LPG Cylinder:ಅಡುಗೆ ಅನಿಲ ಸಿಲಿಂಡರ್ ನಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಕೇಂದ್ರ, ಮಹಿಳೆಯರಿಗೆ ಸಿಗಲಿದೆ ಲಾಭ
LPG Gas Cylinder Price: ಮಹಿಳೆಯರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ (Central Government) ಎಲ್ ಪಿಜಿ ಸಿಲಿಂಡರ್ ತೂಕ ಇಳಿಸಲು ಮುಂದಾಗಿದೆ.
LPG Gas Cylinder: ದೇಶಾದ್ಯಂತದ ಮಹಿಳೆಯರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಎಲ್ ಪಿಜಿ ಸಿಲಿಂಡರ್ ತೂಕ ಇಳಿಸಲು ಮುಂದಾಗಿದೆ. 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೂಕದಿಂದಾಗಿ, ಅದರ ಸಾಗಣೆಯಲ್ಲಿ ಮಹಿಳೆಯರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಅದರ ತೂಕ ಇಳಿಕೆ ಮಾಡುವುದು ಸೇರಿದಂತೆ ವಿವಿಧ ಆಯ್ಕೆಗಳನ್ನು ಪರಿಗಣಿಸುತ್ತಿದೆ.
ರಾಜ್ಯಸಭೆಗೆ ಮಾಹಿತಿ (LPG Cylinder Price)
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಸಿಲಿಂಡರ್ ಭಾರವಾಗಿರುವುದರಿಂದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಸದಸ್ಯರೊಬ್ಬರು ಪ್ರಸ್ತಾಪಿಸಿದ್ದರು. .ಇದಕ್ಕೆ ಪ್ರತಿಕ್ರಿಯಿಸಿದ ಪುರಿ, ‘ಮಹಿಳೆಯರು ಮತ್ತು ಹೆಣ್ಣುಮಕ್ಕಳು ಸಿಲಿಂಡರ್‌ನ ಭಾರವನ್ನು ಹೊತ್ತು ಕೊಳ್ಳುವುದನ್ನು ನಾವು ಬಯಸುವುದಿಲ್ಲ. ಹೀಗಾಗಿ ಅದರ ತೂಕ ಇಳಿಕೆಯ ಕುರಿತು ಚಿಂತನೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಇದುವರೆಗೆ 8.8 ಕೋಟಿ ಸಂಪರ್ಕಗಳನ್ನು ನೀಡಲಾಗಿದೆ
"14.2 ಕೆ.ಜಿ ತೂಕವನ್ನು 5 ಕೆ.ಜಿಗೆ ಇಳಿಸುವುದೋ ಅಥವಾ ಇನ್ನಾವುದಾದರೂ ಮಾರ್ಗವನ್ನು ಕಂಡುಕೊಳ್ಳಬೇಕು ಎಂಬುದರ ಕುರಿತು ನಾವು ಆಲೋಚಿಸುತ್ತಿದ್ದು, ಅದಕ್ಕೆ ನಾವು ಬದ್ಧರಾಗಿದ್ದೇವೆ" ಎಂದು ಅವರು ಹೇಳಿದ್ದಾರೆ. ತೈಲ ಮಾರುಕಟ್ಟೆ ಕಂಪನಿಗಳು ಉಜ್ವಲ 2.0 ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ದೇಶಾದ್ಯಂತ 8.8 ಕೋಟಿ LPG ಸಂಪರ್ಕಗಳನ್ನು ನೀಡಿವೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.
ಇದನ್ನೂ ಓದಿ-ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, 20 ವರ್ಷ ಉಚಿತ ವಿದ್ಯುತ್ ಪಡೆಯಿರಿ
ಯೋಜನೆಯು 2016 ರಲ್ಲಿ ಆರಂಭಗೊಂಡಿದೆ
ದೇಶಾದ್ಯಂತ ಬಡ ಕುಟುಂಬಗಳ ವಯಸ್ಕ ಮಹಿಳಾ ಸದಸ್ಯರ ಹೆಸರಿನಲ್ಲಿ ಯಾವುದೇ ಡಿಪಾಸಿಟ್ ಇಲ್ಲದೆ ಎಂಟು ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು (LPG Gas Connection) ಬಿಡುಗಡೆ ಮಾಡಲು ಪಿಎಂಯುವೈ ಯೋಜನೆಯನ್ನು ಮೇ 1, 2016 ರಂದು ಆರಂಭಿಸಲಾಗಿತ್ತು ಮತ್ತು ಈ ಯೋಜನೆಯ ಗುರಿಯನ್ನು ಸೆಪ್ಟೆಂಬರ್, 2019 ರಲ್ಲಿ ಸಾಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Omicron ಕುರಿತು ಟೆನ್ಶನ್ ಹೆಚ್ಚಿಸುವ ವರದಿ ಬಹಿರಂಗ, ಹೊಸ ರಿಪೋರ್ಟ್ ಹೇಳಿದ್ದಾದರೂ ಏನು?
ಉಜ್ವಲಾ 2.0 ಆಗಸ್ಟ್ 10 ರಂದು ಆರಂಭಗೊಂಡಿದೆ
ಇದರ ಜೊತೆಗೆ, ಉಜ್ವಲ 2.0 ಅನ್ನು ಈ ವರ್ಷ ಆಗಸ್ಟ್ 10 ರಂದುಆರಂಭಿಸಲಾಗಿದ್ದು, ಯಾವುದೇ ರೀತಿಯ ಡಿಪಾಸಿಟ್ ಇಲ್ಲದೆ ಒಂದು ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪುರಿ ಹೇಳಿದ್ದಾರೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ತೈಲ ಮಾರಾಟ ಕಂಪನಿಗಳು ಪಿಎಂಯುವೈ ಅಡಿಯಲ್ಲಿ ಒಟ್ಟು 1.64 ಲಕ್ಷ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದ್ದು, ಎಲ್‌ಪಿಜಿ ಸಂಪರ್ಕಗಳನ್ನು ನೀಡುವುದು ನಿರಂತರ ಪ್ರಕ್ರಿಯೆಯಾಗಿದ್ದು, ಎಲ್‌ಪಿಜಿ ವಿತರಕರು ಹೊಸ ಎಲ್‌ಪಿಜಿ ಸಂಪರ್ಕಕ್ಕಾಗಿ ಯಾವುದೇ ವಿನಂತಿಯನ್ನು ತಕ್ಷಣ ನೋಂದಾಯಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Time Traveller Alert! ಡಿಸೆಂಬರ್ 25ರಂದು ಸಂಭವಿಸಲಿರುವ ಈ ಘಟನೆಯಿಂದ ವಿಶ್ವವೇ ಬದಲಾಗಲಿದೆಯಂತೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.