಳು ದಿನದ ಹೊತ್ತಿನಲ್ಲಿ ಮಾರಾಟವಾಗಿವೆ. ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಆರ್ಥಿಕ ರಾಜಧಾನಿ ಮುಂಬೈನಲ್ಲಿ ದಿನದ ಹೊತ್ತಿನಲ್ಲಿ ಶೇ.3 ರಷ್ಟು ಹೆಚ್ಚು ಕಾಂಡೋಮ್ ಗಳು ಮಾರಾಟವಾಗಿವೆ ಎಂದು ವರದಿ ಹೇಳಿದೆ.
ಇದನ್ನು ಓದಿ-c ಕೊರೋನಾದಿಂದ ಆರ್ಥಿಕ ಸಂಕಷ್ಟದಲ್ಲಿ ‘ಬಿಎಸ್ ವೈ ಸರ್ಕಾರ'
ಖಾಸಗಿ ವೃತ್ತಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಬೆಂಗಳೂರಿನ ನಾಗರಿಕರು ಪಕ್ಕದ ರಾಜ್ಯದ ರಾಜಧಾನಿಯಾಗಿರುವ ಚೆನ್ನೈ ನಾಗರಿಕರಿಗಿಂತ ಶೇ.22 ಪಟ್ಟು ಹೆಚ್ಚು ರೋಲಿಂಗ್ ಪೇಪರ್ ಗೆ ಆರ್ಡರ್ ನೀಡಿದ್ದಾರೆ. ಸಿಗರೇಟ್ ತಯಾರಿಕೆಗೆ ಈ ವಿಶೇಷ ಪೇಪರ್ ಅನ್ನು ಬಳಸಲಾಗುತ್ತದೆ.
ಇದನ್ನು ಓದಿ- ಲಾಕ್‌ಡೌನ್ ಎಫೆಕ್ಟ್: ಇತಿಹಾಸದಲ್ಲೇ ಮೊದಲ ಬಾರಿಗೆ ನೌಕರರ ವೇತನ ಕಡಿತಗೊಳಿಸುತ್ತಿರುವ ಟಾಟಾ ಕಂಪನಿ
ಇಲ್ಲಿ ವಿಶೇಷತೆ ಎಂದರೆ ಬಳಕೆದಾರರು ತಮ್ಮ ಹಸಿವು ನೀಗಿಸಲು ಕೂಡ ಆಪ್ ನ ಬಳಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಚಿಕನ್ ಬಿರಿಯಾನಿ ಆರ್ಡರ್ ಮಾಡಲು ಜನರು ಈ ಆಪ್ ಅನ್ನು ಹೆಚ್ಚಾಗಿ ಬಳಕೆ ಮಾಡಿದ್ದಾರೆ. ಮುಂಬೈನಲ್ಲಿ ಜನ ದಾಲ್ ಖಿಚಡಿ ಮೆಚ್ಚಿಕೊಂಡಿದ್ದಾರೆ. ಚೆನ್ನೈನಲ್ಲಿ ನಾಗರಿಕರು ಇಡ್ಲಿ ಡಿಶ್ ಹೆಚ್ಚಾಗಿ ಆರ್ಡರ್ ಮಾಡಿದ್ದಾರೆ. ಗುರುಗ್ರಾಮ್ ಕುರಿತು ಹೇಳುವುದಾದರೆ ಅಲ್ಲಿನ ಜನರು ಆಲು ಟಿಕ್ಕಿ ಬರ್ಗರ್ ಹೆಚ್ಚಾಗಿ ಆರ್ಡರ್ ಮಾಡಿದ್ದಾರೆ. ಮುಂಬೈಗೆ ಹೋಲಿಸಿದರೆ ಪುಣೆಯಲ್ಲಿ ಅತಿಯಾದ ಮ್ಯಾಗಿ ನೂಡಲ್ಸ್ ಆರ್ಡರ್ ಗಳು ಬಂದಿವೆ. ದೆಹಲಿ, ಚೆನ್ನೈ ಹಾಗೂ ಜೈಪುರ್ ನಲ್ಲಿ ಚಹಾ ಹೋಲಿಕೆಯಲ್ಲಿ ಕಾಫಿ ಆರ್ಡರ್ ಗಳು ಹೆಚ್ಚಾಗಿ ಸ್ವೀಕರಿಸಲಾಗಿದೆ.
ಇದನ್ನು ಓದಿ- Coronavirus:ಲಾಕ್‌ಡೌನ್‌ನ ಸಕಾರಾತ್ಮಕ ಪರಿಣಾಮ, ದೇಶದ ಈ ಭಾಗದ ಜನತೆಗೆ ಗುಡ್ ನ್ಯೂಸ್
ಕೊರೊನಾ ಮಹಾಮಾರಿ ಬಳಕೆದಾರರ ಕಲ್ಯಾಣಕ್ಕೆ ರಾಷ್ಟ್ರದ ಒಟ್ಟಾರೆ ಗಮನವನ್ನು ಸೆಳೆದಿದೆ. ಜನರು ದೈನಂದಿನ ಆಹಾರಗಳಿಗೆ ಆರೋಗ್ಯಕರ ಪರ್ಯಾಯಗಳನ್ನು ಆರಿಸಿಕೊಂಡಿದ್ದಾರೆ. ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ಮುಂಬೈ ಜನರು ಸಕ್ಕರೆಗಿಂತ ಹೆಚ್ಚು ಬೆಲ್ಲವನ್ನು ಖರೀದಿಸಿದ್ದಾರೆ.
ಇದನ್ನು ಓದಿ- ಆದಾಯದ ಮೇಲೆ ಲಾಕ್‌ಡೌನ್‌ನ ಪರಿಣಾಮ: ಕೆಲವರಿಗೆ ಉದ್ಯೋಗ ನಷ್ಟ, ಹಲವರಿಗೆ ಪಾರ್ಟ್ ಟೈಂ job
ತಮ್ಮ ಸಾಕು ಪ್ರಾಣಿಗಳ ಕಾಳಜಿ ವಹಿಸಲು ಕೂಡ ಜನರು ಈ ಆಪ್ ಅನ್ನು ಬಳಸಿದ್ದಾರೆ. ಈ ವಿಷಯದಲ್ಲಿ ಗುರುಗ್ರಾಮ್ ಮೊದಲ ಸ್ಥಾನದಲ್ಲಿದೆ. ಬೆಂಗಳೂರು, ಪುಣೆ, ಚೆನ್ನೈ ಹಾಗೂ ಹೈದರಾಬಾದ್ ನಲ್ಲಿ ಬೆಕ್ಕಿನ ಆಹಾರದ ಆರ್ಡರ್ ಗಳನ್ನು ಹೆಚ್ಚಾಗಿ ಪಡೆಯಲಾಗಿದೆ. ಕಳೆದ ಕೆಲ ವರ್ಷಗಳ ಹೋಲಿಕೆಯಲ್ಲಿ ಜನರ ಓದುವ ಹವ್ಯಾಸದಲ್ಲಿಯೂ ಕೂಡ ಈ ವರ್ಷದಲ್ಲಿ ಏರಿಕೆ ಗಮನಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.