ನವದೆಹಲಿ: 2001ರ ಡಿಸೆಂಬರ್ 13ರಂದು ಸಂಸತ್​ ಭವನದ ಮೇಲೆ ಉಗ್ರರ ದಾಳಿ ನಡೆದಿತ್ತು. ದೇಶದ ಇತಿಹಾಸದಲ್ಲಿ ಅಂತ್ಯಂತ ಭೀಕರ ಘಟನೆ ನಡೆದು ಇಂದಿಗೆ 22 ವರ್ಷಗಳು ಕಳೆದಿವೆ.  ಇದೀಗ ಇದೇ ದಿನ ಇಡೀ ದೇಶವೇ ಮತ್ತೊಂದು ಕರಾಳ ಘಟನೆಗೆ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ನೂತನ ಸಂಸತ್​ ಭವನದಲ್ಲಿ ಬುಧವಾರ ಭಾರೀ ಭದ್ರತಾ ಲೋಪವಾಗಿದೆ.


COMMERCIAL BREAK
SCROLL TO CONTINUE READING

ಹೌದು, 2 ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಅಪರಿಚಿತರು ಸದನದ ಒಳಗೆ ಮತ್ತು ಹೊರಗೆ ಭಯದ ವಾತಾವರಣ ಸೃಷ್ಟಿ ಮಾಡಿರುವ ಘಟನೆ ನಡೆದಿದೆ. ಕಲಾಪ ನಡೆಯುತ್ತಿದ್ದ ವೇಳೆಯೇ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದ ಇಬ್ಬರು ಯುವಕರು ಸದನದ ಒಳಪ್ರವೇಶಿಸಿ ಸಂಸದರು ಕೂರುವ ಬೆಂಚುಗಳ ಮೇಲೆ ಓಡಾಡಿದ್ದಾರೆ. ಬಳಿಕ ಹಳದಿ ಬಣ್ಣ ಹೊರಸೂಸುವ ವಸ್ತು(ಕಲರ್ ಗ್ಯಾಸ್)ವನ್ನು ಹಿಡಿದು ಸ್ಪೀಕರ್​ ಓಂ ಬಿರ್ಲಾ ಕಚೇರಿಯತ್ತ ನುಗ್ಗಿದ್ದಾರೆ.


ಅಪರಿಚಿತ ವ್ಯಕ್ತಿಗಳ ಈ ನಡೆಯಿಂದ ಭಯಭೀತರಾದ ಸಂಸದರು ದಿಕ್ಕಾಪಾಲಾಗಿ ಓಡಿದ್ದಾರೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.   ನೂತನ ಸಂಸತ್ ಭವನದಲ್ಲಿ ಉಂಟಾದ ಈ ಭದ್ರತಾ ಲೋಪದ ಬಗ್ಗೆ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಿಂದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಭಾರೀ ಭದ್ರತಾ ವ್ಯವಸ್ಥೆ ಹೊಂದಿರುವ ಲೋಕಸಭೆಯ ಒಳಗೆ ಅಪರಿಚಿತರು ಏಕಾಏಕಿ ನುಗ್ಗಿ ಈ ರೀತಿ ವರ್ತಿಸಲು ಹೇಗೆ ಸಾಧ್ಯವಾಯಿತು ಅನ್ನೋ ಪ್ರಶ್ನೆ ಮೂಡಿದೆ.


ಪ್ರಥಮ ಬಾರಿಗೆ ಶಾಸಕನಾದ ವ್ಯಕ್ತಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಬಿಜೆಪಿ..! ಏಕೆ ಗೊತ್ತೆ..?


ಪ್ರತಾಪ್ ಸಿಂಹ ಹೆಸರಲ್ಲಿ ವಿಸಿಟಿಂಗ್ ಪಾಸ್!


ಓಂ ಬಿರ್ಲಾ, ‘ಶೂನ್ಯ ಸಮಯದ ವೇಳೆ ನಡೆದ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಕೇವಲ ಹೊಗೆ ಎಂಬುದು ತಿಳಿದುಬಂದಿದೆ. ಈ ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ’ವೆಂದು ಹೇಳಿದ್ದಾರೆ.   


ಇದನ್ನೂ ಓದಿ: ಭಜನ್‌ಲಾಲ್‌ ಶರ್ಮಾಗೆ ರಾಜಸ್ಥಾನದ ಸಿಎಂ ಪಟ್ಟ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.