ನವದೆಹಲಿ: 'ಲವ್ ಜಿಹಾದ್' ಹೆಸರಿನಲ್ಲಿ ಮತಾಂತರ ಮಾಡಲು ಕೆಲವು ಶಕ್ತಿಗಳು ಸಂಘಟಿತವಾಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿ ಮಾಡಲು ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತ ಇರುವ ಕೆಲವು ರಾಜ್ಯ ಸರ್ಕಾರ ಮುಂದಾಗಿದ್ದವು. ಉತ್ತರ ಪ್ರದೇಶ ಸರ್ಕಾರ ಇಂಥದ್ದೊಂದು ಕಾನೂನು ಜಾರಿಗೆ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ ಇದಕ್ಕೆ ಪೂರಕ ಎಂಬಂತೆ ಕಳೆದ ತಿಂಗಳು ಅಲಹಾಬಾದ್ ಹೈಕೋರ್ಟ್​ನ ಏಕಸದಸ್ಯಪೀಠವು ಕೇವಲ ಮದುವೆಯ ಉದ್ದೇಶದಿಂದ ಮತಾಂತರವಾಗುವುದು ಸರಿಯಲ್ಲ ಎಂಬ ಮಹತ್ವದ ತೀರ್ಪನ್ನು ಕೂಡ ನೀಡಿತ್ತು.


COMMERCIAL BREAK
SCROLL TO CONTINUE READING

ಆದರೆ ಇದೀಗ ತೀರ್ಪು ಉಲ್ಟಾ ಆಗಿದೆ. ಹೈಕೋರ್ಟ್(High Court)​ನ ಏಕಸದಸ್ಯಪೀಠ ನೀಡಿದ್ದ ಈ ತೀರ್ಪನ್ನು ವಿಭಾಗೀಯ ಪೀಠವು ರದ್ದು ಮಾಡಿದೆ. ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡುವಲ್ಲಿ ವಯಸ್ಕರು ಸ್ವತಂತ್ರರಾಗಿದ್ದಾರೆ. ಆದ್ದರಿಂದ ಕೇವಲ ಮದುವೆಯ ಉದ್ದೇಶದಿಂದ ಮತಾಂತರವಾಗುವುದು ಮಾನ್ಯವಲ್ಲವೆನ್ನುವುದು ಸರಿಯಲ್ಲ. ಇದು ಅಷ್ಟೊಂದು ಉತ್ತಮ ಕಾನೂನು ಅಲ್ಲ ಎಂದಿದೆ.


PhonePe - ನೀವು ಕೇವಲ 1 ರೂಪಾಯಿಗೆ ಚಿನ್ನ ಖರೀದಿಸಲು ಇಲ್ಲಿದೆ ಅವಕಾಶ


ಈ ಹಿನ್ನೆಲೆಯಲ್ಲಿ ಲವ್​ ಜಿಹಾದ್​ ವಿರುದ್ಧ ಕಾನೂನು ಜಾರಿಗೆ ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಹಿನ್ನೆಡೆಯಾದಂತಾಗಿದೆ. ಜತೆಗೆ, ಕರ್ನಾಟಕ, ಮಧ್ಯಪ್ರದೇಶ, ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳು ಕೂಡ ಲವ್​ ಜಿಹಾದ್​ಗೆ ಸಂಬಂಧಿಸಿದಂತೆ ಕೆಲವೊಂದು ಕಾನೂನು ಜಾರಿಗೆ ತರಲು ಹೊರಟಿತ್ತು. ಇದೀಗ ಹೈಕೋರ್ಟ್​ನ ವಿಭಾಗೀಯ ಪೀಠ ನೀಡಿರುವ ತೀರ್ಪಿನಿಂದ ಸರ್ಕಾರಗಳು ಮತ್ತೊಮ್ಮೆ ಯೋಚಿಸುವಂತಾಗಿದೆ.


ನರೇಂದ್ರ ಮೋದಿ ಆಯ್ಕೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪು ಇಂದು ಪ್ರಕಟ


'ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಮತಾಂತರದ ವಿರುದ್ಧ ಕಾನೂನು ಸರಿಯಲ್ಲವೆಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡುವಲ್ಲಿ ವಯಸ್ಕರು ಸ್ವತಂತ್ರರಾಗಿದ್ದಾರೆ' ಎಂದು ಅಭಿಪ್ರಾಯಪಟ್ಟಿದೆ.


69 ಸಾವಿರ ಪೆಟ್ರೋಲ್ ಪಂಪ್‌ಗಳಲ್ಲಿ E-vehicle ಚಾರ್ಜಿಂಗ್ ಕಿಯೋಸ್ಕ್ ಅಳವಡಿಕೆ!


ಅಲಹಾಬಾದ್ ಹೈಕೋರ್ಟ್ ತನ್ನ ಹಿಂದಿನ ತೀರ್ಪನ್ನು ತಳ್ಳಿಹಾಕಿದ್ದು, ಮದುವೆಯ ಉದ್ದೇಶಕ್ಕಾಗಿ ಮತಾಂತರ ಸರಿಯಲ್ಲ ಎಂಬ ತೀರ್ಪನ್ನು ತಳ್ಳಿಹಾಕಿದೆ. ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ತರಲು ಮುಂದಾಗಿದ್ದು, ಇದೇ ಮಾದರಿಯಲ್ಲಿ ಬಿಜೆಪಿ ಆಡಳಿತದ ರಾಜ್ಯಗಳಾದ ಹರಿಯಾಣ, ಮಧ್ಯಪ್ರದೇಶ, ಕರ್ನಾಟಕದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರುವ ಬಗ್ಗೆ ಚರ್ಚೆ ನಡೆದಿದೆ.


Cyclone Nivar: ದಕ್ಷಿಣ ಭಾರತದ ಈ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ


ನ್ಯಾಯಮೂರ್ತಿಗಳಾದ ವಿವೇಕ್ ಅಗರವಾಲ್ ಮತ್ತು ಪಂಕಜ್ ನಖ್ವಿ ಅವರ ವಿಭಾಗೀಯ ಪೀಠ ಈ ಬಗ್ಗೆ ಮಾತನಾಡಿ, ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳಲು ವಯಸ್ಕರು ಸ್ವಾತಂತ್ರ್ಯ ಹೊಂದಿದ್ದಾರೆ. ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸುವ ಹಕ್ಕನ್ನು ಅತಿಕ್ರಮಿಸಲು ಆಗುವುದಿಲ್ಲ ಎಂದು ಹೇಳಲಾಗಿದೆ.


ಈ ರಾಜ್ಯ ಜೂನ್ ವರೆಗೆ ಎಲ್ಲರಿಗೂ ಮನೆಬಾಗಿಲಿಗೆ ಉಚಿತವಾಗಿ ಅಕ್ಕಿ ವಿತರಿಸಲಿದೆ ಸರ್ಕಾರ


ಸೆಪ್ಟೆಂಬರ್ 29 ರಂದು ನ್ಯಾಯಮೂರ್ತಿ ಮಹೇಶ್ ತ್ರಿಪಾಠಿ ಅವರ ನ್ಯಾಯಪೀಠ ಮದುವೆಯ ಉದ್ದೇಶದ ಮತಾಂತರ ಸರಿಯಲ್ಲವೆಂದು ಅಭಿಪ್ರಾಯಪಟ್ಟಿತ್ತು. ಇದಾದ ನಂತರ ಲವ್ ಜಿಹಾದ್ ವಿರುದ್ಧ ಕಾನೂನು ತರುವ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಬಿಜೆಪಿ ಆಡಳಿತದ ಅನೇಕ ರಾಜ್ಯಗಳ ನಾಯಕರು ಘೋಷಣೆ ಮಾಡಿದ್ದರು.


ಭಾರತದಲ್ಲಿ ಫೆಬ್ರುವರಿವರೆಗೆ Corona Vaccine ಸಿಗುವ ಸಾಧ್ಯತೆ, ಬೆಲೆ ಎಷ್ಟು ಇಲ್ಲಿದೆ ವಿವರ