ನವದೆಹಲಿ: ಲೋಕಸಭಾ ಚುನಾವಣೆ 2019ಕ್ಕೆ ಭಾರತೀಯ ಜನತಾ ಪಕ್ಷ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಪಿ. ನಡ್ಡ ಪತ್ರಿಕಾಗೋಷ್ಠಿಯ ಮೂಲಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು. ಕೇಂದ್ರ ಚುನಾವಣಾ ಸಮಿತಿಯ ಹಲವು ಸುತ್ತಿನ ಸಭೆಯ ನಂತರ 84 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದರು.


COMMERCIAL BREAK
SCROLL TO CONTINUE READING

ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಮೊದಲಿದ್ದು, ಅವರು ಮತ್ತೆ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ. ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಲಾಲ್ ಕೃಷ್ಣ ಅಡ್ವಾಣಿ ಅವರ ಸಂಸತ್ ಕ್ಷೇತ್ರವಾಗಿರುವ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 90ರ ಹರೆಯದ ಎಲ್.ಕೆ. ಅಡ್ವಾಣಿ ವಯಸ್ಸಿನ ಕಾರಣದಿಂದ ಚುನಾವಣೆಯಿಂದ ದೂರ ಉಳಿಯುವ ಸಾಧ್ಯತೆಯೂ ಇದೆ.


ಬಿಹಾರದ ಎಲ್ಲಾ 17 ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷದ ಅಂತಿಮಗೊಳಿಸಿದೆ ಎಂದು ನಡ್ಡ  ಹೇಳಿದ್ದಾರೆ. ಮೈತ್ರಿ ಪಕ್ಷದೊಂದಿಗೆ ರಾಜ್ಯದಲ್ಲಿ ಈ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು ಎಂದು ಅವರು ತಿಳಿಸಿದರು.


ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ, ಉತ್ತರಪ್ರದೇಶದಲ್ಲಿ 28, ಗುಜರಾತ್ನಿಂದ 16, ಅಸ್ಸಾಂನಿಂದ 8, ಅರುಣಾಚಲ ಪ್ರದೇಶದಿಂದ 2, ಛತ್ತೀಸ್ಗಢದಿಂದ 5, ಜಮ್ಮು-ಕಾಶ್ಮೀರದಿಂದ 5, ಕರ್ನಾಟಕದಿಂದ 21, ಕೇರಳದಿಂದ 13, ಮಣಿಪುರದಿಂದ 2, ಮಿಜೋರಾಂನಿಂದ 10, ಒರಿಸ್ಸಾದಿಂದ 10, ಸಿಕ್ಕಿಂನಿಂದ 16, ತಮಿಳುನಾಡಿನಿಂದ 5, ತೆಲಂಗಾಣದಿಂದ 10, ತ್ರಿಪುರದಿಂದ 2, ಉತ್ತರಖಂಡದಿಂದ 5, ಪಶ್ಚಿಮ ಬಂಗಾಳದಿಂದ 27 ಮತ್ತು ಆಂಧ್ರಪ್ರದೇಶದ ಇಬ್ಬರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.


ಬಿಜೆಪಿಯ ಮೊದಲ ಪಟ್ಟಿಯಲ್ಲಿ ಪ್ರಮುಖ ಅಭ್ಯರ್ಥಿಗಳು:


  • ವಾರಾಣಸಿ: ನರೇಂದ್ರ ಮೋದಿ

  • ಗಾಂಧಿನಗರ: ಅಮಿತ್ ಶಾ

  • ಅಮೇಥಿ: ಸ್ಮೃತಿ ಇರಾನಿ

  • ಘಜಿಯಾಬಾದ್- ಜನರಲ್ ವಿ.ಕೆ.ಸಿಂಗ್

  • ನೊಯ್ಡಾ- ಕೇಂದ್ರ ಸಚಿವ ಡಾ | ಮಹೇಶ್ ಶರ್ಮಾ

  • ಬಾಗ್ಪಾಟ್- ಕೇಂದ್ರ ಸಚಿವ ಸತ್ಯಪಾಲ್ ಸಿಂಗ್

  • ಮುಜಫರ್ನಗರ- ಸಂಜೀವ್ ಬಿಯಾಲನ್

  • ನಾಗಪುರ- ಕೇಂದ್ರ ಸಚಿವ ನಿತಿನ್ ಗಡ್ಕರಿ

  • ಮೀರತ್- ರಾಜೇಂದ್ರ ಅಗರ್ವಾಲ್

  • ಬಾಂದಾಯು-  ಸಂಗ್ಯಾಮಿತ್ರ ಮೌರ್ಯ

  • ಘಜಿಪುರ- ಮನೋಜ್ ಸಿನ್ಹಾ

  • ಹಾರ್ದೊಯ್- ಜೈಪ್ರಕಾಶ್ ರಾವತ್

  • ಫತೇಪುರ್ ಸಿಕ್ರಿ - ರಾಜ್ಕುಮಾರ್ ಚಾಹಲ್

  • ಬರೇಲಿ- ಸಂತೋಷ್ ಗಂಗವಾರ್

  • ಮಥುರಾ- ಹೇಮಾ ಮಾಲಿನಿ

  • ವಾರ್ಧಾ- ರಾಮ್ದಾಸ್ ಚಂದ್ರಬಾನ್

  • ಮುಂಬೈ ಉತ್ತರ ಕೇಂದ್ರ- ಪೂನಮ್ ಮಹಾಜನ್

  • ಮುಂಬೈ ಉತ್ತರ- ಗೋಪಾಲ್ ಶೆಟ್ಟಿ

  • ಅಮ್ವ್ಲಾ- ಧರ್ಮೇಂದ್ರ ಕುಮಾರ್

  • ಶಾಂಗಾಲಿ- ಸಂಜಯ್ ಕಾಕ

  • ಅಮ್ರೋಹ- ಕನ್ವರ್ಪಾಲ್ ಸಿಂಗ್

  • ಲಾತೂರ್- ಸುಧಾಕರ ರಾವ್

  • ಅರುಣಾಚಲ ಪಶ್ಚಿಮದ- ಕಿರಣ್ ರಿಜಿಜು 











ಕರ್ನಾಟಕದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಗುರುವಾರ ರಾತ್ರಿ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಹಾಲಿ 15 ಸಂಸದರ ಪೈಕಿ 14 ಮಂದಿ ಮತ್ತೆ ಅವಕಾಶ ಪಡೆದುಕೊಂಡಿದ್ದರೆ ಕೊಪ್ಪಳ ಕ್ಷೇತ್ರದ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ.