Delhi Budget 2022 Live Updates: ಕಳೆದ ವರ್ಷದ ಬಜೆಟ್ ರಿಪೋರ್ಟ್ ಕಾರ್ಡ್ ಮಂಡಿಸಿದ ಮನೀಶ್ ಸಿಸೋಡಿಯಾ

ಸತತ 5ನೇ ಬಾರಿಗೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಆರ್ಥಿಕ ವರ್ಷ 2021-22ರ ದೆಹಲಿ ಫಲಿತಾಂಶ ಬಜೆಟ್ ಅನ್ನು ಮಂಡಿಸಿದರು.

Written by - Zee Kannada News Desk | Last Updated : Mar 25, 2022, 09:50 PM IST
  • ● ಸರ್ಕಾರಿ ಶಾಲೆಗಳಲ್ಲಿ 13,181 ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ
    ● ಸರ್ಕಾರಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 15 ಲಕ್ಷದಿಂದ 17.7 ಲಕ್ಷಕ್ಕೆ ಏರಿಕೆ
    ● ಒಂದು ವರ್ಷದಲ್ಲಿ 126 ದೆಹಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸ್ಟಾರ್ಟಪ್‌ಗಳು ಹೂಡಿಕೆಯನ್ನು ಪಡೆದಿವೆ
    ● 6,823 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
Delhi Budget 2022 Live Updates: ಕಳೆದ ವರ್ಷದ ಬಜೆಟ್ ರಿಪೋರ್ಟ್ ಕಾರ್ಡ್ ಮಂಡಿಸಿದ ಮನೀಶ್ ಸಿಸೋಡಿಯಾ title=
Photo Courtesy: Facebook

ನವದೆಹಲಿ: ಸತತ 5ನೇ ಬಾರಿಗೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಆರ್ಥಿಕ ವರ್ಷ 2021-22ರ ದೆಹಲಿ ಫಲಿತಾಂಶ ಬಜೆಟ್ ಅನ್ನು ಮಂಡಿಸಿದರು.

ಇದನ್ನೂ ಓದಿ : Siddaramaiah : ಹಿಜಾಬ್ ವಿವಾದ ಆಗಲು ಬಿಜೆಪಿಯೇ ಕಾರಣ : ಸಿದ್ದರಾಮಯ್ಯ

ಕಳೆದ ವರ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಕೆಲವು ಕೆಲಸಗಳ ವಿವರಗಳು:

● ಸರ್ಕಾರಿ ಶಾಲೆಗಳಲ್ಲಿ 13,181 ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ
● ಸರ್ಕಾರಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 15 ಲಕ್ಷದಿಂದ 17.7 ಲಕ್ಷಕ್ಕೆ ಏರಿಕೆ
● ಒಂದು ವರ್ಷದಲ್ಲಿ 126 ದೆಹಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸ್ಟಾರ್ಟಪ್‌ಗಳು ಹೂಡಿಕೆಯನ್ನು ಪಡೆದಿವೆ
● 6,823 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
● ದೆಹಲಿ ಕೌಶಲ್ಯ ಮತ್ತು ಉದ್ಯಮಶೀಲತಾ ವಿಶ್ವವಿದ್ಯಾಲಯದ 15 ಕ್ಯಾಂಪಸ್ ಪ್ರಾರಂಭ
● ದೆಹಲಿ ಕ್ರೀಡಾ ವಿಶ್ವವಿದ್ಯಾಲಯ (ಅಂದಾಜು 80 ಎಕರೆ) ಮತ್ತು ದೆಹಲಿ ಶಿಕ್ಷಕರ ವಿಶ್ವವಿದ್ಯಾಲಯ (ಸುಮಾರು 12 ಎಕರೆ) ಸ್ಥಾಪನೆ
● 31 ಸ್ಕೂಲ್ ಆಫ್ ಎಕ್ಸಲೆನ್ಸ್ ಗಳ (ಶಾಲೆಗಳ) 4,800 ಸೀಟುಗಳಿಗೆ ಸುಮಾರು 80,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ
● 20 ಸ್ಕೂಲ್ ಆಫ್ ಸ್ಪೆಷಲೈಸ್ಡ್ ಎಕ್ಸಲೆನ್ಸ್ (ಎಸ್ಒಎಸ್ಇ) ಗಳಿಗೆ 2,300 ವಿದ್ಯಾರ್ಥಿಗಳ ಪ್ರವೇಶ ಪಡೆದಿದ್ದಾರೆ
● ದೇಶದ ಮಾರ್ಗದರ್ಶಿ ಯೋಜನೆಯಡಿ 99,610 ದೆಹಲಿ ಸರ್ಕಾರಿ ವಿದ್ಯಾರ್ಥಿಗಳಿಗೆ 49,201 ಮಾರ್ಗದರ್ಶಕರು
● ದೇಶಭಕ್ತಿ ಪಠ್ಯಕ್ರಮವನ್ನು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಳವಡಿಸಲಾಗಿದೆ ಮತ್ತು ಮುಂದಿನ ವರ್ಷದಿಂದ ಖಾಸಗಿ ಶಾಲೆಗಳಲ್ಲಿ ಜಾರಿಗೆ ಬರಲಿದೆ
● ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ದೆಹಲಿ ಸರ್ಕಾರ ಎಲ್ಲಾ ಮೊಹಲ್ಲಾ ಕ್ಲಿನಿಕ್‌ಗಳ ಸಮೀಕ್ಷೆಯನ್ನು ಪ್ರತಿ 3 ತಿಂಗಳಿಗೊಮ್ಮೆ ನಡೆಸುತ್ತದೆ
● ದೆಹಲಿಯಲ್ಲಿ ಈಗ 520 ಮೊಹಲ್ಲಾ ಕ್ಲಿನಿಕ್‌ಗಳಿವೆ
● 520 ಮೊಹಲ್ಲಾ ಕ್ಲಿನಿಕ್‌ಗಳಲ್ಲಿ 1.44 ಕೋಟಿ ನಾಗರಿಕರು ಚಿಕಿತ್ಸೆ ಪಡೆದಿದ್ದಾರೆ
● ಪ್ರತಿ ದಿನ ಸುಮಾರು 60,000 ರೋಗಿಗಳು ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ ಮತ್ತು ಒಟ್ಟಾರೆ 90% ರಷ್ಟು ಜನರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ
● 85% ರೋಗಿಗಳು ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ವೈದ್ಯರನ್ನು ಭೇಟಿ ಮಾಡುವ ಮೊದಲು 20 ನಿಮಿಷಗಳಿಗಿಂತ ಕಡಿಮೆ ಸಮಯ ಕಾಯುತ್ತಾರೆ
● ಕೋವಿಡ್-19 ಲಸಿಕೆಯ ಮೊದಲ ಡೋಸ್‌ಗಳನ್ನು ದೆಹಲಿಯ ಅರ್ಹ ಜನಸಂಖ್ಯೆಯ 100% ರಷ್ಟು ಜನರಿಗೆ ನೀಡಿದ್ದು, 73% ಜನರು ಇಲ್ಲಿಯವರೆಗೆ ಎರಡನೇ ಡೋಸ್‌ಗಳನ್ನು ನೀಡಲಾಗಿದೆ
● ಎಲ್ಲಾ ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 13,844 ಹೊಸ ಹಾಸಿಗೆಗಳನ್ನು ಸೇರಿಸಲಾಗಿದೆ
● 38 ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 2 ಕೋಟಿ ರೋಗಿಗಳು ಆರೋಗ್ಯ ಸೇವೆಗಳನ್ನು ಪಡೆದುಕೊಂಡಿದ್ದಾರೆ
● 2,804 ನಾಗರಿಕರು 'ದಿಲ್ಲಿ ಕೆ ಫರಿಷ್ಟೆ' (ರಸ್ತೆ ಅಪಘಾತ ಸಂತ್ರಸ್ತರಿಗೆ) ಯೋಜನೆಯಡಿ ನಗದು ರಹಿತ ಚಿಕಿತ್ಸೆಯನ್ನು ಪಡೆದಿದ್ದಾರೆ
● 1.33 ಲಕ್ಷ ಸಿಸಿಟಿವಿಗಳನ್ನು ಸ್ಥಾಪಿಸಿದೆ
● 10,500 ಒಟ್ಟು ವೈಫೈ ಹಾಟ್‌ಸ್ಪಾಟ್‌ಗಳು ಕಾರ್ಯನಿರ್ವಹಿಸುತ್ತಿವೆ (2,000 ಹೊಸ ಹಾಟ್‌ಸ್ಪಾಟ್‌ಗಳು)
● ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳಲ್ಲಿ 5,679 ಮೇಲ್ಛಾವಣಿ ಸೌರ ಪಿವಿ ಸ್ಥಾವರಗಳನ್ನು ಸ್ಥಾಪಿಸಲಾಗಿದೆ
● 86.6% ಗ್ರಾಹಕರು ಶೂನ್ಯ ವಿದ್ಯುತ್ ಬಿಲ್ ಪಡೆದಿದ್ದಾರೆ (200 ಯೂನಿಟ್)
● 6 ಲಕ್ಷಕ್ಕೂ ಹೆಚ್ಚು ಗ್ರಾಹಕರು ಶೂನ್ಯ ನೀರಿನ ಬಿಲ್ ಪಡೆದಿದ್ದಾರೆ (20,000 ಲೀಟರ್)
● ಚಳಿಗಾಲದಲ್ಲಿ ಚಳಿ ತೀವ್ರತೆ ಗರಿಷ್ಠ ಮಟ್ಟ ತಲುಪಿದ ಸಮಯದಲ್ಲಿ 9,100 ಜನರು 205 ರಾತ್ರಿ ಆಶ್ರಯಗಳಲ್ಲಿ ಸೇವೆ ಪಡೆದಿದ್ದಾರೆ
● ಅರಣ್ಯ ಪ್ರದೇಶದಲ್ಲಿ 493 ಹೆಕ್ಟೇರ್ ಹಸಿರು ಹೊದಿಕೆ ಹೆಚ್ಚಿದೆ
● 36,000 ನಾಗರಿಕರು ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆಯ ಅಡಿಯಲ್ಲಿ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆಗಳನ್ನು ಕೈಗೊಂಡಿದ್ದಾರೆ
● ಮನೆ ಬಾಗಿಲಿಗೆ ಸಾರ್ವಜನಿಕ ಸೇವೆಗಳು ಯೋಜನೆಯಡಿಯಲ್ಲಿ 1.17 ಲಕ್ಷ ಸೇವೆಗಳನ್ನು ಪೂರೈಸಲಾಗಿದೆ
● ಮನೆ ಬಾಗಿಲಿಗೆ ಸಾರ್ವಜನಿಕ ಸೇವೆಗಳು ಯೋಜನೆಯ ಬಳಕೆಯಲ್ಲಿ 51.8% ಹೆಚ್ಚಳ
● 2021-22ರಲ್ಲಿ ದೆಹಲಿಯಲ್ಲಿ 3 ಕೋಟಿಗೂ ಹೆಚ್ಚು ಮಹಿಳೆಯರು ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ
● ಆಗಸ್ಟ್-ಡಿಸೆಂಬರ್ 2021ರ ಅವಧಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ಮುಖರಹಿತ ಸೇವೆಗಳ ಪ್ರಯೋಜನವನ್ನು ಸಾರಿಗೆ ಇಲಾಖೆ ನೀಡಿದೆ
● ದೆಹಲಿಯಲ್ಲಿ ಖರೀದಿಸಿದ ಒಟ್ಟು ವಾಹನಗಳಲ್ಲಿ ಸುಮಾರು 10% ರಷ್ಟು ವಿದ್ಯುತ್ ವಾಹನಗಳಾಗಿವೆ.

ಇದನ್ನೂ ಓದಿ-ಜೇಮ್ಸ್ ಸಿನಿಮಾ ಎತ್ತಂಗಡಿ ಮಾಡದಂತೆ ಪ್ರತಿಭಟನೆ - RRR ಪೋಸ್ಟರ್ ಕಿತ್ತುಹಾಕಿ ಕರವೇ ಆಕ್ರೋಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News