Court Notice: ಶಿವನಿಗೆ ನ್ಯಾಯಾಲಯದ ನೋಟಿಸ್, ಆಟೋ ಮೂಲಕ ನ್ಯಾಯಾಲಯ ತಲುಪಿದ ಶಿವಲಿಂಗ
Court Notice - ಹಲವು ಬಾರಿ ನ್ಯಾಯಾಲಯದ ನೋಟಿಸ್ ಗಳು ತಪ್ಪಾಗಿ ಜಾರಿಯಾಗುತ್ತವೆ ಮತ್ತು ಜನರು ಅವುಗಳ ಕುರಿತು ಮಾತನಾಡುವುದನ್ನು ನೀವು ಕೇಳಿರಬಹುದು, ಆದರೆ, ದೇವಾದಿದೇವ ಶಿವನಿಗೆ (Lord Shiva) ಕೋರ್ಟ್ ನೋಟಿಸ್ ನೀಡಿರುವುದನ್ನು ನೀವು ಎಂದಾದರು ಕೇಳಿದ್ದೀರಾ? ಅಷ್ಟೇ ಅಲ್ಲ ಕೋರ್ಟ್ ನೀಡಿರುವ ಈ ನೋಟಿಸ್ (Court Notice) ಗೆ ಪ್ರತಿಕ್ರಿಯೆಯಾಗಿ ಶಿವ ನ್ಯಾಯಾಲಯಕ್ಕೂ ಕೂಡ ಹಾಜರಾಗಿದ್ದಾನೆ. ಆದರೆ, ಆ ವೇಳೆ ನ್ಯಾಯಾಧೀಶರೇ ಕೋರ್ಟ್ ರೂಮ್ ನಿಂದ ಕಾಣೆಯಾಗಿದ್ದರು.
Court Notice - ಛತ್ತೀಸ್‌ಗಢದ (Chattisgarh) ರಾಯಗಢ (Raigarh) ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅಲ್ಲಿನ ತಾಲೂಕಾ ನ್ಯಾಯಾಲಯ ವತಿಯಿಂದ ಕೆಲ ದಿನಗಳ ಹಿಂದೆ ಶಿವನಿಗೆ (Lord Shiva) ಖಾಸಗಿ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಶಿವ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಲು ತಲುಪಿದ್ದಾನೆ. ಸಮಯಕ್ಕೆ ಸರಿಯಾಗಿ ದೇವರು ತಲುಪಿದರೂ ಕೂಡ ನೋಟಿಸ್ ಜಾರಿಗೊಳಿಸಿದ ತಹಸಿಲ್ ನ್ಯಾಯಾಧೀಶ ಮಾತ್ರ ಕಚೇರಿಗೆ ಗೈರು ಹಾಜರಾದ ಕಾರಣ, ಶಿವನಿಗೆ ಇದೀಗ ಮುಂದಿನ ದಿನಾಂಕ ನೀಡಲಾಗಿದೆ.
ಇದನ್ನೂ ಓದಿ-ಜನಸಾಮಾನ್ಯರಿಗೆ ಮತ್ತೊಮ್ಮೆ ಹೊರೆಯಾದ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ಚತ್ತೀಸ್ಗಡ್ ದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು
ರಾಯಗಡ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದ ವಾರ್ಡ್ ಸಂಖ್ಯೆ 25 ಕೌಹಕುಂದದಲ್ಲಿ, ಮಹಿಳೆಯೊಬ್ಬರು ಖಾಸಗಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆಗೆದುಹಾಕಲು ಛತ್ತೀಸ್‌ಗಢ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ-Delhi Budget 2022 Live Updates: ಕಳೆದ ವರ್ಷದ ಬಜೆಟ್ ರಿಪೋರ್ಟ್ ಕಾರ್ಡ್ ಮಂಡಿಸಿದ ಮನೀಶ್ ಸಿಸೋಡಿಯಾ
ಈ ಹಿನ್ನೆಲೆ ಶಿವ ದೇವಸ್ಥಾನಕ್ಕೆ ನೋಟಿಸ್ ನೀಡಲಾಗಿದೆ
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಯಗಡ ತಹಸಿಲ್ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ತಹಸಿಲ್ ಕೋರ್ಟ್ ಸಂಬಂಧಪಟ್ಟವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಅದರಲ್ಲಿ ಕೌಹಕುಂದದ ಶಿವಮಂದಿರಕ್ಕೂ ಕೂಡ ನೋಟಿಸ್ ನೀಡಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.