ಲಕ್ನೋ: ಲೋಕಸಭಾ ಚುನಾವಣೆ 2019ಕ್ಕೆ ರಣತಂತ್ರ ಸಿದ್ಧಪಡಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಬಹುಜನ ಸಮಾಜಪಕ್ಷದ ಮುಖ್ಯಸ್ಥೆ ಮಾಯಾವತಿ ಏಪ್ರಿಲ್ 7 ರಿಂದ ಪ್ರಚಾರ ಆರಂಭಿಸಲಿದ್ದಾರೆ. 


COMMERCIAL BREAK
SCROLL TO CONTINUE READING

ಲೋಕಸಭೆ ಚುನಾವಣೆಯಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದು, ಮೊದಲ ಜಂಟಿ ರ್ಯಾಲಿ ಏಪ್ರಿಲ್ 7ರಂದು ಮುಸ್ಲಿಂ ಸಮುದಾಯದ ಪ್ರಧಾನವಾಗಿರುವ ಸಹರಾನ್ಪುರದ ದೇವಬಂದ್‌ನಲ್ಲಿ ನಡೆಯಲಿದೆ. 


ಈ ರ್ಯಾಲಿಯಲ್ಲಿ ಅಖಿಲೇಶ್, ಮಾಯಾವತಿ ಅಷ್ಟೇ ಅಲ್ಲದೆ, ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಚೌಧರಿ ಅಜಿತ್ ಸಿಂಗ್ ಸಹ ಭಾಗವಹಿಸಲಿದ್ದಾರೆ. ಅಜಿತ್ ಸಿಂಗ್ ಅವರು ಮುಜಾಫರ್ ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 


ಏತನ್ಮಧ್ಯೆ ನವರಾತ್ರಿಯಲ್ಲಿ ಸಹರಾನ್ಪುರದಿಂದ ಪ್ರಚಾರ ಆರಂಭಿಸುತ್ತಿರುವುದರ ಹಿಂದೆ ವಿಶೇಷ ತಂತ್ರವಿದೆ. ತಾವು ಪವಿತ್ರ ಉತ್ಸವದಲ್ಲಿ ಚುನಾವಣಾ ಪ್ರಚಾರ ಆರಂಭಿಸುತ್ತಿದೇವೆ ಎಂಬ ಸಂದೇಶವನ್ನು ಹಿಂದುಗಳಿಗೆ ತಲುಪಿಸುವ ಉದ್ದೇಶದಿಂದ ಎಸ್ಪಿ-ಬಿಎಸ್ಪಿ ಪಕ್ಷಗಳು ನವರಾತ್ರಿಯಲ್ಲಿ ಪ್ರಚಾರ ಹಮ್ಮಿಕೊಂಡಿವೆ. ಇದಕ್ಕೆ ಮತ್ತೊಂದು ಕಾರಣ ಜಾಟ್ ಸಮುದಾಯದ ವೋಟ್ ಬ್ಯಾಂಕ್. ಈ ಬಾರಿ ಜಾಟ್-ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ಎಸ್ಪಿ-ಬಿಎಸ್ಪಿ ಹಾಗೂ ಆರ್ಎಲ್ಡಿ ನಾಯಕರು ಈ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.